ಮಾಲೀಕರಿಗಾಗಿ ಕಾರ್ಮಿಕರ ಹಕ್ಕನ್ನ ಕಸಿಯೋದು ಸರೀನಾ..?

ಕರ್ನಾಟಕ ಟಿವಿ : ಲಾಕ್ ಡೌನ್ ಹಿನ್ನೆಲೆ ದೆಶದಲ್ಲಿ 50% ಗಿಂತ ಹೆಚ್ಚು ಕಂಪನಿಗಳು ಸಂಬಳ ಕೊಟ್ಟಿಲ್ಲ.. ಸರ್ಕಾರ ಬಿಗಿಯಾಗಿ ಉದ್ಯಮಿಗಳಿಗೆ ಹೇಳುವ ಧೈರ್ಯವನ್ನೂ ಮಾಡ್ತಿಲ್ಲ..ಆದ್ರೆ ಇದೀಗ ಉತ್ತರಪ್ರದೇಶ ಸರ್ಕಾರ ಕಾರ್ಮಿಕರ ಹಕ್ಕುಗಳನ್ನ 3 ವರ್ಷ ಮೊಟಕುಗೊಳಿಸಿದೆ.. ಕೈಗಾರಿಕೆಗಳನ್ನ ಆಕರ್ಷಿಸುವ ದೃಷ್ಟಿಯಲ್ಲಿ ಕಠಿಣವಾಗಿದ್ದ ಕಾರ್ಮಿಕ ಪರವಾದ ಕಾನೂನುಗಳನ್ನ  ಮೂರು ವರ್ಷಗಳ ಕಾಲ ಉತ್ತರಪ್ರದೇಶ ಸಿಎಂ ಹಲ್ಲಿಲ್ಲದ ಹಾವಿನಂತೆ ಮಾಡಿದ್ದಾರೆ.. ಈ ಮೊದಲು ದಿನಕ್ಕೆ 12 ಗಂಟೆ ದುಡಿಯಬೇಕು ಅನ್ನುವ ನಿರ್ದೇಶ ನೀಡಿದ್ದ ಪಂಜಾಬ್ ಮಧ್ಯಪ್ರದೇಶ ಸಹ ಯೋಗಿ ಹಾದಿಯನ್ನೆ ಅನುಸರಿಸಲು ಮುಂದಾಗಿದ್ದು ಕಾರ್ಮಿಕರಿಗೆ ಎಳ್ಳಷ್ಟು ಪವರ್ ಇಲ್ಲದಂತೆ ಮಾಡ್ತಿದ್ದಾರೆ. ಅಷ್ಟಕ್ಕೂ ಯೋಗಿ ಆದಿತ್ಯನಾಥ್ ಮಾಡಿದ್ದೇನು ಅಂದ್ರೆ,  ಕಾರ್ಮಿಕರ ಸುರಕ್ಷತೆ, ಗುತ್ತಿಗೆ ನೌಕರರ ಹಕ್ಕುಗಳು, ಸರಿಯಾದ ಸಮಯಕ್ಕೆ ಸಂಬಳ ಕೇಳುವ ಹಕ್ಕು ಎಲ್ಲವನ್ನೂ ಉತ್ತರಪ್ರದೇಶ ರ ಸರ್ಕಾಕಸಿದುಕೊಂಡಿದೆ..

About The Author