ಮಂಡ್ಯ: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ಪ್ರಭಾವಿ ವ್ಯಕ್ತಿಯೊಬ್ಬರು ಥಾರ್ ಮಿಕ್ಸಿಂಗ್ ಘಟಕ ಆರಂಭಿಸಿದ್ದು, ಸುತ್ತಮುತ್ತಲ ಘಟಕಗಳಿಗೆ ಇದರಿಂದ ತೊಂದರೆ ಉಂಟಾಗಿದೆ.

ಯಾವುದೇ ಪರವಾನಗಿ ಪಡಿಯದೇ ಕೃಷಿ ಭೂಮಿಯಲ್ಲಿ ಈ ಥಾರ್ ಮಿಕ್ಸಿಂಗ್ ಯೂನಿಟ್ ಶುರು ಮಾಡಿದ್ದು, ಥಾರ್ ಮಿಕ್ಸ್ ಘಟಕದ ಹೊಗೆ ಮತ್ತು ದುರ್ಗಂಧಕ್ಕೆ ಸುತ್ತಮುತ್ತಲ ಗ್ರಾಮಗಳ ಜನರು ಹೈರಾಣಾಗಿದ್ದಾರೆ. ಇದರ ಪ್ರಭಾವ ಕೃಷಿ ಮತ್ತು ಜಾನುವಾರುಗಳ ಮೇಲೆ ಬಿದ್ದು, ಬೆಳೆ ನಾಶವಾಗುವ ಪರಿಸ್ಥಿತಿ ಎದುರಾಗಿದೆ.
ಜಾನುವಾರುಗಳ ಮೇವಿಗೂ ಕಾರ್ಬನ್ ಅಂಟಿದ್ದು, ಪಕ್ಕದಲ್ಲೆ ಇರೋ ಕೆರೆಯ ನೀರು ಕೂಡ ಘಟಕದಿಂದ ಬರುವ ಧೂಳಿನಿಂದ ಕಲುಷಿತಗೊಂಡಿದೆ. ಈ ಕಾರಣಕ್ಕೆ ಥಾರ್ ಮಿಕ್ಸಿಂಗ್ ಘಟಕದ ತೆರವಿಗೆ ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪರಿಸರಕ್ಕೆ ಮಾರಕವಾಗಿ ಜನ ಜಾನುವಾರಿಗೆ ಸಂಕಷ್ಟ ತರ್ತಿರೋ ಈ ಘಟಕ ತೆರವು ಗೊಳಿಸದಿದ್ರೆ ಜನರು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇಷ್ಟೆಲ್ಲ ಅಕ್ರಮ ನಡೀತಿರೋ ಬಗ್ಗೆ ದೂರು ನೀಡಿದ್ರು, ನಾಗಮಂಗಲ ತಾಲೂಕು ಆಡಳಿತ ಮಾತ್ರ ಕಣ್ಮುಚ್ಚಿ ಕುಳಿತಿದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.




