- Advertisement -
ಮಂಡ್ಯ: ಕೊರೊನಾ ಬಿಕ್ಕಟ್ಟಿನ ನಡುವೆಯೂ ಮಂಡ್ಯ ಜಿಲ್ಲಾ ಜನತೆಗೆ ಸಂತೋಷದ ಸುದ್ದಿ ದೊರೆತಿದ್ದು, ಮಂಡ್ಯ ಜಿಲ್ಲಾಪಂಚಾಯತ್ ರಾಷ್ಟ್ರೀಯ ಪುರಸ್ಕಾರಕ್ಕೆ ಪಾತ್ರವಾಗಿದ್ದು, ಸಂಸದೆ ಸುಮಲತಾ ಅಂಬರೀಷ್ ಅಭಿನಂದನೆ ಸಲ್ಲಿಸಿದ್ದಾರೆ.

ಕೇಂದ್ರ ಸರ್ಕಾರದ ಪಂಡಿತ್ ದೀನದಯಾಳ್ ಉಪಾಧ್ಯಾಯ ಪಂಚಾಯತ್ ಸಶಕ್ತೀಕರಣದ ಪ್ರಶಸ್ತಿಗೆ ಮಂಡ್ಯ ಜಿಲ್ಲಾಪಂಚಾಯತ್ ಪಾತ್ರವಾಗಿದೆ. ಪ್ರಶಸ್ತಿ ಮತ್ತು 50 ಲಕ್ಷ ರೂಪಾಯಿ ನಗದು ದೊರಕಿದೆ.
ಇನ್ನು ಗ್ರಾಮ ಪಂಚಾಯತಿ ವಿಭಾಗದಲ್ಲಿ ಮದ್ದೂರು ತಾಲ್ಲೂಕಿನ ಅಣ್ಣೂರು ಗ್ರಾಮ ಪಂಚಾಯತಿ ಪ್ರಶಸ್ತಿ ಪಡೆದುಕೊಂಡಿದ್ದು, ಎರಡೂ ಪಂಚಾಯಿತಿಗಳಿಗೆ ಮಂಡ್ಯ ಜಿಲ್ಲೆಯ ಸಮಸ್ತ ನಾಗರಿಕರ ಪರವಾಗಿ ಸಂಸದೆ ಸುಮಲತಾ ಅಂಬರೀಷ್, ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರವೀಣ್ ಕುಮಾರ್ ಜಿ.ಟಿ, ಕರ್ನಾಟಕ ಟಿವಿ, ಮಂಡ್ಯ
- Advertisement -

