Sunday, December 22, 2024

Latest Posts

ಹೊಳೆ ಆಂಜನೇಯನಿಗೆ ಹರಕೆ ಹೊತ್ತ ಪೊಲೀಸ್ ಕಮಿಷನರ್

- Advertisement -

ಕರ್ನಾಟಕ ಟಿವಿ ಮಂಡ್ಯ : ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಮಂಡ್ಯ ಜಿಲ್ಲೆ ಮದ್ದೂರಿನ ಇತಿಹಾಸ ಪ್ರಸಿದ್ಧ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ರು. ಪೂಜೆ ಸಲ್ಲಿಸಿದ ಭಾಸ್ಕರ್ ರಾವ್ ಇದೇ ವೇಳೆ 20 ವರ್ಷಗಳ ಹಿಂದೆ ತನ್ನ ಜೊತೆ ಕೆಲಸ ಮಾಡಿದ್ದ ಪೇದೆಯನ್ನ ಆತ್ಮೀಯವಾಗಿ ಮಾತನಾಡಿಸಿದ್ರು. ಭಾಸ್ಕರ್ ಆಗಮನ ಹಿನ್ನೆಲೆ ಮಂಡ್ಯ ಎಸ್ಪಿ ಪರಶುರಾಮ್ ಹಾಗೂ ಮಳವಳ್ಳಿ ಡಿವೈಎಸ್ಪಿ ಪೃಥ್ವಿ ಅವರು ಹಾಜರಿದ್ರು..  ದೇವರಿಗೆ ಪೂಜೆ ಸಲ್ಲಿಸಿ ಹರಿಕೆ ಕಟ್ಟಿಕೊಂಡ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ರನ್ನ ದೇವಾಲಯದ ವತಿಯಿಂದ ಸ್ವಾಗತಿಸಿ ಸನ್ಮಾನ ಮಾಡಲಾಯ್ತು.

ಹೊಳೆ ಆಂಜನೇಯ ಸ್ವಾಮೀ ದೇವಸ್ಥಾನ ಒಂದು ಕಾಲು ರೂಪಾಯಿ ಹರಿಕೆಗೆ ಪ್ರಸಿದ್ದಯಾಗಿರುವ  ಇಲ್ಲಿ ರಾಜಕೀಯ ಗಣ್ಯರು ಸೇರಿದಂತೆ ಸಿನಿಮಾ ನಟ,ನಟಿಯರು ಆಗಮಿಸ್ತಾರೆ.. 

ಪ್ರವೀಣ್ ಕುಮಾರ್ ಜಿ.ಟಿ, ಕರ್ನಾಟಕ ಟಿವಿ, ಮಂಡ್ಯ

- Advertisement -

Latest Posts

Don't Miss