ನೆಲ್ಲಿಕಾಯಿಯಲ್ಲಿದೆ ಹಲವು ಚಮತ್ಕಾರಿ ಗುಣ..!

ನಿಸರ್ಗದಿಂದ ಸಿಕ್ಕ ಕೊಡುಗೆಗಳಲ್ಲಿ ನೆಲ್ಲಿಕಾಯಿ ಕೂಡಾ ಒಂದು. ನೆಲ್ಲಿಕಾಯಿಂದ ಉಪ್ಪಿನಕಾಯಿ, ನೆಲ್ಲಿಕಾಯಿ ಮುರಬ್ಬಾ, ನೆಲ್ಲಿ ಅಡಿಕೆ, ನೆಲ್ಲಿ ಜ್ಯೂಸ್ ಹೀಗೆ ನೆಲ್ಲಿಕಾಯಿಯನ್ನ ಹಲವು ರೀತಿಯಲ್ಲಿ ಉಪಯೋಗಿಸುತ್ತಾರೆ. ಇಂಥ ನೆಲ್ಲಿಕಾಯಿಯಿಂದ ಆಗುವ 5 ಲಾಭಗಳನ್ನು ನಾವಿಂದು ತಿಳಿಸಲಿದ್ದೇವೆ.

1.. ಕೂದಲಿನ ಸೌಂದರ್ಯ ಹೆಚ್ಚಿಸುವಲ್ಲಿ ನೆಲ್ಲಿಕಾಯಿ ಪ್ರಮುಖ ಪಾತ್ರ ವಹಿಸುತ್ತದೆ. ತಲೆಗೆ ಮೆಹಂದಿ ಅಪ್ಲೈ ಮಾಡುವಾಗ ನೆಲ್ಲಿಕಾಯಿ ಪುಡಿಯನ್ನೂ ಇದರೊಟ್ಟಿಗೆ ಸೇರಿಸಿ ಹಚ್ಚಿ. ಈ ರೀತಿ ಮಾಡುವುದರಿಂದ ಇದು ನ್ಯಾಚುರಲ್ ಕಂಡೀಷನರ್ ಆಗಿ ಕೆಲಸ ಮಾಡುತ್ತದೆ. ಅಲ್ಲದೇ, ಕೂದಲಿನ ಬುಡ ಧೃಡವಾಗಿರುತ್ತದೆ.

2.. ಮೂರು ಚಮಚ ನೆಲ್ಲಿಕಾಯಿ ರಸ ಮತ್ತು ಮೂರು ಚಮಚ ಈರುಳ್ಳಿ ರಸ ತೆಗೆದುಕೊಂಡು ಮಿಕ್ಸ್ ಮಾಡಿ ತಲೆಗೆ ಮಸಾಜ್‌ ಮಾಡಿ ಕೆಲ ಹೊತ್ತಿನ ಬಳಿಕ ತಲೆಸ್ನಾನ ಮಾಡಿ. ಹೀಗೆ ಮಾಡುವುದರಿಂದ ಕೂದಲಿನ ಬುಡ ಗಟ್ಟಿಗೊಳ್ಳುವುದಲ್ಲದೇ, ಕೂದಲು ಉದ್ದವಾಗಿ ಬೆಳೆಯುವುದು.

3.. ತೂಕ ಕಡಿಮೆ ಮಾಡುವುದರಲ್ಲಿ ನೆಲ್ಲಿಕಾಯಿ ಪ್ರಮುಖಪಾತ್ರ ವಹಿಸುತ್ತದೆ. ಹಿಂದಿನ ಕಾಲದಲ್ಲಿ ಕ್ಷತ್ರೀಯರು ಯುದ್ಧಕ್ಕೆ ಹೋಗುವ ಸಮಯದಲ್ಲಿ, ತರಬೇತಿ ಪಡೆಯುತ್ತಿದ್ದರು. ಈ ಸಮಯದಲ್ಲಿ ಅವರಿಗೆಲ್ಲ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ತಿನ್ನಲು ಕೊಡುತ್ತಿದ್ದರಂತೆ. ಇದರಿಂದ ಅವರ ದೇಹದಲ್ಲಿ ಚರ್ಬಿ ಕಡಿಮೆಯಾಗಿ, ಯುದ್ಧ ಮಾಡಲು ಶಕ್ತಿ ಬರುತ್ತಿತ್ತಂತೆ.

