Wednesday, January 15, 2025

Latest Posts

ಡಿಕೆಶಿಗೆ ಲೈವ್ ನಲ್ಲೇ ಪ್ರಶ್ನೆ ಕೇಳಿದ ಸಂಸದ ಪ್ರಜ್ವಲ್ ರೇವಣ್ಣ..!

- Advertisement -

ಹಾಸನ: ಕುಮಾರಸ್ವಾಮಿಯವರು ಹೊಳೆನರಸೀಪುರದಿಂದ ವಲಸೆ ಬಂದವರು ಅಂತ ಡಿಸಿಎಂ ಡಿಕೆ ಶಿವಕುಮಾರ್ ನೀಡಿರುವ ಹೇಳಿಕೆಗೆ ಸಂಸದ ಪ್ರಜ್ವಲ್ ರೇವಣ್ಣ ಕಾಂಗ್ರೆಸ್ ನಾಯಕರ ವಲಸೆ ಬಂದವರ ಹೆಸರನ್ನು ಹೇಳಿ ಟಾಂಗ್ ಕೊಟ್ಟರು.

ದೇವೆಗೌಡ್ರು ಹಾಸನದಿಂದ ಡೆಲ್ಲಿಗೆ ಹೋಗಿದ್ರು ಡೆಲ್ಲಿ ಆಳೋಕೆ, ಅದನ್ನು ತಪ್ಪು ಅನ್ನೋಕಾಗುತ್ತಾ ? ಪ್ರಧಾನಿ ಮೋದಿಯವರು ಗುಜಾರಾತ್ ಇಂದ ಬಂದು ವಾರಣಾಸಿಯಲ್ಲಿ ನಿಲ್ಲಲಿಲ್ವಾ ಎನ್ರಿ ತಪ್ಪು ?  ಎಷ್ಟು ಜನ ಎಷ್ಟು ಕಡೆಯಿಂದ ವಲಸೆ ಬಂದು ಬೇರೆ ಕಡೆ ಚುನಾವಣೆಗೆ ನಿಂತಿಲ್ಲ ಹೇಳಿ ಎಂದು ಪ್ರಶ್ನಿಸಿದರು.

ಡಿಕೆ ಶಿವಕುಮಾರ್ ಅವರನ್ನು ಕೇಳುತ್ತಾ ಡಿಕೆಶಿ ಸಾಹೇಬ್ರೆ ನೀವು ಕೊಟ್ಟಿರುವ ಸಕಲೇಶಪುರ ಅಭ್ಯರ್ಥಿ ಅವರೇನು ಸಕಲೇಶಪುರದವರಾ? ಬೇಲೂರಿಗೆ ಬಿ ಶಿವರಾಂ ಕೊಟ್ಟಿದ್ದಿರಲ್ಲಾ ಅವರೇನು ಬೇಲೂರಿನವರಾ? ಸಿಎಂ ಸಿದ್ದರಾಮಯ್ಯ ಬದಾಮಿಗೆ ಹೋಗಿ ನಿಂತಿದ್ದರಲ್ಲಾ ಅವರೇನು ಬದಾಮಿಯವರಾ ? ಎಂದು ಕಾಂಗ್ರೆಸ್ ನಾಯಕರ ಹೆಸರನ್ನು ಹೇಳುತ್ತಾ ಮೇಲಿಂದ ಮೇಲೆ ಪ್ರಶ್ನೆ ಹಾಕಿದರು.

ಬಿಜೆಪಿ ಹತ್ತು ವರ್ಷದಲ್ಲಿ ಪ್ರಚಾರ ಬಿಟ್ಟು ಬೇರೆ ಏನನ್ನು ಮಾಡಿಲ್ಲ: ಸಂತೋಷ ಲಾಡ್

ಎಮ್ಎಲ್ ಸಿ ಗೋಪಾಲ ಸ್ವಾಮಿ ಆರೋಪಕ್ಕೆ ಕೆಂಡಾಮಂಡಲವಾದ ಸಂಸದ ಪ್ರಜ್ವಲ್ ರೇವಣ್ಣ..!

ಹು-ಧಾ ಪಾಲಿಕೆಯ ಧೀಮಂತ ಪ್ರಶಸ್ತಿಗೂ ಲಾಬಿ: ಸಾಧಕರಿಗೆ ಸಿಗಲಿ ಸೂಕ್ತ ಗೌರವ..!

- Advertisement -

Latest Posts

Don't Miss