ಬೆಂಗಳೂರು: ರಾಜ್ಯದಲ್ಲಿ ಮತ್ತೆ ಪೋಸ್ಟರ್ ವಾರ್ ಶುರುವಾದಂತಿದೆ. ಬೆಂಗಳೂರಿನ ಸದಾಶಿವನಗರದ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಅವಾಚ್ಯ ಪದ ಬಳಕೆ ಮಾಡಿರುವ ಪೋಸ್ಟರ್ ಗಳನ್ನು ಕಿಡಿಗೇಡಿಗಳು ಅಂಟಿಸಿ ಹೋಗಿದ್ದಾರೆ.
ಪೋಸ್ಟರ್ ನಲ್ಲಿ ಏಕವಚನದಲ್ಲಿ ನಿಂದನೆ ಜೊತೆಗೆ ಅವಾಚ್ಯ ಪದ ಬಳಕೆ ಮಾಡಿದ್ದಾರೆ. ಇದೇ ನಿನ್ನ ಸಂಸ್ಕೃತಿ ಎಂದು ಪದ ಬಳಸಿದ್ದಾರೆ. ಇದರಿಂದ ಎಚ್ಚೆತ್ತ ಪೊಲೀಸರು ಕೂಡಲೇ ಅಂಟಿಸಿದ್ದ ಪೋಸ್ಟರ್ ತೆರವುಮಾಡಿದ್ದಾರೆ. ಈ ಪೋಸ್ಟರ್ ಬಗ್ಗೆ ಇದೀಗ ಭಾರೀ ಚರ್ಚೆ ಶುರುವಾಗಿದೆ.
ಸೋಮವಾರ ಡಿಸಿಎಂ ಡಿಕೆಶಿ ವಿರುದ್ಧ ರಮೇಶ್ ಜಾರಕಿಜೊಳಿ ಸುದ್ದಿಗೋಷ್ಠಿ ನಡೆಸಿ ಡಿಕೆ ಹೆದರು ಪುಕ್ಕಲ, ಮೋಸಗಾರ ಎಂದು ಜರೆದಿದ್ದರು. ರಾಜ್ಯ ಸರ್ಕಾರದ ಪತನಕ್ಕೆ ಬಿಜೆಪಿ ಸ್ಕೆಚ್ ಹಾಕಿಲ್ಲ. ಆಪರೇಷನ್ ಕಮಲವನ್ನು ನಾವು ಮಾಡ್ತಿಲ್ಲ. ಸುಳ್ಳು ಗ್ಯಾರಂಟಿ ಕೊಟ್ಟಿದ್ದನ್ನ ಈಡೇರಿಸಲು ಆಗದ ಕಾರಣ ಆಪರೇಷನ್ ಕಮಲ ಮಾಡುತ್ತಿದ್ದಾರೆ ಅಂತಾ ಡಿಕೆ ಗ್ಯಾಂಗ್ ಹೇಳ್ತಿದೆ ಎಂದು ಪ್ರತ್ಯಾರೋಪ ಮಾಡಿದ್ದರು. 2019ರಲ್ಲಿ ಅನಿವಾರ್ಯ ಇತ್ತು ಆಪರೇಷನ್ ಮಾಡಿದ್ವಿ. ಅಂದು ಡಿಕೆಶಿಯ ಸರ್ವಾಧಿಕಾರಿ ಧೋರಣೆ ಮತ್ತು ಸೊಕ್ಕಿನಿಂದ ಸರ್ಕಾರವನ್ನು ಬೀಳಿಸಬೇಕಾಯಿತು ಅಂದಿದ್ದರು.
ಈರುಳ್ಳಿಗಳನ್ನು ಸಂಗ್ರಹ ಮಾಡಿ ಬೇಡಿಕೆ ಸೃಷ್ಟಿ ಮಾಡುತ್ತಿದ್ದಾರೆ; ಸಚಿವ ಶಿವಾನಂದ ಪಾಟೀಲ್..!
ಕನ್ನಡ ಧ್ವಜವನ್ನು ಸರ್ಕಾರಿ ಕಛೇರಿಗಳ ಮೇಲೆ ಹಾರಿಸಲು ಒತ್ತಾಯಿಸಿ ಪತ್ರ; ಭೀಮಪ್ಪ ಗಡಾದ್..!