Friday, July 11, 2025

Latest Posts

ಹಳೇ ಹುಬ್ಬಳ್ಳಿ ಗಲಾಟೆ ಪ್ರಕರಣ ಕೈ ಬಿಡುವಂತೆ ಪ್ರಭಾವಿ ಸಚಿವರ ಪತ್ರ..!

- Advertisement -

ಬೆಂಗಳೂರು: ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಮುಂಭಾಗ ನಡೆದಿದ್ದ ಪ್ರಕರಣವನ್ನು ಕೈ ಬಿಡುವಂತೆ ಪ್ರಭಾವಿ ಸಚಿವರೊಬ್ಬರು ಸರ್ಕಾರಕ್ಕೆ ಪತ್ರ ಬರೆದಿದ್ದಾರಂತೆ. ಈ ಶಿಫಾರಸ್ಸು ಪತ್ರ ಆಧರಿಸಿ ಕಾನೂನು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಅವರು ಅಭಿಪ್ರಾಯ ಕೇಳಿ ಹುಬ್ಬಳ್ಳಿ-ಧಾರವಾಡ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ದಾಖಲೆ ಸಹಿತ ಮಾಹಿತಿ ನೀಡುವಂತೆ ಹೀತೇಂದ್ರ ಕೇಳಿದ್ದಾರೆ.

2022 ಏಪ್ರಿಲ್ 16 ಠಾಣೆ ಎದುರಿನಲ್ಲಿಯೇ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನರ ಗುಂಪು ಪ್ರಚೋದನಕಾರಿ ಭಾಷಣ ಮಾಡಿತ್ತು. ಪ್ರಚೋದನಕಾರಿ ಭಾಷಣದಿಂದ ಉದ್ರಿಕ್ತರಾದ ಜನರು ಕಲ್ಲು ತೂರಾಟ ನಡೆಸಿ ವಾಹನಗಳನ್ನು ಜಖಂಗೊಳಿಸಲಾಗಿದ್ದರು. ನಂತರ ಪೊಲೀಸ್ ವಾಹನಗಳನ್ನು ಪಲ್ಟಿ ಮಾಡಲಾಗಿತ್ತು.

ಈ ಗಲಾಟೆಯಲ್ಲಿ ಪೊಲೀಸ್ ಸಿಬ್ಬಂದಿಗೆ ಕಲ್ಲೇಟು ಬಿದ್ದಿತ್ತು. ರಕ್ತ ಸುರಿಯುತ್ತಿದ್ರೂ ಪೊಲೀಸರು ಪಟ್ಟಿ ಕಟ್ಟಿಕೊಂಡು ರಸ್ತೆಗೆ ಇಳಿದು ಗಲಾಟೆ ನಿಯಂತ್ರಣಕ್ಕೆ ತಂದಿದ್ದರು. ಇದೀಗ ಈ ಪ್ರಕರಣ ಹಿಂಪಡೆಯುವಂತೆ ಸಚಿವರು ಪತ್ರ ಬರೆದಿದ್ದಾರೆ ಎಂದು  ವರದಿಯಾಗಿದೆ.

ಪತ್ರ ಬರೆದಿದ್ದು ಯಾರು?

ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದ ಆರೋಪಿಗಳ ಖುಲಾಸೆಗಾಗಿ ಡಿಸಿಎಂ ಡಿಕೆ ಶಿವಕುಮಾರ್ ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ. ಈ ಪ್ರಕರಣದಲ್ಲಿ 158 ಜನರನ್ನ ಬಂಧಿಸಲಾಗಿದ್ದು, ಇದುವರೆಗೂ ಅಪ್ರಾಪ್ತರು ಸೇರಿದಂತೆ ಏಳು ಜನರಿಗೆ ಮಾತ್ರ ಜಾಮೀನು ಸಿಕ್ಕಿದೆ. ಈಗಾಗಲೇ ಸಾವಿರಾರು ಪುಟಗಳ ಆರೋಪಪಟ್ಟಿಯನ್ನು ಸಹ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಸಾವಿರಾರು ಜನರು ಏಕಕಾಲಕ್ಕೆ ಠಾಣೆ ಮುಂದೆ ಜಮಾಯಿಸಿ ಗಲಭೆ ಸೃಷ್ಟಿಸಿದ್ದರು. ಗಲಭೆ ಸೃಷಿಸಿದವರ ಮೇಲೆ ಒಟ್ಟು 12 ಎಫ್ಐಆರ್ ದಾಖಲಾಗಿದ್ದವು. 158 ಆರೋಪಿಗಳನ್ನು ಹಳೆ ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದರು.

