ಕರ್ನಾಟಕ ಟಿವಿ : ರಾಜ್ಯದಲ್ಲಿ ಕೊರೊನಾ ಶಕ್ತಿಕಳೆದುಕೊಳ್ತು ಅಂದು ಕೊಳ್ಳವಷ್ಟರಲ್ಲಿ ಮತ್ತೆ ಬಿರುಗಾಳಿ ರೀತಿ ಅಬ್ಬರಿಸುತ್ತಿದೆ. ಕಳೆದ 72 ಗಂಟೆಗಳಲ್ಲಿ 100 ಕ್ಕೂ ಅಧಿಕ ಜನರಲ್ಲಿ ಸೋಂಕು ಪತ್ತೆಯಾಗಿದೆ. ಇಂದು ಒಂದೇ ದಿನ 54 ಜನರಲ್ಲಿ ಸೋಂಕು ಪತ್ತೆಯಾಗಿದೆ.. ಬೆಳಗಾವಿಯಲ್ಲಿ ಇಂದು ಒಂದೇ ದಿನ 10 ಪ್ರಕರಣ ಪತ್ತೆಯಾಗಿದ್ದು ಗ್ರೀನ್ ಝೋನ್ ಶಿವಮೊಗ್ಗದಲ್ಲಿ ಒಂದು 8 ಪ್ರಕರಣ ಪತ್ತೆಯಾಗಿದ್ದು ಮತ್ತಷ್ಟ ಆತಂಕಕ್ಕೆ ಕಾರಣವಾಗಿದೆ. ಬಾಗಲಕೋಟೆ, ಕಲನುರಗಿಯಲ್ಲಿ ತಲಾ ಮೂರು ಪ್ರಕರಣಗಳು ಪತ್ತೆಯಾಗಗಿದ್ದು ಬೆಂಗಳೂರು ನಗರದಲ್ಲಿ 2, ಚಿಕ್ಕಬಳ್ಳಾಪುರದಲ್ಲಿ 1 ಪ್ರಕರಣ ಪತ್ತೆಯಾಘಿದೆ. ಈ ಮೂಲಕ ರಾಜ್ಯದಲ್ಲಿ 848 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು 31 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಈ ನಡುವೆ ಖುಷಿ ವಿಷಯ ಅಂದ್ರೆ 405 ಮಂದಿ ಗುಣಮುಖರಾಗಿದ್ದಾರೆ.




