ಗ್ರಾಹಕರಿಗೆ ಬಿಗ್ ಶಾಕ್ ಕೊಟ್ಟು ಶಾಖೆಗೆ ಬೀಗ ಹಾಕಿದ ಬಜಾಜ್ ಫಿನಾನ್ಸ್..!

ಕರ್ನಾಟಕ ಟಿವಿ : ಕೊರೊನಾ ಹಾಗೂ ಲಾಕ್ ಡೌನ್ ನಿಂದ ಜನ ಕಂಗಾಲಾಗಿದ್ದಾರೆ.. ಈ ನಡುವೆ ಬ್ಯಾಂಕ್ ಗಳ ಇಎಂಐ ಕಟ್ಟೋದನ್ನ ಆರ್ ಬಿಐ 6 ತಿಂಗಳು  ಮುಂದೂಡಿದೆ. ಆದ್ರೆ ಖಾಸಗಿ ಫಿನಾನ್ಸ್ ಕಂಪನಿಗಳು ಗ್ರಾಹಕರ ಜೀವ ಹಿಂಡುತ್ತಿವೆ.  ಬೆಂಗಳೂರಿನ ಬಸವೇಶ್ವರ ನಗರದ ಬಜಾಜ್ ಫಿನಾನ್ಸ್ ಕಂಪನಿ ಶಾಖೆಯಲ್ಲಿ ಗ್ರಾಹಕರ ಖಾತೆಯಿಂದ 20 ಕ್ಕೂ ಹೆಚ್ಚು ಬಾರಿ ಡಿಐಆರ್ ಬಿಐ ಚಾರ್ಜ್ ಹೆಸರಿನಲ್ಲಿ ತಲಾ 590 ರೂ ನಂತೆ  ಹಣವನ್ನ ಕಟ್ ಮಾಡಲಾಗಿದೆ. ಇತ್ತ ಬಜಾಜ್ ಫಿನಾನ್ಸ್ ಶಾಖೆ ಯಲ್ಲಿ ವಿಚಾರಿಸೋಣ ಅಂದ್ರೆ ಶಾಖೆ ಮುಂದೆ ಡ್ಯೂ ಟು ಸರ್ವರ್ ಡೌನ್ ಶಾಖೆಯನ್ನ ಕ್ಲೋಸ್ ಮಾಡಲಾಗಿದೆ ಎಂದು ಬೋರ್ಡ್ ಹಾಕಿದ್ದಾರೆ. ಇದೇ ರೀತಿ ನೂರಾರು ಗ್ರಾಹಕರ ಖಾತೆಯಿಂದ ಹಣವನ್ನ ಕಟ್ ಮಾಡಿರುವ ಬಜಾಜ್ ಫಿನಾನ್ಸ್ ವಿರುದ್ಧ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿ್ದ್ದಾರೆ..

https://www.youtube.com/watch?v=ThqctS5YoXE

ಕಾರ್ತಿಕ್ ಹೊಂಬಾಳೆಗೌಡನದೊಡ್ಡಿ, ಕರ್ನಾಟಕ ಟಿವಿ

https://www.youtube.com/watch?v=ThqctS5YoXE

About The Author