Friday, August 29, 2025

Latest Posts

ನಿಮ್ಮ ಸೌಂದರ್ಯ ಇಮ್ಮಡಿಗೊಳಿಸುತ್ತೆ ಸ್ಟೀಮಿಂಗ್..!

- Advertisement -

ಮಹಿಳಾ ಮಣಿಯರು ತ್ವಚೆಯ ಸಮಸ್ಯೆ ಕಂಡುಬಂದಾಗ ಮನೆಮದ್ದು ಬಳಸಿ ಫೇಸ್‌ಪ್ಯಾಕ್, ಫೇಶಿಯಲ್ ಮಾಡಿಕೊಳ್ತಾರೆ. ಆದ್ರೆ ಇದಕ್ಕೂ ಮೊದಲು ಸ್ಟೀಮ್ ತೆಗೆದುಕೊಂಡರೆ ನೀವು ಉತ್ತಮ ಲಾಭ ಪಡೆದುಕೊಳ್ಳಬಹುದು.

ಸ್ಟೀಮ್ ತೆಗೆದುಕೊಂಡಾಗ ತ್ವಚೆಯ ರಂಧ್ರಗಳು ತೆರೆದುಕೊಳ್ಳುತ್ತದೆ. ಇದರಿಂದ ಮುಖದ ಕೊಳೆ ಹೊರಹೋಗಿ , ಚರ್ಮ ಸ್ವಚ್ಛವಾಗುತ್ತದೆ. ಹೀಗಾಗಿ ನೈಸರ್ಗಿಕವಾಗಿ ಫೇಸ್‌ಪ್ಯಾಕ್, ಬ್ಲೀಚಿಂಗ್ ಬಳಸುವುದರ ಜೊತೆಗೆ ಸ್ಟೀಮ್ ಮಾಡುವುದಿಂದ ಉತ್ತಮ ಫಲಿತಾಂಶ ಕಂಡುಕೊಳ್ಳಬಹುದು.

ಒಣತ್ವಚೆಯುಳ್ಳವರು 5ರಿಂದ 6 ನಿಮಿಷ ಸ್ಟೀಮ್ ತೆಗೆದುಕೊಳ್ಳಿ. ಎಣ್ಣೆ ಅಂಶವುಳ್ಳ ತ್ವಚೆಯಾಗಿದ್ದರೆ, 10ರಿಂದ 12 ನಿಮಿಷ ಸ್ಟೀಮ್ ತೆಗೆದುಕೊಳ್ಳಿ. ಅಲ್ಲದೇ ರಕ್ತ ಸಂಚಾರ ಕೂಡ ಉತ್ತಮಗೊಂಡು, ಮುಖದ ಕಾಂತಿ ಹೆಚ್ಚಾಗುವುದರಲ್ಲಿ ಸ್ಟೀಮಿಂಗ್ ಸಹಕಾರಿಯಾಗಿದೆ.

ಫೇಶಿಯಲ್ ಮಾಡುವ ಮೊದಲು ಮುಖವನ್ನ ಸ್ವಚ್ಛವಾಗಿ ತೊಳೆದುಕೊಂಡು, ನಂತರ ಸ್ಕ್ರಬಿಂಗ್ ಮಾಡಿ, ನಂತರ ಸ್ಟೀಮ್ ತೆಗೆದುಕೊಳ್ಳಿ. ಸ್ವಲ್ಪ ಹೊತ್ತಿನ ಬಳಿಕ ಫೇಶಿಯಲ್ ಮಾಡಿಕೊಳ್ಳಿ.

1..ಸ್ಟೀಮ್ ಮಾಡುವಾಗ ಪಾತ್ರೆ, ಅಥವಾ ಫೆಶಿಯಲ್ ಸ್ಟೀಮರ್ ಬಳಸಬಹುದು. ಕುದಿಯುವ ನೀರಿಗೆ ನಿಂಬೆ ಹೋಳುಗಳನ್ನ ಸಹ ಬಳಸಬಹುದು. ನಿಂಬೆ ಹಣ್ಣಿನಲ್ಲಿ ಸಿಟ್ರಿಕ್ ಆ್ಯಸಿಡ್ ಇದ್ದು, ಎಣ್ಣೆ ಚರ್ಮವುಳ್ಳವರಿಗೆ ಈ ಸ್ಟೀಮ್ ತುಂಬಾ ಉಪಯೋಗಕಾರಿಯಾಗಿದೆ.

2..ಸ್ಟೀಮ್ ತೆಗೆದುಕೊಳ್ಳುವಾಗ ಲವಂಗ ಮತ್ತು ಪುದೀನಾ ಸಹ ಬಳಸಬಹುದು. ಇದರ ಜೊತೆ ಬೇವಿನ ಸೊಪ್ಪನ್ನೂ ಕೂಡ ಬಳಸಬಹುದು. ಮೊಡವೆ, ಗುಳ್ಳೆಯ, ಇನ್‌ಫೆಕ್ಷನ್ ಸಮಸ್ಯೆ ಇದ್ದರೆ, ಈ ಸ್ಟೀಮ್ ಬಳಸಿ ಪರಿಹಾರ ಕಂಡುಕೊಳ್ಳಬಹುದು. ಈ ಸ್ಟೀಮ್ ನಂಜುನಿರೋಧಕವಾಗಿ ಕೆಲಸ ಮಾಡುವುದು.

3..ಗ್ರೀನ್ ಟೀ ಬಳಸಿಯೂ ಸ್ಟೀಮ್ ತೆಗೆದುಕೊಳ್ಳಬಹುದು. ಇದರಿಂದಲೂ ತ್ವಚೆಯ ಸಮಸ್ಯೆಗೆ ಪರಿಹಾರ ಸಿಗುವುದು.

4..ಪಾತ್ರೆಯಲ್ಲಿ ನೀರು ಹಾಕಿ ಕುದಿಸುವಾಗ ಅದಕ್ಕೆ ಒಂದು ಚಮಚ ಉಪ್ಪು ಸೇರಿಸಿ, ಸ್ಟೀಮ್ ತೆಗೆದುಕೊಳ್ಳಿ. ಉಪ್ಪು ಚರ್ಮವನ್ನ ಸ್ವಚ್ಛವಾಗೊಳಿಸುವುದರಲ್ಲಿ ಸಹಕಾರಿಯಾಗಿದೆ.

ಸ್ಟೀಮ್ ತೆಗೆದುಕೊಳ್ಳುವಾಗ ಪಾತ್ರೆಯಿಂದ ಸ್ವಲ್ಪ ಅಂತರದಲ್ಲಿರಿ. ತುಂಬ ಹತ್ತಿರದಿಂದ ಸ್ಟೀಮ್ ತೆಗೆದುಕೊಳ್ಳುವುದರಿಂದ ಮುಖ ಸುಡುವ ಸಾಧ್ಯತೆ ಇರುತ್ತದೆ.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

- Advertisement -

Latest Posts

Don't Miss