Mysore News : ಕಾವೇರಿ ಕಿಚ್ಚು ನಿಲ್ಲುತ್ತಿಲ್ಲ ಬೆಂಗಳೂರು ಬಂಸ್ ಯಶಸ್ವಿ ಯಾಯಿತು. ಇದೀಗ ಮೈಸೂರಿನಲ್ಲಿ ಹೋರಾಟ ಮುಂದುವರೆದಿದೆ. ವಿನೂತನ ಪ್ರತಿಭಟನೆಗೆ ಕನ್ನಡಿಗರು ಅಣಿಯಾಗಿದ್ದಾರೆ.
ಮತ್ತೆ ತಮಿಳುನಾಡಿಗೆ ನೀರು ಬಿಡುವಂತೆ CWRC ಆದೇಶ ಹೊರಡಿಸಿರುವ ಹಿನ್ನೆಲೆ ಮೈಸೂರಿನಲ್ಲಿ ಕಾವೇರಿಗಾಗಿ ಹೋರಾಟ ಮುಂದುರೆದಿದೆ . ಕರ್ನಾಟಕ ಪ್ರಜಾಪಾರ್ಟಿ ವತಿಯಿಂದ ವಿನೂತನ ಪ್ರತಿಭಟನೆ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಅಂಚೆ ಚಳುವಳಿ ಮೂಲಕ ಆಕ್ರೋಶ ಹೊರ ಹಾಕಲಾಗುತ್ತಿದೆ. ಇನ್ನು ಮತ್ತೊಂದೆಡೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಜಿಲ್ಲಾ ಪಂಚಾಯತ್ ಮುಂಭಾಗ ಪ್ರತಿಭಟನೆ ನಡೆಯುತ್ತಿದೆ.
ಮತ್ತು ಮೈಸೂರಿನ ಗಾಂಧಿ ವೃತ್ತದಲ್ಲಿ ಜೆಡಿಎಸ್ನಿಂದ ಧರಣಿ ನಡೆಯುತ್ತಿದೆ. ಕರ್ನಾಟಕ ಪ್ರಜಾಪಾರ್ಟಿ ಪಕ್ಷದ ರಾಜ್ಯಾಧ್ಯಕ್ಷ ವಕೀಲ ಶಿವಣ್ಣ ರವರ ನೇತೃತ್ವದಲ್ಲಿ ಅಂಚೆ ಚಳುವಳಿ ನಡೆಯುತ್ತಿದ್ದು ಕಾರ್ಯಕರ್ತರೆಲ್ಲ ಸೇರಿಕೊಂಡು ದೆಹಲಿಯ ಪ್ರಧಾನಿಗಳ ಕಚೇರಿಗೆ ಅಂಚೆ ಪೋಸ್ಟ್ ಮಾಡಿದ್ದಾರೆ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡುಗಡೆ ಮಾಡಬಾರದು.
ಕಾವೇರಿ ವಿಚಾರದಲ್ಲಿ ಪ್ರಧಾನಿಗಳು ಮಧ್ಯ ಪ್ರವೇಶ ಮಾಡಬೇಕು. ಈ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ರಾಜ್ಯದಿಂದ ಮತ್ತೆ ನೀರು ಹರಿಸಿದರೆ ಮುಂದಿನ ದಿನಗಳಲ್ಲಿ ಬೆಂಗಳೂರಿನ ರಾಜಭವನಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
Flypver: ಚೆನ್ನಮ್ಮ ಸರ್ಕಲ್ ಬಳಿ ಪ್ಲೈಓವರ್ ನಿರ್ಮಾಣದ ಪಿಐಎಲ್ ರದ್ದು: ಹೈ ಕೋರ್ಟ್ ಆದೇಶ..!
Doctors: ಉಸಿರು ನಿಲ್ಲಿಸಿದ ವ್ಯಕ್ತಿ ಪವಾಡವೆಂಬಂತೆ ಬದುಕುಳಿದಿದ್ದು ಹೇಗೆ ?