ಜೂನ್ 21ರಂದು ಈ ವರ್ಷದ ಮೊದಲ ಸೂರ್ಯ ಗ್ರಹಣ ಸಂಭವಿಸಲಿದ್ದು, ಕೆಲ ರಾಶಿಗಳಿಗೆ ಮಿಶ್ರಫಲ ಬಂದರೆ, ಕೆಲ ರಾಶಿಗಳಿಗೆ ಯಾವ ನಷ್ಟವೂ ಸಂಭವಿಸುವುದಿಲ್ಲ. ಆದ್ರೆ ನಾಲ್ಕು ರಾಶಿಯವರಿಗೆ ಅದೃಷ್ಟದ ಸೂರ್ಯಗ್ರಹಣವಾಗಿ ಪರಿಣಮಿಸಲಿದೆ.
ಮೇಷ, ಧನಸ್ಸು, ವೃಶ್ಚಿಕ, ಕಟಕ ರಾಶಿಗಳು ಈ ಸೂರ್ಯಗ್ರಹಣದಲ್ಲಿ ಮಿಶ್ರ ಫಲ ಪಡೆದುಕೊಳ್ಳಲಿದೆ. ಇನ್ನು ವೃಷಭ ರಾಶಿ, ಸಿಂಹ ರಾಶಿ, ಮಿಥುನ ರಾಶಿ, ಮತ್ತು ತುಲಾ ರಾಶಿ ಈ ನಾಲ್ಕು ರಾಶಿಯವರಿಗೆ ಯಾವುದೇ ದೋಷವಿಲ್ಲ. ಇವರಿಗೆ ಈ ಸೂರ್ಯಗ್ರಹಣದಿಂದ ಯಾವ ನಷ್ಟವೂ ಸಂಭವಿಸುವುದಿಲ್ಲ.
ಆದರೆ ಕುಂಭ ರಾಶಿ, ಮಿಥುನ ರಾಶಿ, ಕನ್ಯಾ ರಾಶಿ ಮತ್ತು ಮಕರ ರಾಶಿಯವರಿಗೆ ಈ ಸೂರ್ಯ ಗ್ರಹಣ ಅದೃಷ್ಟದ ಸೂರ್ಯಗ್ರಹಣವಾಗಲಿದೆ.

ಮೊದಲನೇಯದಾಗಿ ಮಿಥುನ ರಾಶಿ: ಈ ರಾಶಿಯವರು ಸೂರ್ಯಗ್ರಹಣದ ಬಳಿಕ ಆರ್ಥಿಕತೆಯಲ್ಲಿ ಮುನ್ನಡೆ ಸಾಧಿಸುತ್ತಾರೆ. ವ್ಯವಹಾರದಲ್ಲಿ ಲಾಭ ಗಳಿಸಲಿದ್ದು, ಮನೆ, ವಾಹನ ಕೊಂಡುಕೊಳ್ಳುವ ಆಸೆ ಈಡೇರಲಿದೆ. ಈ ರಾಶಿಯವರು ಅಭಿವೃದ್ಧಿಗಾಗಿ ಆಂಜನೇಯನನ್ನು ಪೂಜಿಸಬೇಕು.
ಎರಡನೇಯದಾಗಿ ಮಕರ ರಾಶಿ: ಮಕರ ರಾಶಿಯವರಿಗೆ ಈ ಸೂರ್ಯಗ್ರಹಣದ ನಂತರ ಹಣಕಾಸಿನ ಸಮಸ್ಯೆ ಕಡಿಮೆಯಾಗಲಿದ್ದು, ಆರ್ಥಿಕವಾಗಿ ಸಧೃಡವಾಗುತ್ತಾರೆ. ಅಲ್ಲದೇ ಸುಖಮಯ ದಾಂಪತ್ಯ ಜೀವನ ಇವರದ್ದಾಗುತ್ತದೆ.
ಮೂರನೇಯದಾಗಿ ಕುಂಭ ರಾಶಿ: ಈ ರಾಶಿಯವರು ಸೂರ್ಯಗ್ರಹಣದ ನಂತರ ವ್ಯಾಪಾರ ವಹಿವಾಟಿನಲ್ಲಿ ಉತ್ತಮ ಲಾಭ ಗಳಿಸಲಿದ್ದಾರೆ. ಈ ರಾಶಿಯ ವಿದ್ಯಾರ್ಥಿಗಳು ಒಳ್ಳೆಯ ಅಂಕ ಪಡೆದು ಉತ್ತೀರ್ಣರಾಗುತ್ತಾರೆ. ಪ್ರತಿದಿನ ಗಣಪತಿಯನ್ನು ಪ್ರಾರ್ಥಿಸುವುದು ಉತ್ತಮ.
ಕೊನೆಯದಾಗಿ ಕನ್ಯಾ ರಾಶಿ: ಈ ರಾಶಿಯವರು ಗ್ರಹಣ ಸಮಯದಲ್ಲಿ ಮನೆಯಲ್ಲೇ ಇರಿ. ದೇವರ ಸ್ಮರಣೆ ಮಾಡಿ. ವಾಹನ ಚಾಲನೆಯನ್ನಂತೂ ಮಾಡಲೇಬೇಡಿ. ಈ ಬಾರಿಯ ಸೂರ್ಯಗ್ರಹಣವನ್ನ ಪಾಲಿಸಿ. ಗ್ರಹಣ ಸಮಯದಲ್ಲಿ ದೇವರ ನಾಮಸ್ಮರಣೆ ಮಾಡುವುದರ ಜೊತೆಗೆ ಗ್ರಹಣ ಮುಗಿದ ಬಳಿಕ ಸ್ನಾನ ಮಾಡಿ ಶುದ್ಧಿಯಾಗಿ ಪೂಜೆ ಮಾಡಿ ಮುಂದಿನ ಕೆಲಸ ಕೈಗೊಂಡರೆ ಒಳಿತಾಗುವುದು. ಹಣಕಾಸಿನ ವಿಚಾರವಿದ್ದಲ್ಲಿ ಗ್ರಹಣದ ಬಳಿಕ ಮುಂದುವರೆಸಿದರೆ ಉತ್ತಮ. ಶನಿದೇವನ ಪ್ರಾರ್ಥನೆಯಿಂದ ಒಳಿತಾಗುವುದು.