ಮಹಾರಾಷ್ಟ್ರ:ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿ ವಿಚಾರದಲ್ಲಿ ಮತ್ತೊಮ್ಮೆ ಹಿಂಸಾಚಾರ ಭುಗಿಲೆದ್ದಿದೆ, ಇಲ್ಲಿನ ಬೀಡ್ ಜಿಲ್ಲೆಯಲ್ಲಿ ಪ್ರತಿಭಟನಾಕಾರರು ಎನ್‌ಸಿಪಿ ಶಾಸಕ ಪ್ರಕಾಶ್ ಸೋಲಂಕೆ ಅವರ ಮನೆಯನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದಾರೆ. ಎಎನ್ಐ ಹಂಚಿಕೊಂಡ ವೀಡಿಯೋದಲ್ಲಿ ಸೋಲಂಕೆ ಅವರ ಮನೆಯು ಧಗಧಗನೆ ಹೊತ್ತಿ ಉರಿಯುತ್ತಿರುವುದನ್ನು ಕಾಣಬಹುದು. ಮನೆಯಿಂದ ದಟ್ಟ ಹೊಗೆ ಏರುತ್ತಿತ್ತು.
ಶಾಸಕ ಸೋಲಂಕೆ ಮಾತನಾಡಿ, ದಾಳಿ ನಡೆದಾಗ ನಾನು ಮನೆಯೊಳಗಿದ್ದೆ, ಅದೃಷ್ಟವಶಾತ್ ನನ್ನ ಕುಟುಂಬಕ್ಕೆ ಹಾಗೂ ಸಿಬ್ಬಂದಿಗೆ ಯಾವುದೇ ಗಾಯಗಳಾಗಿಲ್ಲ, ನಾವೆಲ್ಲರೂ ಸುರಕ್ಷಿತವಾಗಿದ್ದೇವೆ. ಆದರೆ ಆಸ್ತಿಪಾಸ್ತಿಗಳಿಗೆ ಅಪಾರ ಹಾನಿಯಾಗಿದೆ ಎಂದು ಹೇಳಿದ್ದಾರೆ.
ಎನ್‌ಸಿಪಿ ಶಾಸಕ ಪ್ರಕಾಶ್ ಸೋಲಂಕೆ ನಿವಾಸದ ಮೇಲೆ ಮರಾಠಾ ಮೀಸಲಾತಿ ಪರ ಪ್ರತಿಭಟನಾಕಾರರು ನಡೆಸಿದ ದಾಳಿಗೆ ಸಿಎಂ ಏಕನಾಥ್ ಶಿಂಧೆ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಈ ಪ್ರತಿಭಟನೆ ಯಾವ ತಿರುವು ಪಡೆದುಕೊಳ್ಳುತ್ತಿದೆ ಎಂಬುದರ ಬಗ್ಗೆ ಮನೋಜ ಜಾರಂಗೆ ಪಾಟೀಲ್ (ಮರಾಠಾ ಮೀಸಲಾತಿ ಹೋರಾಟಗಾರ) ಗಮನಹರಿಸಬೇಕು ಎಂದರು.
ಮರಾಠ ಸಮುದಾಯಕ್ಕೆ ಶಾಶ್ವತ ಮೀಸಲಾತಿ ಕಲ್ಪಿಸಲು ನಾವು ಬದ್ಧರಾಗಿದ್ದೇವೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಭರವಸೆ ನೀಡಿದರು. ಮರಾಠರ ನಾಡಾಗಿರುವ ಮಹಾರಾಷ್ಟ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಮರಾಠರ ಮೀಸಲಾತಿಯ ವಿಷಯ ಬಿರುಸುಗೊಳ್ಳುತ್ತಿದೆ.
ಚುನಾವಣೆ ಮೊದಲು ರಮೇಶ್ ಜಾರಕಿಹೊಳಿ ಡಿಕೆಶಿ ಕಾಲು ಹಿಡಿಯಲು ಬಂದಿದ್ದರು. ರವಿ ಗಣಿಗ..!
ಕನ್ನಡ ಅಧ್ಯಯನದಲ್ಲಿ 9 ಚಿನ್ನದ ಪದಕ: ಚಿನ್ನದ ನಗೆ ಬೀರಿದ ವಿದ್ಯಾರ್ಥಿಗಳು.!
ಪ್ರತಿಭಾವಂತ ವಿದ್ಯಾರ್ಥಿನಿಗೆ ನೆರವಾದ ಸಂತೋಷ್ ಲಾಡ್ ಜಪಾನ್‌ಗೆ ತೆರಳಲು ಧನಸಹಾಯ