Monday, July 21, 2025

Latest Posts

ಜಗದೀಶ್ ಶೆಟ್ಟರ್ ಗೆ ಸನ್ಮಾನ ಮಾಡ್ತಾರಂತೆ ಮಹೇಶ್ ಟೆಂಗಿನಕಾಯಿ; ಯಾಕೆ ?

- Advertisement -

ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿರುದ್ಧ ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದಿಂದ 500 ಕೋಟಿ ಗ್ರ್ಯಾಂಟ್ ತರಿಸಲಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮನೆಗೆ ಹೋಗಿ, ನಾನೇ ಸನ್ಮಾನ ಮಾಡುತ್ತೇನೆ ಎಂದಿದ್ದಾರೆ.

ಶೆಟ್ಟರ್ ಸರ್ಕಾರದಿಂದ ಅನುದಾನ ತರಿಸಲಿ, ಅದನ್ನು ಬಿಟ್ಟು ಕೀಳುಮಟ್ಟದ ರಾಜಕಾರಣ ಮಾಡದಿರಲಿ ಎಂದು ಮಹೇಶ್ ಟೆಂಗಿನಕಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರನ್ನು ಮನೆಗೆ ಕರೆದು ಅನುದಾನ ಕೊಡಿಸುವುದಾಗಿ ಹೇಳುವಂತಹ ದುಸ್ಥಿತಿ ಮಾಜಿ ಸಿಎಂಗೆ ಬರಬಾರದಿತ್ತು ಅಂತ ವ್ಯಂಗ್ಯವಾಡಿರುವ ಟೆಂಗಿನಕಾಯಿ, ಬಿಜೆಪಿ ಸರ್ಕಾರವಿದ್ದಾಗ ಸೆಂಟ್ರಲ್ ಕ್ಷೇತ್ರದಲ್ಲಿ 40 ಕೋಟಿ ಗಳಷ್ಟು ಕಾಮಗಾರಿ ಪೆಂಡಿಂಗ್ ಇತ್ತು, ನಾನು ಬೆನ್ನು ಹತ್ತಿದ ಪರಿಣಾಮ ಈಗ ಆ ಯೋಜನೆ ಅನುಷ್ಠಾನಗೊಳ್ಳುತ್ತಿವೆ. 9 ಕಾಮಗಾರಿ ತೆಗೆದುಕೊಳ್ಳಲು ಸರ್ಕಾರ ತೀರ್ಮಾನಿಸಿದೆ ಅಂತ ಹೇಳಿದ್ರು.

ಮಾಜಿ ಸಿಎಂ ಗಿಮಿಕ್‌ಗೆ ಇಳಿದಿದ್ದಾರೆ

ಮೂವತ್ತು ವರ್ಷಗಳ ಕಾಲ ಏನೂ ಮಾಡದ ಮಾಜಿ ಸಿಎಂ ಈಗ ಏನೇನು ಮಾಡೋದಾಗಿ ಹೇಳ್ತಿದ್ದಾರೆ. ಕೆಲವರೊಬ್ಬರನ್ನು ಮನೆಗೆ ಕರೆಸಿ ರೋಡ್ ಮಾಡಿಕೊಡೋದಾಗಿ ಹೇಳುತ್ತಿದ್ದಾರೆ. ಆದರೆ ಜನರನ್ನು ಮನೆಗೆ ಕರೆಸಿ ಹೇಳುವ ಅವಶ್ಯಕತೆ ಇಲ್ಲ, ಮಾಜಿ ಸಿಎಂ ಚೀಪ್ ಗಿಮಿಕ್‌ಗೆ ಇಳಿದಿದ್ದಾರೆ ಅಂತ ಶಾಸಕರು ಆರೋಪಿಸಿದ್ದಾರೆ.

