Tuesday, November 18, 2025

Latest Posts

ನಕಲಿ ಆಧಾರ್ ತೋರಿಸಿ, ಸಂಸತ್ ಪ್ರೇವಶಿಸಲು ಪ್ರಯತ್ನಿಸಿದವರ ಬಂಧನ

- Advertisement -

News Delhi: ನಕಲಿ ಆಧಾರ್ ಕಾರ್ಡ್ ತೋರಿಸಿ, ಸಂಸತ್ ಪ್ರೇವಶಿಸಲು ಯತ್ನಿಸಿದ ಮೂವರನ್ನು ಬಂಧಿಸಲಾಗಿದೆ. ಜೂನ್ 4ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ನಕಲಿ ಆಧಾರ್ ಕಾರ್ಡ್‌ ತೋರಿಸಿದ ಮೂವರನ್ನು ಸಿಐಪಿಎಫ್ ಅರೆಸ್ಟ್ ಮಾಡಿದ್ದು, ಕಾಸಿಮ್, ಮೊಯೇಮ್ ಮತ್ತು ಶೋಯೇಬ್ ಎಂಬ ಮೂವರು ಈ ಕೃತ್ಯ ಎಸಗಿದ್ದಾರೆ. ಈ ಮೂವರು ಕಾರ್ಮಿಕರ ವೇಷ ಧರಿಸಿ, ನಕಲಿ ಆಧಾರ್ ತೋರಿಸಿ, ಸಂಸತ್ ಭವನದ 3 ನಂಬರ್ ಗೇಟ್‌ನಿಂದ ಪ್ರವೇಶಿಸಲು ಪ್ರಯತ್ನಿಸಿದ್ದರು. ಈ ಮೂವರನ್ನು ಬಂಧಿಸಿ, ಇವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಘಟನೆಯ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಕೆಲ ತಿಂಗಳ ಹಿಂದೆ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಬಳಿ ಪಾಸ್ ಪಡೆದು, ಮೂವರು ಸಂಸತ್ತು ಪ್ರವೇಶಿಸಿ, ಅಶ್ರುವಾಯು ಸಿಡಿಸಿದ್ದರು. ಸಂಸತ್ ಭವನದಲ್ಲಿ ಈ ಮೊದಲು ದಾಳಿ ನಡೆದು 22 ವರ್ಷ ತುಂಬಿದ ದಿನವೇ, ಮತ್ತೊಮ್ಮೆ ಇಂಥ ಘಟನೆ ನಡೆದಿತ್ತು. ಈ ಪ್ರಕರಣ ಮಾಸುವ ಮುನ್ನವೇ ಇಂಥ ಘಟನೆ ನಡೆದಿದ್ದು, ಆತಂಕ ಸೃಷ್ಟಿಸಿದೆ.

ಸ್ವಇಚ್ಛೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಾಗೇಂದ್ರ

ಅಯೋಧ್ಯೆ ಸದಾ ರಾಜನಿಗೆ ದ್ರೋಹವೇ ಆಗಿದೆ ಎಂದ ನಟ

ಸ್ವಇಚ್ಛೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಾಗೇಂದ್ರ

- Advertisement -

Latest Posts

Don't Miss