Elephant: ವಿದ್ಯುತ್ ತಂತಿ ತಗುಲಿ ಆನೆ ಸಾವು..!

ಹುಣಸೂರು: ನಾಗರಹೊಳೆ ಉದ್ಯಾನದ ಮೇಟಿಕುಪ್ಪೆ ವಲಯದಂಚಿನ ಜಮೀನಿಗೆ ಅಳವಡಿಸಿದ್ದ ಅಕ್ರಮ ವಿದ್ಯುತ್ ತಂತಿಗೆ ಸಿಲುಕಿ ಸುಮಾರು 25 ವರ್ಷದ ಮಖನಾ ಆನೆ ಸಾವನ್ನಪ್ಪಿದೆ.

ನಾಗರಹೊಳೆ ಉದ್ಯಾನದ ಮೇಟಿಕುಪ್ಪೆ ವಲಯದಂಚಿನ ಜಿ.ಎಂ.ಹಳ್ಳಿಯ ಜಮೀನೊಂದರಲ್ಲಿ ಈ ಘಟನೆ ನಡೆದಿದ್ದು, ಘಟನೆಯ ನಂತರ ಜಮೀನು ಮಾಲಿಕ ತಲೆಮರೆಸಿಕೊಂಡಿದ್ದಾರೆ.

ನಾಗರಹೊಳೆ ಪಶು ವೈದ್ಯ ಡಾ.ರಮೇಶ್ ಮೃತ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದರು. ಎಸಿಎಫ್ ರಂಗಸ್ವಾಮಿ, ಆರ್.ಎಫ್.ಓ.ಗಳಾದ ಹರ್ಷಿತ್ ಗೌಡ, ಪೂಜಾ ಭೇಟಿ ನೀಡಿ ಪರಿಶೀಲಿಸಿದರು.

ಘಟನೆಯ ಕುರಿತು ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಲಿಂಗ ವ್ಯಕ್ತಿಗಳಾಗಿ ಬದಲಾಗಲು ಕಾರಣವೇನು..?

ಚಟ ಅಂದ್ರೇನು..? ಮಾನಸಿಕ ರೋಗದ ಬಗ್ಗೆ ವೈದ್ಯರಿಂದ ವಿವರಣೆ..

Bigg Boss : ಬಿಗ್ ಬಾಸ್ ಗೆ ಬರ್ತಾರಾ ಡಾಕ್ಟರ್ ಬ್ರೋ ..?

About The Author