Tuesday, October 14, 2025

Latest Posts

ಜೂನ್ 21ಕ್ಕೆ ಸೂರ್ಯಗ್ರಹಣ: 12 ರಾಶಿಗಳ ಫಲಾಫಲ..

- Advertisement -

ಜೂನ್ 21, ಆಷಾಢ ಮಾಸದ ಅಮವಾಸ್ಯೆಯಂದು ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದ್ದು, ಸುಮಾರು 30 ಸೆಕೆಂಡುಗಳ ಕಾಲ ಸೂರ್ಯ ಮುತ್ತಿನಹಾರದಂತೆ ಗೋಚರಿಸುತ್ತಾನೆಂದು ವಿಜ್ಞಾನಿಗಳು ಹೇಳಿದ್ದಾರೆ.

ನಭೋಮಂಡಲದಲ್ಲಿ ಗೋಚರಿಸಲಿರುವ ಈ ಅಧ್ಭುತವನ್ನು ಹರಿಯಾಣ, ಉತ್ತರಾಖಂಡ, ರಾಜಸ್ಥಾನದಲ್ಲಿ ಮಾತ್ರ ನೋಡಲು ಸಿಗುತ್ತದೆ. ಇನ್ನುಳಿದಂತೆ ಭಾರತದ ಬಹುಭಾಗದಲ್ಲಿ ಸೂರ್ಯಗ್ರಹಣ ಗೋಚರಿಸಲಿದೆ.

ಶ್ರೀ ಶಾರ್ವರಿ ನಾಮ ಸಂವತ್ಸರದ ಜೇಷ್ಠ ಕೃಷ್ಣ ಅಮವಾಸ್ಯೆಯಂದು ಮೃಗಶಿರ ಮತ್ತು ಆರಿದ್ರಾ ನಕ್ಷತ್ರದಲ್ಲಿ, ಮಿಥುನ ರಾಶಿಯಲ್ಲಿ, ಸಿಂಹ ಮತ್ತು ಕನ್ಯಾ ಲಗ್ನದಲ್ಲಿ, ರಾಹುಗ್ರಸ್ತ ಸೂರ್ಯಗ್ರಹಣ ಸಂಭವಿಸುತ್ತದೆ. ಗ್ರಹಣವು ಭಾರತದಲ್ಲಿ ಕಾಣಿಸುವುದರಿಂದ ಗ್ರಹಣಾಚರಣೆ ಇರುತ್ತದೆ.

ಈ ಗ್ರಹಣ ಭಾರತ ಸೇರಿ, ಚೀನಾ, ಪಾಕಿಸ್ತಾನ, ಕಾಂಗೋ, ಮಧ್ಯಆಫ್ರಿಕಾ, ಇಥಿಯೋಪಿಯಾ ದೇಶಗಳಲ್ಲಿ ಗೋಚರಿಸಲಿದೆ. ಗ್ರಹಣವನ್ನು ಬರೀಗಣ್ಣಿನಿಂದ ನೋಡುವುದು ಒಳ್ಳೆಯದಲ್ಲ, ಬೈನಾಕೂಲರ್, ದೂರ್ಬಿನ್‌ನಿಂದ ಸೂರ್ಯಗ್ರಹಣ ವೀಕ್ಷಿಸಿ.

ಮೇಷ, ಮಕರ, ಸಿಂಹ, ಕನ್ಯಾ ರಾಶಿಯವರಿಗೆ ಈ ಸೂರ್ಯಗ್ರಹಣ ಶುಭಫಲ ತರಲಿದೆ. ಈ ರಾಶಿಯವರು ಸೂರ್ಯಗ್ರಹಣದ ಬಳಿಕ ಅಭಿವೃದ್ಧಿ ಹೊಂದಲಿದ್ದಾರೆ.

ಇನ್ನು ವೃಷಭ, ತುಲಾ, ಧನಸ್ಸು, ಕುಂಭ ರಾಶಿಯವರಿಗೆ ಲಾಭ ನಷ್ಟ ಯಾವುದೂ ಇರುವುದಿಲ್ಲ. ಈ ರಾಶಿಯವರಿಗೆಲ್ಲ ಮಿಶ್ರ ಫಲ ದೊರೆಯಲಿದೆ.

ಮಿಥುನ ರಾಶಿ, ವೃಶ್ಚಿಕ ರಾಶಿ , ಕರ್ಕ ರಾಶಿ, ಮೀನ ರಾಶಿಯವರಿಗೆ ಈ ಸೂರ್ಯಗ್ರಹಣ ಅಶುಭ ಫಲ ತಂದುಕೊಡಲಿದೆ. ಈ ರಾಶಿಯವರಿಗೆ ತಾಪತ್ರಯಗಳು ಎದುರಾಗಲಿದೆ.

- Advertisement -

Latest Posts

Don't Miss