Thursday, December 4, 2025

Latest Posts

ಕಾಫಿ ಡೇ ಮಾಲೀಕ ದಿ. ಸಿದ್ಧಾರ್ಥ ಪುತ್ರನ ಜೊತೆ ಡಿಕೆಶಿ ಪುತ್ರಿ ವಿವಾಹ..?!

- Advertisement -

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯ ಜೊತೆ ಮಾಜಿ ಸಿಎಂ ಎಸ್‌.ಎಂ.ಕೃಷ್ಣರ ಮೊಮ್ಮಗ ಅಮರ್ತ್ಯ ಹೆಗ್ಡೆ ಮದುವೆ ಮಾಡುವ ಬಗ್ಗೆ ಮಾತುಕತೆ ನಡೆದಿದೆ ಎಂಬ ಮಾಹಿತಿ ದೊರಕಿದೆ.

ಕೆಫೆ ಕಾಫಿ ಡೇ ಮಾಲೀಕರಾಗಿದ್ದ ದಿ.ಸಿದ್ಧಾರ್ಥ ಪುತ್ರ ಅಮರ್ತ್ಯ ಹೆಗ್ಡೆ, ಡಿಕೆಶಿ ಪುತ್ರಿ ಐಶ್ವರ್ಯಳನ್ನ ಮದುವೆಯಾಗುವ ಬಗ್ಗೆ ಎರಡೂ ಕುಟುಂಬದ ನಡುವೆ ಮಾತುಕತೆ ನಡೆದಿದೆ ಎಂದು ಹೇಳಲಾಗ್ತಿದೆ. ಹೀಗೇನಾದ್ರೂ ಆದ್ರೆ ಗುರು ಶಿಷ್ಯರ ಸಂಬಂಧ, ವಿವಾಹ ಸಂಬಂಧವಾಗಿ ಬದಲಾಗಲಿದೆ.

ಡಿ.ಕೆ.ಶಿವಕುಮಾರ್ ಮತ್ತು ಡಿಕೆಶಿ ರಾಜಕೀಯ ಗುರುಗಳಾದ ಮಾಜಿ ಸಿಎಂ ಎಸ್‌.ಎಂ.ಕೃಷ್ಣ ಅವರ ಅಳಿಯ ದಿ.ಸಿದ್ಧಾರ್ಥ ಬ್ಯುಸಿನೆಸ್ ಪಾಲುದಾರರಾಗಿದ್ದರು. ಇದೀಗ ನೆಂಟತನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಇನ್ನು 6 ತಿಂಗಳಲ್ಲಿ ಮದುವೆ ಮಾಡಲು ತೀರ್ಮಾನಿಸಿದ್ದು, ಇನ್ನೆರಡು ತಿಂಗಳಲ್ಲೇ ನಿಶ್ಚಿತಾರ್ಥ ನಡೆಯಲಿದೆ ಎಂಬ ಮಾಹಿತಿ ದೊರೆತಿದೆ.

ಸಿದ್ಧಾರ್ಥ ಸಾವಿನ ನಂತರ ಕಾಫೀ ಡೇ ಬ್ಯುಸಿನೆಸ್‌ನ್ನು ಅಮಾರ್ತ್ಯ ನಡೆಸಿಕೊಂಡು ಹೋಗುತ್ತಿದ್ದು, ಅಮಾರ್ತ್ಯ ಮತ್ತು ಐಶ್ವರ್ಯ ಈಗಿಂದಲೇ ತಮ್ಮ ತಮ್ಮ ಸಂಸ್ಥೆಗಳನ್ನ ನಿಭಾಯಿಸುವಲ್ಲಿ ನಿಪುಣರಾಗಿದ್ದಾರೆ. ಇಬ್ಬರಿಗೂ ಬ್ಯುಸಿನೆಸ್‌ನಲ್ಲಿ ಒಳ್ಳೆಯ ನಾಲೆಡ್ಜ್ ಇದ್ದು, ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಹೀಗಾಗಿ ಆದಷ್ಟು ಬೇಗ ಇವರಿಬ್ಬರ ವಿವಾಹ ನಡೆಯಬೇಕುಂಬುದು ಕುಟುಂಬಸ್ಥರ ಆಶಯವಾಗಿದೆ.

ಇನ್ನೊಂದು ತಿಂಗಳು ಕಳೆದರೆ ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಹೆಗ್ಡೆ ಸಾವನ್ನಪ್ಪಿ, ಒಂದು ವರ್ಷವಾಗುತ್ತದೆ. ಕಳೆದ ವರ್ಷ ಜುಲೈ 30ಕ್ಕೆ ಸಿದ್ಧಾರ್ಥ ಬ್ಯುಸಿನೆಸ್ ಲಾಸ್, ಸಾಲದ ಹೊರೆ ತಾಳಲಾಗದೇ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸತತ ಎರಡು ದಿನಗಳ ಹುಡುಕಾಟದ ನಂತರ ಸಿದ್ಧಾರ್ಥ ಮೃತದೇಹ ನೇತ್ರಾವತಿ ನದಿಯಲ್ಲಿ ದೊರಕಿದ್ದು, ಕಾಫಿ ಸಾಮ್ರಾಜ್ಯದ ದಿಗ್ಗಜ ಕೊನೆಯುಸಿರೆಳೆದಿದ್ದರು.

- Advertisement -

Latest Posts

Don't Miss