Monday, April 14, 2025

Latest Posts

ಗ್ಯಾಸ್ ಸಿಲಿಂಡರ್ ಲೀಕ್: ಬಾರಿ ಅನಾಹುತ ತಪ್ಪಿಸಿದ ಅಗ್ನಿಶಾಮಕ ದಳ

- Advertisement -

ಹುಬ್ಬಳ್ಳಿ: ಸಿಲಿಂಡರ್ ಬಳಕೆ ಮಾಡುವಾಗ ಎಷ್ಟೇ ಎಚ್ಚರವಾಗಿದ್ದರೂ ಜಾಗರೂಕತೆಯಿಂದ ಬಳಕೆ ಮಾಡಿದರೂ ಅಚಾತೂರ್ಯ ನಡೆಯುತ್ತಿರುತ್ತವೆ. ಇಂತಹುದೇ ಘಟನೆಯೊಂದು ಹುಬ್ಬಳ್ಳಿಯಲ್ಲಿ ನಡೆದಿದೆ. ಸಿಲಿಂಡರ್ ಲೀಕ್ ಆಗಿ ಬೆಂಕಿ ಹೊತ್ತಿಕೊಂಡ ಜನರಲ್ಲಿ ಕೆಲಕಾಲ ಗೊಂದಲ ಸೃಷ್ಠಿ ಮಾಡಿತ್ತು.

ನಗರದ ಜಂಗ್ಲಿ ಪೇಟೆಯಲ್ಲಿ ವಾಸವಾಗಿರುವ ಸುಮಿತ್ರಮ್ಮ ಹೂಸೂರು ಎನ್ನುವವರ ಮನೆಯ ಸಿಲಿಂಡರ್ ಗ್ಯಾಸ್ ಲೀಕ್ ಆಗಿ ಬೆಂಕಿ ಹೊತ್ತಿಕೊಂಡು ಮನೆಗೆಲ್ಲ ವ್ಯಾಪಿಸಿತ್ತು . ಸ್ಥಳದಲ್ಲಿದ್ದ ಕೆಲವರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು.

ಬೆಂಕಿ ಜಾಸ್ತಿಯಾಗುತ್ತಿದ್ದಂತೆ ಸ್ಥಳಿಯರು ಅಗ್ನಿಶಾಮಕ ಇಲಾಖೆಗೆ ಮಾಹಿತಿ ರವಾನಿಸಿದ್ದಾರೆ. ಮಾಹಿತಿ ತಿಳಿದ ತಕ್ಷಣ ಸಕಾಲಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ . ಬೆಂಕಿಯಿಂದಾಗುವ  ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ. ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಪ್ತಿಯಲ್ಲಿ ಘಟನೆ ನಡೆದಿದೆ.

ಹುಲಿ ಉಗುರು : ಚಿಕ್ಕಮಗಳೂರಿನಲ್ಲಿ ಅರಣ್ಯಾಧಿಕಾರಿ ಮೇಲೆಯೇ ದೂರು..

ಜಾತ್ರಾ ಮೆರವಣಿಗೆ ವೇಳೆ ಗಲಾಟೆ, ಪೊಲೀಸರ ಮೇಲೆ ಕಲ್ಲು ತೂರಾಟ..!

ನಾಯಿ ಕಚ್ಚಿದಕ್ಕೆ ಠಾಣೆಗೆ ದೂರು; ಕೋಪಕ್ಕೆ ಬೈಕ್‌ಗಳನ್ನೇ ಸುಟ್ಟು ಹಾಕಿ ನಾಯಿ ಮಾಲೀಕ

- Advertisement -

Latest Posts

Don't Miss