ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಆಡಳಿತದಲ್ಲಿ ಹಸ್ತಕ್ಷೇಪ ಹಿನ್ನೆಲೆ ಸಚಿವ ಸತೀಶ ಜಾರಕಿಹೊಳಿ ವಿರುದ್ಧ ಮೇಯರ್ ಶೋಭಾ ಸೋಮನಾಚೆ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಪಾಲಿಕೆ ಆಡಳಿತದಲ್ಲಿ ಸಚಿವರು ಹಸ್ತಕ್ಷೇಪ ಮಾಡುತ್ತಿದ್ದಾರೆ. ಹಾಗಾಗಿ ನಿರ್ಭಿತವಾಗಿ ಕೆಲಸ ಮಾಡಲು ಆಗುತ್ತಿಲ್ಲ ಎಂದು ದೂರು ನೀಡಲಾಗಿದೆ.
ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ವಿರುದ್ಧವು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ಗೆ ದೂರು ನೀಡಲಾಗಿದೆ. ಶಾಸಕ ಅಭಯ್ ಪಾಟೀಲ್, ಮಾಜಿ ಶಾಸಕ ಅನಿಲ್ ಬೆನಕೆ, ಮಾಜಿ ಎಂಎಲ್ಸಿ ಮಹಾಂತೇಶ ಕವಟಗಿಮಠ ಉಪಸ್ಥಿತರಿದ್ದರು.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿನ ಬಿಜೆಪಿ ಕಾಂಗ್ರೆಸ್ ನಡುವಿನ ಫೈಟ್ ಮುಗಿಯುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಆಸ್ತಿ ಕರ ಹೆಚ್ಚಳದ ಫೈಲ್ ಕಳ್ಳತನ ಪ್ರಕರಣ ಮೊನ್ನೆಯಷ್ಟೇ ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಪಾಲಿಕೆ ಪರಿಷತ್ ಕಾರ್ಯದರ್ಶಿ ಉಮಾ ಬೆಟಗೇರಿ ಮೇಯರ್ ಶೋಭಾ ಸೊಮನಾಚೆ ವಿರುದ್ದ ದೂರು ಸಲ್ಲಿಸಿದ್ದರು. ಕೇಸ್ ದಾಖಲಿಸುವ ಮುನ್ನ ಮೇಯರ್ ಅವರಿಂದ ಮಾಹಿತಿ ಪಡೆದುಕೊಂಡು ಬಳಿಕ ಕಾನೂನು ರೀತಿ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಇದೀಗ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡಿರುವ ಪೊಲೀಸರು ಎರಡು ದಿನಗಳ ಹಿಂದೆ ಮೇಯರ್ ಶೋಭಾ ಅವರ ಅನಗೋಳದಲ್ಲಿರುವ ನಿವಾಸಕ್ಕೆ ತೆರಳಿ ನೋಟಿಸ್ ನೀಡಿದ್ದಾರೆ.
ಮನೆಯಲ್ಲಿ ಯಾರು ಇಲ್ಲ ಅನ್ನೋ ಕಾರಣಕ್ಕೆ ಬಾಗಿಲಿಗೆ ನೋಟಿಸ್ ಅಂಟಿಸಿ ಬಂದಿದ್ದರು. ನೋಟಿಸ್ ನಲ್ಲಿ ಮೇಯರ್ ವಿರುದ್ದ ಬಂದಿರುವ ದೂರಿನ ಕುರಿತು ವಿಚಾರಣೆಗೆ ಬರುವಂತೆ ಸೂಚನೆ ನೀಡಿದ್ದರು. ಅ. 25ರ ಮಧ್ಯಾಹ್ನ ಮೂರು ಗಂಟೆಗೆ ಠಾಣೆಗೆ ಬಂದು ತಮ್ಮ ಹೇಳಿಕೆಯನ್ನ ನೀಡುವಂತೆ ಪೊಲೀಸರು ನೋಟಿಸ್ ನಲ್ಲಿ ಉಲೇಖ ಮಾಡಿದ್ದರು. ಆದರೆ ನಿನ್ನೆ ದಿನ ಮೇಯರ್ ಠಾಣೆಗೆ ಹಾಜರಾಗಿಲ್ಲ, ಸಂಜೆ ನಾಲ್ಕು ಜನ ಬಿಜೆಪಿಯ ಪಾಲಿಕೆ ಸದಸ್ಯರು ಠಾಣೆಗೆ ಹಾಜರಾಗಿ ಮೇಯರ್ ಅವರು ಬರೆದ ಪತ್ರವನ್ನ ಪೊಲೀಸರಿಗೆ ನೀಡಿದ್ದಾರೆ.
ಇದರಲ್ಲಿ ತಮಗೆ ಅನಾರೋಗ್ಯ ಹಿನ್ನೆಲೆ ಠಾಣೆಗೆ ಬರಲು ಆಗಿಲ್ಲ, ಪರಿಷತ್ ಕಾರ್ಯದರ್ಶಿ ನೀಡಿದ ದೂರಿನ ಪ್ರತಿ ನೀಡಿದ ಬಳಿಕ ಉತ್ತರ ಕೊಡುವುದಾಗಿ ಬರೆದ ಪತ್ರವನ್ನ ಪೊಲೀಸರಿಗೆ ಪಾಲಿಕೆ ಸದಸ್ಯರು ತಲುಪಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಪೊಲೀಸರು ಅವರ ಕೆಲಸ ಮಾಡುತ್ತಿದ್ದಾರೆ ದಾಖಲೆ ಎಲ್ಲಿ ಹೋಯ್ತು ಅನ್ನೋದು ತನಿಖೆಯಿಂದ ಹೊರ ಬರಲಿದೆ ಎಂದಿದ್ದಾರೆ.
ನಮ್ಮ ಮೆಟ್ರೋಗೆ ಬಸವೇಶ್ವರರ ಹೆಸರಿಡಲು ಸಿಎಂ ಜತೆ ಚರ್ಚೆ: ಎಂ.ಬಿ. ಪಾಟೀಲ್
Reporter: ಬ್ರಿಟನ್ ಮಾಜಿ ಪ್ರಧಾನಿ ಈಗ ನ್ಯೂಸ್ ಚಾನೆಲ್‌ನಲ್ಲಿ ಆ್ಯಂಕರ್!
Chilli: ಮೆಣಸಿನಕಾಯಿ ಬೆಳೆ ಉಳಿಸಲು ಹೊಸ ಮಾರ್ಗ ಕಂಡುಕೊಂಡ ಕೊಪ್ಪಳದ ರೈತ!