ಧಾರವಾಡ: ಅವರ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ.. ತಂದೆ, ತಾಯಿಯ ಆಸೆ ಈಡೇರಿಸಿದ ಹೆಮ್ಮೆ.. ಕಣ್ಣಂಚಲ್ಲಿ ಆನಂದ ಭಾಷ್ಪ.. ಕೊರಳಲ್ಲಿ ಚಿನ್ನದ ಪದಕ.. ಚಿನ್ನದ ಪದಕಕ್ಕೆ ಮುತ್ತಿಕ್ಕಿ ಚಿನ್ನದ ನಗೆ ಬೀರಿದ ವಿದ್ಯಾರ್ಥಿಗಳು..ಈ ಎಲ್ಲ ದೃಶ್ಯಗಳು ಕಂಡು ಬಂದದ್ದು ಧಾರವಾಡದ ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ
ಹೌದು! ಸೋಮವಾರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಡೆದ 73ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ ಅವರು ವಿವಿಧ ವಿಷಯಗಳಲ್ಲಿ ಅತ್ಯುತ್ತಮ ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಕಿ ಗೌರವಿಸಿದರು.
ಪ್ರಮುಖವಾಗಿ ಕನ್ನಡ ಅಧ್ಯಯನದಲ್ಲಿ ವಿಶಿಷ್ಠ ಸಾಧನೆ ಮಾಡಿದ ನೇಹಾ ಸಜ್ಜಲಿ ಎಂಬ ವಿದ್ಯಾರ್ಥಿನಿ ಒಟ್ಟು 9 ಚಿನ್ನದ ಪದಕಕ್ಕೆ ಮುತ್ತಿಕ್ಕಿದರೆ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಸಾಧನೆ ಮಾಡಿದ ದಾದಾಗೌಡ ಪಾಟೀಲ 9 ಚಿನ್ನದ ಪದಕ ಪಡೆದರೆ, ಶುಭಾ ಹೆಗಡೆ ಅವರು ಜೀವರಸಾಯನಶಾಸ್ತ್ರ ವಿಭಾಗದಲ್ಲಿ 8 ಚಿನ್ನದ ಪದಕ ಪಡೆದು ಅತೀ ಹೆಚ್ಚು ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳಾಗಿ ಹೊರಹೊಮ್ಮಿದರು.
ಇನ್ನೂ ಅನೇಕ ವಿದ್ಯಾರ್ಥಿಗಳು 1,2,3,4,5,6 ಚಿನ್ನದ ಪದಕ ಪಡೆದು ಚಿನ್ನದ ಪದಕಗಳಿಗೆ ಮುತ್ತಿಕ್ಕಿದರು. ಇನ್ನು ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳು, ಈ ಸಾಧನೆ ಹಿಂದೆ ತಮ್ಮ ತಂದೆ, ತಾಯಿಯ ಪರಿಶ್ರಮ ಸಾಕಷ್ಟಿದೆ. ಅವರು ಬೆನ್ನೆಲುಬಾಗಿ ನಿಲ್ಲದೇ ಹೋಗಿದ್ದರೆ ಈ ಸಾಧನೆ ಅಸಾಧ್ಯವಾಗುತ್ತಿತ್ತು. ಶಿಕ್ಷಕರು ಕೂಡ ನಮಗೆ ಮಾರ್ಗದರ್ಶನ ಮಾಡಿ ಸಾಧನೆ ಮಾಡುವಂತೆ ಮಾಡಿದ್ದಾರೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಒಟ್ಟಾರೆ 73ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳು ಚಿನ್ನದ ನಗೆ ಬೀರಿ ತಮ್ಮ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿಕೊಂಡಿದ್ದಾರೆ. ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿತ್ತು
Award Function:ಘಟಿಕೋತ್ಸವದಲ್ಲಿ ಹಲವು ಸಾಧಕರಿಗೆ ಪ್ರಶಸ್ತಿ ಪ್ರಧಾನ: ರಾಜ್ಯಪಾಲ ಗೆಹ್ಲೋಟ್ ಭಾಗಿ..!
Award Function:ಘಟಿಕೋತ್ಸವದಲ್ಲಿ ಹಲವು ಸಾಧಕರಿಗೆ ಪ್ರಶಸ್ತಿ ಪ್ರಧಾನ: ರಾಜ್ಯಪಾಲ ಗೆಹ್ಲೋಟ್ ಭಾಗಿ..!
ವೆಲ್ಡಿಂಗ್ ವರ್ಕ್ ಶಾಪ್ ನಲ್ಲಿ ಬೆಂಕಿ; ಎರಡು ಬಸ್ಸುಗಳು ಅಗ್ನಿಗಾಹುತಿ..!