Friday, September 20, 2024

Latest Posts

ದೀಪಿಕಾ ಪಡುಕೋಣೆ ಬಾಡಿಗಾರ್ಡ್ ಸ್ಯಾಲರಿ ಕೇಳಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ..!

- Advertisement -

ಉಡುಪಿ ಬೆಡಗಿ ದೀಪಿಕಾ ಪಡುಕೋಣೆ ಸ್ಯಾಂಡಲ್‌ವುಡ್‌ನಿಂದ ತಮ್ಮ ಜರ್ನಿ ಶುರು ಮಾಡಿ, ಬಾಲಿವುಡ್‌ನಲ್ಲಿ ಅತ್ಯುತ್ತಮ ನಟಿ ಎನ್ನಿಸಿಕೊಂಡು, ಹಾಲಿವುಡ್‌ಗೂ ಚಿರಪರಿಚಿತಳಾಗಿರುವ ನಟಿ.

ಇಂಥ ಫೇಮಸ್‌ ನಟಿ ಎಲ್ಲಿ ಹೋದ್ರು, ಆಕೆಯ ಸುತ್ತ ಅಭಿಮಾನಿಗಳು ಮುತ್ತಿಕೊಳ್ಳುವುದಂತೂ ಸಹಜ. ಈ ಸಂದರ್ಭದಲ್ಲಿ ಆಕೆಯ ರಕ್ಷಣೆಗೆಂದೇ ಬಾಡಿಗಾರ್ಡ್‌ ಅಂತೂ ಇದ್ದೇ ಇರ್ತಾರೆ. ಅಂಥ ಬಾಡಿಗಾರ್ಡ್‌ಗೆ ದೀಪಿಕಾ ಕೊಡುವ ಸಂಬಳದ ಬಗ್ಗೆ ಕೇಳಿದ್ರೆ ನಿಮಗೆ ಶಾಕ್ ಆಗೋದು ಗ್ಯಾರಂಟಿ.

ದೀಪಿಕಾ ಪಡುಕೋಣೆ ಶೂಟಿಂಗ್, ದೇವಸ್ಥಾನ ಅಥವಾ ಬೇರೆ ಯಾವುದೇ ಕಾರ್ಯಕ್ರಮಗಳಿಗೆ ತೆರಳಿದ್ರೂ ಅಲ್ಲಿ ಅವರ ಬಾಡಿಗಾರ್ಡ್ ಜಲಾಲ್ ಇದ್ದೇ ಇರ್ತಾರೆ. ಜಲಾಲ್‌ರನ್ನ ದೀಪಿಕಾ ಅವರ ಮನೆಯ ಸದಸ್ಯನ ರೀತಿ ಕಾಣ್ತಾರೆ. ಅಲ್ಲದೇ ಜಲಾಲ್‌ರನ್ನ ಅಣ್ಣನ ರೀತಿ ಕಾಣುವ ದೀಪಿಕಾ, ಜಲಾಲ್‌ಗೆ ಪ್ರತಿವರ್ಷ ರಾಖಿ ಕಟ್ಟುತ್ತಾರಂತೆ.

ಇನ್ನು ಜಲಾಲ್‌ಗೆ ದೀಪಿಕಾ ವರ್ಷಕ್ಕೆ ಒಂದು ಕೋಟಿ ರೂಪಾಯಿ ಸ್ಯಾಲರಿ ನೀಡುತ್ತಾರೆ.ಅಂದರೆ ತಿಂಗಳಿಗೆ ಜಲಾಲ್ ಸಂಬಳ 8 ಲಕ್ಷಕ್ಕೂ ಹೆಚ್ಚಿದೆ.

ಇನ್ನು ದೀಪಿಕಾ ಚಿತ್ರದ ಬಗ್ಗೆ ಮಾತನಾಡೋದಿದ್ರೆ, ಈ ವರ್ಷ ಛಪಾಕ್ ಅನ್ನೋ ಸಿನಿಮಾ ರಿಲೀಸ್ ಆಗಿದ್ದು, ಈ ಚಿತ್ರ ಅಷ್ಟೇನು ಸದ್ದು ಮಾಡಿರಲಿಲ್ಲ. ದೀಪಿಕಾರ ಮುಂದಿನ ಚಿತ್ರ 83 ಸಿನಿಮಾ ರಿಲೀಸ್‌ಗೆ ರೆಡಿಯಾಗಿದ್ದು, ಲಾಕ್‌ಡೌನ್ ಇದ್ದ ಕಾರಣ ಚಿತ್ರದ ಬಿಡುಗಡೆಯನ್ನ ಮುಂದೂಡಲಾಗಿದೆ.

- Advertisement -

Latest Posts

Don't Miss