ಎಕ್ಸಾಂ ಬರೆಯದಿದ್ದರೂ ಪದವಿ ವಿದ್ಯಾರ್ಥಿಗಳು ಪಾಸ್..!

ಕರ್ನಾಟಕ ಟಿವಿ : ಇನ್ನು ಲಾಕ್ ಡೌನ್ ಹಿನ್ನೆಲೆ ದೇಶಾದ್ಯಂತ ಶೈಕ್ಷಣಿಕ ಪರಿಸ್ಥಿತಿ ಅಲ್ಲೋಲ ಕಲ್ಲೋಲವಾಗಿದೆ.. ಬಹುತೇಕ 10ನೇ ತರಗತಿ ಹೊರತುಪಡಿಸಿ ಪ್ರಾಥಮಿಕ ಹಾಗೂ ಹೈಸ್ಕೂಲ್ ವಿದ್ಯಾರ್ಥಿಗಳನ್ನ ಎಕ್ಸಾಂ ಬರೆಯದೆ ಮುಂದಿನ ತರಗತಿಗಳಿಗೆ ಪಾಸ್ ಮಾಡಲಾಗಿದೆ. ಇದೀಗ ಮಹಾರಾಷ್ಟ್ರ ಸರ್ಕಾರ ಫೈನಲ್ ಇಯರ್ ಪದವಿ ವಿದ್ಯಾರ್ಥಿಗಳನ್ನ ಹೊರತುಪಡಿಸಿ ಮೊದಲ ಹಾಗೂಎರಡನೇ ವರ್ಷದ ಪದವಿ ವಿದ್ಯಾರ್ಥಿಗಳನ್ನ ಪಾಸ್ ಎಂದು ಘೋಷಿಸಿ ಮುಂದಿನ ತರಗತಿಗೆ ಅರ್ಹರನ್ನಾಗಿ ಮಾಡಿದೆ..  ಈ ವಿಷಯವನ್ನ ಮಹಾರಾಷ್ಟ್ರ ಉನ್ನತ ಶಿಕ್ಷಣ ಸಚಿವ ಉದಯ್ ಸಾಮಂತ್ ಘೋಷಿಸಿದ್ದಾರೆ.

About The Author