ಹುಬ್ಬಳ್ಳಿ ಗಲಾಟೆ

AIMIM ಪಕ್ಷದ ಕಾರ್ಪೋರೇಟರ್ ನಜೀರ್ ಹೊನ್ಯಾಳ ಮತ್ತು 7 ಜನ ಬಾಲಾಪರಾಧಿಗಳಿಗೆ ಮಾತ್ರ ಷರತ್ತುಬದ್ಧ ಜಾಮೀನು ದೊರೆತಿತ್ತು. ಉಳಿದ ಆರೋಪಿಗಳು ಇನ್ನು ಬಳ್ಳಾರಿ ಹಾಗೂ ಕಲಬುರಗಿ ಜೈಲಿನಲ್ಲಿದ್ದಾರೆ.

ಇಂತಹ ಗಂಭೀರವಾದ ಪ್ರಕರಣವನ್ನು ಮುಚ್ಚಿ ಹಾಕಲು ಕಾಂಗ್ರೆಸ್ ಸರ್ಕಾರ ಮುಂದಾಯ್ತಾ? ಈ ಮೂಲಕ ಮುಸ್ಲಿಮರ ಓಲೈಕೆಗೆ ಮುಂದಾಗಿದೆಯಾ ಎಂಬ ಪ್ರಶ್ನೆಗಳು ಮೂಡಿವೆ.

ಕಲ್ಲು ತೂರಾಟ, ವಾಹನಗಳು ಜಖಂ

ಆಸ್ಪತ್ರೆ, ದೇವಸ್ಥಾನ, ಮನೆಗಳ‌ ಮೇಲೆ ದೊಡ್ಡ ದೊಡ್ಡ ಕಲ್ಲು ಎಸೆದಿದ್ದರು. ಘಟನೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಸೇರಿ ಎಂಟು ಸಿಬ್ಬಂದಿ ಗಾಯಗೊಂಡಿದ್ದರು. ಹತ್ತಕ್ಕೂ ಹೆಚ್ಚು ಪೊಲೀಸ್ ವಾಹನಗಳು ಜಖಂಗೊಂಡಿದ್ದವು. ಈ ವೇಳೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದರು.

ಈ ಹಿಂದೆ ತನ್ವೀರ್ ಸೇಠ್ ಪತ್ರ

ಈ ಹಿಂದೆ ಸಚಿವ ತನ್ವೀರ್ ಸೇಠ್, ಡಿಜೆ-ಕೆಜೆ ಹಳ್ಳಿ ಗಲಭೆಯಲ್ಲಿನ ಅಮಾಯಕರ ಮೇಲಿನ ಪ್ರಕರಣ ಕೈ ಬಿಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಪತ್ರ ಬರೆದಿದ್ದು ನಿಜ ಎಂದು ಗೃಹಸಚಿವ ಜಿ.ಪರಮೇಶ್ವರ್ ನಿಜ ಎಂದು ಒಪ್ಪಿಕೊಂಡಿದ್ದರು. ಪತ್ರ ಬಂದಿದ್ದು ನಿಜ, ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಹೇಳಿದ್ದರು.

Road cross; ರಸ್ತೆ ದಾಟುವ ವೇಳೆ ವಾಹನ ಡಿಕ್ಕಿ ಅಪರಿಚಿತ ಜೀವಾಂತ್ಯ..!

ಕರ್ನಾಟಕವನ್ನು ಗೂಂಡಾ ರಾಜ್ಯ ಮಾಡಲು ಕಾಂಗ್ರೆಸ್ ಪಣ-ಪ್ರಲ್ಹಾದರ್ ಜೋಶಿ ಅಸಮಾಧಾನ

Earth Quake: ದೆಹಲಿಯಲ್ಲಿ ಭೂಕಂಪ; ಆತಂಕದಲ್ಲಿ ಜನ..!

- Advertisement -

Latest Posts

Don't Miss