ಶೆಟ್ಟರ್‌ಗೆ ನಾನೇ ಸನ್ಮಾನ ಮಾಡ್ತೀನಿ

ನನ್ನಿಂದಲೇ ತಾವು ಸೋತಿರೋದಾಗಿ ಹೇಳುತ್ತಿದ್ದಾರೆ. ಆದರೆ ತಾವು ಮತ ಹಾಕಿದ ಬೂತ್ ನಲ್ಲಿಯೇ ಶೆಟ್ಟರ್ ಸೋತಿದ್ದಾರೆ. ಇಂತಹ ಚೀಪ್ ಗಿಮಿಕ್‌ಗಳಿಗೆ ಜನ ಮರುಳಾಗುವುದಿಲ್ಲ ಎಂದಿದ್ದಾರೆ. ಹುಬ್ಬಳ್ಳಿ ಧಾರವಾಡದ ಅಭಿವೃದ್ಧಿಗೆ 500 ಕೋಟಿ ರೂಪಾಯಿ ಗ್ರ್ಯಾಂಟ್ ಬಿಡುಗಡೆ ಮಾಡಿಸಲಿ, ಆಗ ನಾನೇ ಶೆಟ್ಟರ್ ಮನೆಗೆ ಖುದ್ದು ಹೋಗಿ ಸನ್ಮಾನ ಮಾಡಿ ಬರುತ್ತೇನೆ, ಅವರ ಕೈಲೇ ಗುದ್ದಲಿ ಪೂಜೆ ಮಾಡುತ್ತೇನೆ, ಅವರ ಹೆಸರನ್ನೇ ಹಾಕ್ತೇನೆ ಅಂತ ಸವಾಲು ಹಾಕಿದ್ದಾರೆ.

ದೊಡ್ಡ ವ್ಯಕ್ತಿ ಸಣ್ಣ ಕೆಲಸಗಳಿಗೆ ಅಡ್ಡಿ ಮಾಡಬಾರದು..!

ನಾನು ತಂದ ಗ್ರ್ಯಾಂಟ್ ಗೆ ಅಡ್ಡ ಹೊಡೆಯೋದು ಸರಿಯಲ್ಲ. ಗಾರ್ಡನ್‌ಗಳಿಗೆ ಹೋಗಿ ಭೂಮಿ ಪೂಜೆ ಮಾಡಿ ಬರ್ತಾರೆ, ಆದರೆ ನಾನು ಸಮುದಾಯ ಭವನ ಉದ್ಘಾಟನೆ ಮಾಡೋದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗೆ ದೊಡ್ಡ ವ್ಯಕ್ತಿ ಅನಿಸಿಕೊಂಡವರು ಸಣ್ಣ ಸಣ್ಣ ಕೆಲಸಗಳಿಗೂ ಅಡ್ಡಿಪಡಿಸುವುದು ಸರಿಯಲ್ಲ ಅಂತ ಮಹೇಶ್ ಟೆಂಗಿನಕಾಯಿ ಟಾಂಗ್ ಕೊಟ್ರು.

ಸಿಡಿ ಮಾಸ್ಟರ್ ಡಿಕೆಶಿ ಪುಕ್ಕಲ, ಮೋಸಗಾರ; ಈ ಕಾರಣಕ್ಕೆ ಸರ್ಕಾರ ಪತನ ಆಗುತ್ತೆ ಎಂದ ಸಾಹುಕಾರ್

ಡಿಕೆಶಿ ಹೊರಗಿಟ್ಟು ಕೈ ನಾಯಕರ ಡಿನ್ನರ್ ಪಾಲಿಟಿಕ್ಸ್; ಆಪ್ತ ಸಚಿವರ ಜತೆ ಸಿದ್ದರಾಮಯ್ಯ ಚರ್ಚೆ

ನರ್ಸ್ಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ; ಬಹಿರಂಗ ಕ್ಷಮೆಯಾಚಿಸಿದ ಶಾಸಕ ರಾಜು ಕಾಗೆ

- Advertisement -

Latest Posts

Don't Miss