ಡ್ರೈಫ್ರೂಟ್ಸ್ ಅಂದ ತಕ್ಷಣ ಥಟ್ ಅಂತಾ ನೆನಪಾಗೋದು ಬಾದಾಮ್. ಯಾಕಂದ್ರೆ ಒಣಹಣ್ಣುಗಳಲ್ಲಿ ಹೆಚ್ಚಿನ ಮಹತ್ವ ಹೊಂದಿದ ಬಾದಾಮ್ ಹಲವು ಆರೋಗ್ಯಕರ ಗುಣಗಳನ್ನು ಹೊಂದಿದೆ.
ಮನೆಯಲ್ಲಿರುವ ಹಿರಿಯರು ಮಕ್ಕಳಿಗೆ ಬಾದಾಮ್ ತಿನ್ನಿ ಶಕ್ತಿ ಹೆಚ್ಚುತ್ತದೆ, ಬಾದಾಮ್ ತಿನ್ನಿ ನೆನೆಪಿನ ಶಕ್ತಿ ಉತ್ತಮಗೊಳ್ಳುತ್ತದೆ ಅನ್ನೋ ಮಾತು ಹೇಳೋದನ್ನ ಕೇಳಿರ್ತೀರಿ. ಹಾಗಾದ್ರೆ ನಾವಿವತ್ತು ಬಾದಾಮ್ ತಿನ್ನುವುದರಿಂದ ಆಗುವ 10 ಪ್ರಯೋಜನಗಳೇನು ಅನ್ನೋದನ್ನ ನೋಡೋಣ ಬನ್ನಿ.
1.. ನಾವೇನಾದ್ರು ಮರೆತು ಹೋದ್ರೆ, ನಮ್ಮ ಗೆಳೆಯರು, ಮನೆಜನರು ಬಾದಾಮ್ ತಿನ್ನು ಅಂತಾ ಮಾತಿಗೆ ಹೇಳೋದನ್ನ ನೋಡಿರ್ತೀರಿ. ಯಾಕಂದ್ರೆ, ನೆನಪಿನ ಶಕ್ತಿ ಹೆಚ್ಚಿಸುವಲ್ಲಿ ಬಾದಾಮ್ ಬೀಜ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಮರೆಗುಳಿ ಸ್ವಭಾದವರು ರಾತ್ರಿ ನೀರಿನಲ್ಲಿ ಬಾದಾಮ್ ನೆನೆಸಿಟ್ಟು, ಬೆಳಿಗ್ಗೆ ಅದರ ಸಿಪ್ಪೆ ತೆಗೆದು ತಿನ್ನಬೇಕು.
2.. ಮೂಳೆ ಮತ್ತು ಹಲ್ಲಿನ ಆರೋಗ್ಯವನ್ನು ಉತ್ತಮವಾಗಿರಿಸುವಲ್ಲಿ ಬಾದಾಮ್ ಸಹಕಾರಿಯಾಗಿದೆ. ಹಲ್ಲು ಮತ್ತು ಮೂಳೆಗೆ ಕ್ಯಾಲ್ಶಿಯಂನ ಅವಶ್ಯಕತೆ ಹೆಚ್ಚಾಗಿರುತ್ತದೆ. ಬಾದಾಮ್‌ನಲ್ಲಿ ಕ್ಯಾಲ್ಶಿಯಂನ ಅಂಶ ಹೆಚ್ಚಾಗಿರುತ್ತದೆ. ಈ ಕಾರಣಕ್ಕೆ ಬದಾಮ್ ತಿನ್ನುವುದರಿಂದ ಮೂಳೆ ಮತ್ತು ಹಲ್ಲು ಗಟ್ಟಿಗೊಳ್ಳುತ್ತದೆ.
3.. ಬಾದಾಮ್ ತಿನ್ನುವುದರಿಂದ ರಕ್ತ ಸಂಚಾರ ಉತ್ತಮಗೊಳ್ಳುತ್ತದೆ.
4.. ದೇಹದಲ್ಲಿ ಉಂಟಾಗುವ ಕ್ಯಾನ್ಸರ್ ಕಣಗಳನ್ನ ತಡೆಗಟ್ಟುವಲ್ಲಿ ಬಾದಾಮ್ ಸಹಕಾರಿಯಾಗಿದೆ.
5.. ಬಾದಾಮ್ ಬೀಜವನ್ನ ಶಕ್ತಿವರ್ಧಕ ಎಂದು ಹೇಳಲಾಗುತ್ತದೆ. ಚಿಕ್ಕವರಾಗಲಿ ದೊಡ್ಡವರಾಗಲಿ ನಿಯಮಿತವಾಗಿ ಬಾದಾಮ್ ಬೀಜವನ್ನು ಸೇವಿಸುವುದರಿಂದ ದೈಹಿಕವಾಗಿ ಗಟ್ಟಿಮುಟ್ಟುಗೊಳ್ಳುತ್ತಾರೆ.
6.. ಹೃದಯವನ್ನು ಆರೋಗ್ಯಕರವಾಗಿದಲು ಬಾದಾಮ್ ಸಹಕಾರಿಯಾಗಿದೆ.
7.. ಮಧುಮೇಹ ರೋಗಿಗಳು ಬಾದಾಮ್ ಸೇವನೆ ಮಾಡುವುದು ಒಳ್ಳೆಯದು.
8.. ಗರ್ಭಿಣಿ ಮಹಿಳೆಯರು ನೆನೆಸಿಟ್ಟ ಬಾದಾಮ್ ಬೀಜವನ್ನ ಸಿಪ್ಪೆ ತೆಗೆದು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಉತ್ತಮ.
9.. ಇನ್ನು ಸೌಂದರ್ಯವನ್ನ ಇಮ್ಮಡಿಗೊಳಿಸುವಲ್ಲಿಯೂ ಬಾದಾಮ್ ಉಪಯುಕ್ತವಾಗಿದೆ.
10.. ಕೂದಲಿನ ಆರೋಗ್ಯ ಅಭಿವೃದ್ಧಿಗೊಳಿಸುವಲ್ಲೂ ಬಾದಾಮ್ ಸಹಕಾರಿಯಾಗಿದೆ. 5 ಬಾದಾಮ್ ಬೀಜವನ್ನ ನೀರಿನೊಂದಿಗೆ ನೆನೆಸಿಟ್ಟು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸಿಪ್ಪೆ ತೆಗೆದ ಬಾದಾಮನ್ನ ಹಾಲಿನ ಜೊತೆ ಸೇವಿಸಿದರೆ ನಿಮ್ಮ ಕೂದಲಿನ ಆರೋಗ್ಯ ಉತ್ತಮಗೊಳ್ಳುತ್ತದೆ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