Saturday, July 5, 2025

Latest Posts

ಖಾಸಗಿ ಆಸ್ಪತ್ರೆಗಳ ಜೊತೆ ಸರ್ಕಾರ ಕೈಜೋಡಿಸಿದೆ : ಎಎಪಿ ಗಂಭೀರ ಆರೋಪ

- Advertisement -

www.karnatakatv.net :ಕೊರೊನಾ ಸೋಂಕು ಕರ್ನಾಟಕದಲ್ಲಿ ಕೈಮೀರಿ ಸಮುದಾಯಕ್ಕೆ ಹರಡುತ್ತಿದೆ. ಇಂತಹ ಸಂದರ್ಭದಲ್ಲೂ ಸಹ ಕರ್ನಾಟಕ ಸರ್ಕಾರ ಯಾವುದೇ ಕಠಿಣ ಕ್ರಮ ಕೈಗೊಳ್ಳದೆ ಖಾಸಗಿ ಆಸ್ಪತ್ರೆಗಳ ಜೊತೆ ಸೇರಿಕೊಂಡು ಜನರಿಗೆ ವಂಚನೆ ಮಾಡಲು ಚಿಕಿತ್ಸಾ   ದರ ಪಟ್ಟಿಗಳನ್ನು ನಿಗದಿಗೊಳಿಸಲು ತೊಡಗಿರುವುದು  ನಿಜಕ್ಕೂ ಅಸಹ್ಯಕರ ಎಂದು ಆಮ್ ಆದ್ಮಿ ಪಕ್ಷ ಬಿಜೆಪಿ ವಿರುದ್ಧ ವಾಗ್ದಾಳೀ ನಡೆಸಿದೆ.   ಸೋಂಕು ಎಷ್ಟು ವ್ಯಾಪಕವಾಗಿ ಹರಡುತ್ತಿದ್ದರು ಸಹ ಕೇವಲ ಬಾಯಿಮಾತಿನಲ್ಲಿ ಜನರ ಆರೋಗ್ಯದ ಬತ್ಗೆ ತಪ್ಪು, ತಪ್ಪು ಆದೇಶ, ಕೆಟ್ಟ ನಿರ್ಧಾರ ತೆಗೆದುಕೊಳ್ಳುವ ಮೂಲಕ ಮುಗ್ಧ ಜನರ ಜೀವದ ಮೇಲೆ  ಚೆಲ್ಲಾಟವಾಡುತ್ತಾ. ಇಷ್ಟು ಅವಘಡಗಳು ನಡೆದರೂ ಭಂಡತನದಿಂದ ವರ್ತಿಸುತ್ತಾ ಕುಳಿತಿದೆ ಎಂದು ಎಎಪಿ ನಾಯಕರು ಆರೋಪಿಸಿದ್ದಾರೆ.

https://www.youtube.com/watch?v=heeTOl08S0Q&t=252s

ಸಮುದಾಯಕ್ಕೆ ಕೊರೊನಾ ಹರಡುತ್ತದೆ. ಸರ್ಕಾರ ಜಾರಿಕೊಳ್ತಿದೆ

ಸಮುದಾಯ ಆರೋಗ್ಯವನ್ನು ಕಾಪಾಡುವುದು ಸರ್ಕಾರದ ಮೊದಲ ಆದ್ಯತೆ. ಇದನ್ನೇ ಮರೆತಿರುವ ಸರ್ಕಾರ ಸಮುದಾಯಕ್ಕೆ ಸೋಂಕು ಹರಡುತ್ತಿರುವ ವೇಳೆಯಲ್ಲೆ ಜನರ ಆರೋಗ್ಯವನ್ನು ಜನರ ಹೆಗಲಿಗೆ ಹಾಕಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ನಡೆ ನಾಚಿಕೆಗೇಡು ಎಂದು ಎಎಪಿ ಟೀಕಿಸಿದೆ. ಜನರು 3 ತಿಂಗಳ ಕಾಲ ಲಾಕ್‌ಡೌನ್ ನಿಯಮಗಳನ್ನು ಕಠಿಣವಾಗಿ ಪಾಲಿಸಿಕೊಂಡು ಬಂದರೂ, ಸೋಂಕು ಸಮುದಾಯಕ್ಕೆ ಹರಡಲು ಸರ್ಕಾರದ ಅವೈಜ್ಞಾನಿಕ ತೀರ್ಮಾನಗಳೇ  ಕಾರಣ. ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ಈ ಎರಡು ಇಲಾಖೆಗಳ ಆಸ್ಪತ್ರೆಗಳಲ್ಲೂ ಸಹ ಯಾವುದೇ ರೀತಿಯ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡದೇ, ಈಗ ಖಾಸಗಿ ಆಸ್ಪತ್ರೆಗಳಲ್ಲಿ ಜನ ಸಾಮಾನ್ಯರು ಚಿಕಿತ್ಸೆ ತೆಗೆದುಕೊಳ್ಳಲಿ ಎನ್ನುವ ಮೂಲಕ ಉಳ್ಳವರ ಜೇಬು ತುಂಬಿಸಲು ಹೊರಟಿರುವ ಹುನ್ನಾರ ಎಂದು ಆರೋಪಿಸಿದ್ದಾರೆ.

ಶಿವಕುಮಾರ್ ಬೆಸಗರಹಳ್ಳಿ, ಕರ್ನಾಟಕ ಟಿವಿ

- Advertisement -

Latest Posts

Don't Miss