4.. ನೆಲ್ಲಿಕಾಯಿಯಲ್ಲಿ ವಿಟಾಮಿನ್ ಸಿ ಇರುವುದರಿಂದ ಇದು ಕಣ್ಣಿಗೆ ತುಂಬಾ ಒಳ್ಳೆಯದು. ಚಿಕ್ಕ ಮಕ್ಕಳಿರುವಾಗಲೇ ಕೆಲವರಿಗೆ ಕನ್ನಡಕದ ಅವಶ್ಯಕತೆ ಇರುತ್ತದೆ. ಇದನ್ನ ತಡೆಗಟ್ಟಲು ಮಕ್ಕಳಿಗೆ ನೆಲ್ಲಿಕಾಯಿ ತಿನ್ನಿಸಬೇಕು.

5.. ಗರ್ಭಿಣಿಯರು ನೆಲ್ಲಿಕಾಯಿ ಸೇವನೆ ಮಾಡುವುದರಿಂದ ದೇಹ ತಂಪಾಗಿರುತ್ತದೆ. ಕೈ ಕಾಲು ಉರಿ ಬರುವುದನ್ನು ತಡೆಗಟ್ಟುವಲ್ಲಿ ನೆಲ್ಲಿಕಾಯಿ ಸಹಕಾರಿಯಾಗಿದೆ.

6.. ಅಂಗಡಿಯಲ್ಲಿ ಜೀರ್ಣಕ್ರಿಯೆಗಾಗಿ ಸಿಗುವ ಗುಳಿಗೆಯಲ್ಲಿ ನೆಲ್ಲಿಕಾಯಿಯನ್ನ ಬಳಕೆ ಮಾಡಿರುತ್ತಾರೆ. ಏಕೆಂದರೆ ನೆಲ್ಲಿಕಾಯಿಯಲ್ಲಿ ಜೀರ್ಣಕ್ರಿಯೆ ಹೆಚ್ಚಿಸುವ ಶಕ್ತಿ ಇರುತ್ತದೆ.

7.. ಗರ್ಭಿಣಿಯಾಗಿದ್ದಾಗ ಕಣ್ಣಿನ ದೃಷ್ಟಿ ವೀಕ್ ಆಗಿರುತ್ತದೆ. ಈ ಕಾರಣಕ್ಕೆ ನೆಲ್ಲಿಕಾಯಿ ಸೇವನೆ ಮಾಡುವುದು ಉತ್ತಮವಾಗಿರುತ್ತದೆ. ಇದು ತಾಯಿ ಮತ್ತು ಮಗುವಿನ ಆರೋಗ್ಯಾಭಿವೃದ್ಧಿಯಲ್ಲಿ ಸಹಕಾರಿಯಾಗಿದೆ.

8.. ನೆಲ್ಲಿಕಾಯಿ ಬರೀ ಆರೋಗ್ಯ ವರ್ಧಕ ಮಾತ್ರವಲ್ಲ. ಸೌಂದರ್ಯವರ್ಧಕವೂ ಹೌದು. ನೆಲ್ಲಿಕಾಯಿಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಮುಖ ಸುಕ್ಕುಗಟ್ಟುವಿಕೆ, ಮುಖದಲ್ಲಿ ಕಪ್ಪು ಕಲೆಗಳಿದ್ದರೆ, ಅವು ಕಡಿಮೆಯಾಗುವುದು.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

About The Author