ಕೇರಳದಲ್ಲಿ ನಡೆದ ಗರ್ಭಿಣಿ ಆನೆಯ ಸಾವಿನ ಬಗ್ಗೆ ಸಂಸದೆ ಸುಮಲತಾ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ವಿಜಯಲಕ್ಷ್ಮಿ ದರ್ಶನ್, ಅಂತಿಮವಾಗಿ ಮಾನವೀಯತೆ ಸತ್ತಿದೆ. ಅವಳು ಗರ್ಭಿಣಿಯಾಗಿದ್ದಳು, ಮನುಷ್ಯರನ್ನ ನಂಬಿದ್ದಳು ಆದರೆ ನಾವು ಅವಳ ನಂಬಿಕೆ ಉಳಿಸಿಕೊಳ್ಳುವಲ್ಲಿ ವಿಫಲರಾದೇವು. ದ್ರೋಹದ ವ್ಯಾಖ್ಯಾನ ಎಂದರೆ ಮನುಷ್ಯರು ಎಂದು ಬೇಸರ ಹೊರಹಾಕಿದ್ದಾರೆ.
https://twitter.com/vijayaananth2/status/1268190380866121728/photo/1
ಇನ್ನು ಸಂಸದೆ ಸುಮಲತಾ ಅಂಬರೀಷ್ ಕೂಡ ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಗರ್ಭಿಣಿ ಆನೆ ಸಾವಿನ ಬಗ್ಗೆ ಅಸಮಾಧಾನ ಹೊರಹಾಕಿದ್ದು, ಯಾವುದೇ ಪ್ರಾಣಿ ಮನುಷ್ಯರಂತೆ ಕ್ರೂರವಾಗಿರಲು ಸಾಧ್ಯವಿಲ್ಲ. ಸೌಮ್ಯವಾಗಿದ್ದ ಆ ತಾಯಿ ದೈತ್ಯನ ವಿರುದ್ಧ ಉದ್ದೇಶಪೂರ್ವಕ ಹಿಂಸಾಚಾರ ಕ್ಷಮಿಸಲಾಗದು. ಅದರ ನೋವು ಮತ್ತು ದುಃಖವನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲದಂತ ಸನ್ನಿವೇಶ ಇದು. ಈ ಘಟನೆಗೆ ಕಾರಣ ಆದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.
ನಿನ್ನೆ ಕೇರಳದ ಪಲಕ್ಕಡ ಜಿಲ್ಲೆಯ ಕಾಡೊಂದರಲ್ಲಿ ಆಹಾರ ಹುಡುಕಿ ಹೊರಟಿದ್ದ ಆನೆ ಅಲ್ಲೇ ಸಿಕ್ಕಿದ್ದ ಅನಾನಸ್ ತಿಂದಿತ್ತು. ಆದ್ರೆ ಆ ಅನಾನಸ್ ಹಣ್ಣಿನಲ್ಲಿ ಸ್ಪೋಟಕವನ್ನಿರಿಸಿದ್ದ ಕ್ರೂರಿಗಳು ರಕ್ಕಸ ಕೃತ್ಯ ಮೆರೆದಿದ್ದರು. ಆ ಹಣ್ಣನ್ನ ತಿಂದ ಆನೆ ನಿಂತಲ್ಲೇ ಪ್ರಾಣ ಬಿಟ್ಟಿತ್ತು. ಬಳಿಕ ಆನೆಯ ಶವಪರೀಕ್ಷೆ ಮಾಡಿದಾಗ ಆನೆ ಗರ್ಭಿಣಿಯಾಗಿತ್ತು ಎಂದು ತಿಳಿದು ಬಂದಿದೆ.