ಹುಬ್ಬಳ್ಳಿ: ಕ್ರಿಕೆಟ್ ಆಟ ಶುರುವಾದರೆ ಸಾಕು ಬೆಟ್ಟಿಂಗ್ ದಂಧೆ ಬೇಲಿ ದಾಟಿ ಬಿಡುತ್ತದೆ. ಹುಬ್ಬಳ್ಳಿಯಲ್ಲಿ ಇದೆ ವಿಚಾರವಾಗಿ ಕಾರ್ಯಚರಣಗೆ ಇಳಿದ ಸಿಸಿಬಿ ಪೊಲೀಸರು ಮೂವರು ಬೆಟ್ಟಿಂಗ್ ಕುಳಗಳನ್ನು ಬಂಧಿಸಿದ್ದಾರೆ.
ನಿನ್ನೆ ನಡೆದ ದಕ್ಷಿಣ ಆಫ್ರಿಕಾ ನೆದರ್ ಲೆಂಡ್ ಕ್ರಿಕೆಟ್ ಮ್ಯಾಚ್ ವೇಳೆ ಬೆಟ್ಟಿಂಗ್ ನಲ್ಲಿ ಭಾಗಿಯಾಗಿದ್ದ ಮೂವರ ಬಂಧನವಾಗಿದ್ದು ,ಇಬ್ಬರು ಪರಾರಿಯಾಗಿದ್ದಾರೆ. ಇನ್ನು ಬಂಧಿತರಿಂದ 2 ಲಕ್ಷ 39 ಸಾವಿರ ಹಣ ಹಾಗೂ ವಿವಿಧ ಕಂಪನಿಯ ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಹುಬ್ಬಳ್ಳಿಯ ಡಾಕಪ್ಪ ಸರ್ಕಲ್ ನಲ್ಲಿ ಐವರು ಬೆಟ್ಟಿಂಗ್ ನಲ್ಲಿ ತೊಡಗಿದ್ದು ನವೀನ್ ಮಹಮ್ಮದ್ ಪವನ್ ಬಂದಿತ ಆರೋಪಿಗಳು . ಆದರೆ ಸಂತೋಷ್ ಹಾಗೂ ಗಿರೀಶ್ ಪರಾರಿಯಾಗಿದ್ದಾರೆ.
ಹುಬ್ಬಳ್ಳಿ ಕಮರಿಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ನವರಾತ್ರಿ ಬನ್ನಿ ಪೂಜೆಗೆ ತೆರಳುವ ಮಹಿಳೆಯರನ್ನು ಟಾರ್ಗೆಟ್ ಮಾಡಿದ ಕಳ್ಳರು..!
ಕಳ್ಳರನ್ನು ಹಿಡಿಯುವವರು ಪೋಲಿಸರು. ಆದರೆ ಪೊಲಿಸರೇ ಕಳ್ಳರಾದಾಗ ಯಾರು ಹಿಡಿಯಬೇಕು?

