- Advertisement -
ಹುಬ್ಬಳ್ಳಿ: ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವುದು ಗಾದೆ, ಆ ಪ್ರಕಾರ ಜೀವನ ಸಾಗಿಸಿದರೆ ಯಾವುದೇ ತೊಂದರೆ ಇರುವುದಿಲ್ಲ. ಆದರೆ ಅದಕ್ಕಿಂತ ಜಾಸ್ತಿ ಆಸೆ ಪಟ್ಟರೆ ಜೀವಾಂತ್ಯ. ಸಾಲ ಸಿಗುತ್ತದೆಂದು ಆಸೆ ತೀರಿಸಿಕೊಳ್ಳಲು ದುಡುಮೆಗಿಂತ ಜಾಸ್ತಿ ಸಾಲ ಮಾಡಿದರೆ ಕೊನೆಗೆ ಆತ್ಮಹತ್ಯೆಯೇ ಗತಿ. ಇಲ್ಲೊಬ್ಬ ಉದ್ಯಮಿ ಸಾಲದ ಭಾದೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನಗರದ ಶ್ರೀ ನಿಧಿ ಸ್ಟೀಲ್ ವರ್ಕ್ನ ಮಾಲಿಕ ರವಿ ಮುರಗೋಡ್ ಎನ್ನುವ ಉದ್ಯಮಿ ಸಾಲದ ಬಾಧೆ ತಾಳಲಾಗದೆ ಬೇಸತ್ತು ಗೋಕುಲ್ ರಸ್ತೆಯ ಇಂಡಸ್ಟ್ರಿಯಲ್ ಎಸ್ಟೇಟ್ನಲ್ಲಿ ಕೈಗಾರಿಕಾ ಪ್ರದೇಶದ ವರ್ಕಶಾಪ್ನಲ್ಲಿ ನೇಣಿಗೆ ಶರಣಾಗಿದ್ದಾನೆ. ಈ ಘಟನೆ ಕುರಿತು ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಕಾಂಗ್ರೆಸ್ ಗೆದ್ದರೆ ಕರ್ನಾಟಕವನ್ನು ಎಟಿಎಂ ಮಾಡುತ್ತೆ ಅಂತಾ ಹೇಳಿದ್ವಿ. ಅದು ಈಗ ನಿಜವಾಗಿದೆ’
- Advertisement -