ಜೂನ್ ತಿಂಗಳು ಒಂದು ರಾಶಿಯವರಿಗೆ ಒಳ್ಳೆಯ ಲಾಭ ತಂದುಕೊಡಲಿದ್ದು, ಅರ್ಧಕ್ಕೆ ನಿಂತಿರುವ ಕೆಲಸ ಮುಂದುವರೆಸಲು ಅನೂಕೂಲವಾಗಿದೆ. ಅಲ್ಲದೇ ಈ ರಾಶಿಯವರಿಗೆ ಧನಲಾಭ ಕೂಡ ಆಗಲಿದೆ. ಯಾವುದು ಆ ರಾಶಿ ಎಂಬ ಪ್ರಶ್ನೆಗೆ ಉತ್ತರ ಮಕರ ರಾಶಿ.
ಮಕರ ರಾಶಿಯವರಿಗೆ ಈ ತಿಂಗಳು ಶನಿಯಿಂದ ಅದೃಷ್ಟ ಬರಲಿದೆ. ಕಬ್ಬಿಣ ವ್ಯಾಪಾರಿಗಳು ಈ ತಿಂಗಳಲ್ಲಿ ಹೆಚ್ಚಿನ ಲಾಭ ಪಡಿಯಬಹುದು. ಮಕರ ರಾಶಿಯವರು ಯಾವುದೇ ಒಳ್ಳೆಯ ಕೆಲಸ ಮಾಡಲು ಹೊರಟರೆ, ಸಂಪೂರ್ಣ ಶ್ರದ್ಧೆಯಿಂದ ಕೆಲಸ ಕೈಗೊಂಡರೆ ಉತ್ತಮ ಫಲಿತಾಂಶ ನಿಮ್ಮದಾಗುವುದು.
ವಿದ್ಯಾರ್ಥಿಗಳು ಕೂಡ ಆಲಸ್ಯ ತೋರದೇ ವಿದ್ಯಾಭ್ಯಾಸದಲ್ಲಿ ಗಮನ ಕೊಟ್ಟರೆ ಉನ್ನತ ಸ್ಥಾನಕ್ಕೇರುತ್ತಾರೆ. ವಿದ್ಯಾರ್ಥಿಗಳು ಗುರು ರಾಯರನ್ನ ಸ್ಮರಿಸಿದರೆ ಒಳಿತು.
ಅಲ್ಲದೇ, ಈ ರಾಶಿಯವರು ಯಾವುದಾದರೂ ಕೆಲಸವನ್ನ ಅರ್ಧಕ್ಕೆ ನಿಲ್ಲಿಸಿದ್ದರೆ. ಆ ಕೆಲಸ ಪೂರ್ತಿ ಮಾಡಿಕೊಳ್ಳುವ ಅವಕಾಶ ಸಿಗಲಿದೆ.
ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ, ಬ್ಯುಸಿನೆಸ್ ಆರಂಭಿಸಿದವರಿಗೆ ಒಳ್ಳೆಯ ಲಾಭವಾಗಲಿದ್ದು, ಮಕರ ರಾಶಿಯ ಸ್ತ್ರೀಯರಿಗೆ ಮದುವೆ ನಿಶ್ಚಯವಾಗುವ ಲಕ್ಷಣಗಳು ಕಂಡುಬಂದಿದೆ.
ಇನ್ನು ಮುಖ್ಯವಾಗಿ ಮಕರ ರಾಶಿಯ ಗರ್ಭಿಣಿ ಸ್ತ್ರೀಯರು ಗರ್ಭ ರಕ್ಷಾ ಸ್ತೋತ್ರ, ಲಲಿತಾ ಸಹಸ್ರನಾಮ ಪಠಣೆ ಮಾಡಿದರೆ ಉತ್ತಮ.