ಮುಂದುವರಿದ ಹುಲಿ ಉಗುರು ಕಾರ್ಯಚರಣೆ; ಹುಬ್ಬಳ್ಳಿಯ ಉದ್ಯಮಿಗಳ ಮನೆಯಲ್ಲಿ ಶೋಧಕಾರ್ಯ..!

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿಯೂ ಹುಲಿ ಉಗುರು ಹಾಕಿಕೊಂಡವರ ಮನೆ ಶೋಧ ಕಾರ್ಯಾಚರಣೆ ನಡೆಸಲು ಅರಣ್ಯ ಇಲಾಖೆ ಅಧಿಕಾರಿಗಳ ಮುಂದಾಗಿದ್ದಾರೆ. ಹುಬ್ಬಳ್ಳಿಯ ಉದ್ಯಮಿಗಳ ಮನೆಗೆ ಬೆಳ್ಳಂಬೆಳಿಗ್ಗೆ ಭೇಟಿ ನೀಡಿದ ಅರಣ್ಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಹೌದು.. ವಲಯಾರಣ್ಯಧಿಕಾರಿ ಆರ್.ಎಸ್.ಉಪ್ಪಾರ ನೇತೃತ್ವ ತಂಡ, ಹುಬ್ಬಳ್ಳಿಯ ಉದ್ಯಮಿಗಳಾದ ವಜ್ರಮುನಿ ಶಿರಕೋಳ, ಅಯ್ಯಪ್ಪ ಶಿರಕೋಳ ಮನೆಗೆ ಭೇಟಿ ನೀಡಿದ್ದು, ಎರಡೂ ಹುಲಿ ಉಗುರುಗಳನ್ನು ವಶಕ್ಕೆ ಪಡೆದಿದ್ದಾರೆ.

ಇ‌ನ್ನೂ ಹುಲಿ ಉಗುರುಗಳನ್ನು ಪರಿಶೀಲಿಸಿದ ಅಧಿಕಾರಿಗಳಿಗೆ ಹುಲಿ ಉಗುರು ನಕಲಿ ಎಂದು ಉದ್ಯಮಿಗಳು ಮಾಹಿತಿ ನೀಡಿದ್ದು, ನಾವು ಇವುಗಳನ್ನು ಜಾತ್ರೆಯಲ್ಲಿ ಖರೀದಿ ಮಾಡಿದ್ದೆವೆಂದ ವಜ್ರಮುನಿ, ಅಯ್ಯಪ್ಪ ಶಿರಕೋಳ ಮಾಹಿತಿ ನೀಡಿದ್ದಾರೆ.

ಮೊನ್ನೆ ತಾನೇ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್ ಆಗಿದ್ದವು. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿತ್ತು. ಈ ಹಿನ್ನೆಲೆ ಅರಣ್ಯಧಿಕಾರಿಗಳು ಹುಲಿ ಉಗುರು ಪೆಂಡೆಂಟ್ ಹಾಕಿದವರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಐ.ಎಫ್.ಎಸ್.ಎಲ್ ವರದಿಗೆ ಕಳಿಸುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವರದಿಯ ನಂತರವೇ ಅಸಲಿಯೋ ನಕಲಿಯೋ ಗೊತ್ತಾಗಲಿದೆ.

ಮೂಲೆ ಗುಂಪಾದ ಮುಕ್ತಿ ವಾಹನಗಳು: ಪಾಲಿಕೆಯಲ್ಲಿನ ಅಂಧ ದರ್ಬಾರ್ ನಿಂದ ಅವ್ಯವಸ್ಥೆ…!

ಮರಾಠ ಮೀಸಲಾತಿಗಾಗಿ ಬಸ್ಸುಗಳಿಗೆ ಕಲ್ಲು ತೂರಾಟ..!

ಬಸ್ ನಲ್ಲಿ ಬಿಟ್ಟು ಹೋಗಿದ್ದ 3ಲಕ್ಷ ಮೌಲ್ಯದ ಚಿನ್ನಾಭರಣ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಬಸ್ ಕಂಡಕ್ಟರ್..!!

About The Author