ಕೊರೊನಾ ಬಗ್ಗೆ ಹಲವು ವದಂತಿಗಳನ್ನ ಹಬ್ಬಿಸಲಾಗುತ್ತಿದೆ. ಹೀಗೆ ಮಾಡಿದ್ದಲ್ಲಿ ಶಿಕ್ಷೆ ಸಿಗುತ್ತದೆ ಎಂದು ಗೊತ್ತಿದ್ದರೂ ಕಿಡಿಗೇಡಿಗಳು ಗಾಳಿ ಸುದ್ದಿ ಹಬ್ಬಿಸುತ್ತಲೇ ಇದ್ದಾರೆ.

ಇದೇ ರೀತಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮೀ ದರ್ಶನ್‌ಗೂ ಕೋವಿಡ್ 19 ಬಂದಿದೆ ಎಂಬ ಗಾಳಿ ಸುದ್ದಿ ಹಬ್ಬಿಸಲಾಗಿತ್ತು.
ಈ ಬಗ್ಗೆ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ ವಿಜಯಲಕ್ಷ್ಮಿ ದರ್ಶನ್, ಸಾಮಾಜಿಕ ಜಾಲತಾಣದಲ್ಲಿ ನೀವು ಕೇಳಿದ ಸುದ್ದಿ ಸುಳ್ಳು, ನಾನು ಕ್ಷೇಮವಾಗಿದ್ದೇನೆ. ಇಂಥ ಕಠಿಣ ಪರಿಸ್ಥಿತಿಯಲ್ಲಿ ಎಲ್ಲರೂ ಕ್ಷೇಮವಾಗಿರುವುದು ಮುಖ್ಯ ಎಂದಿದ್ದಾರೆ.
ಇನ್ನೊಂದೆಡೆ ನಟ ರವಿಶಂಕರ್ ಅಪಾರ್ಟ್‌ಮೆಂಟ್ ಎದುರಿನ ಮನೆಯವರಿಗೆ ಕೊರೊನಾ ವಕ್ಕರಿಸಿದ್ದು, ರವಿಶಂಕರ್ ಮನೆ ಬಾಗಿಲನ್ನು 14 ದಿನ ತೆರೆಯದೇ ಕ್ವಾರಂಟೈನ್‌ನಲ್ಲಿರಬೇಕು ಎನ್ನಲಾಗಿದೆ. ಅಪಾರ್ಟ್‌ಮೆಂಟ್‌ನಲ್ಲಿರುವ ತಮ್ಮ ಮಕ್ಕಳನ್ನು ದೇವರೇ ಕಾಪಾಡಬೇಕೆಂದು ರವಿಶಂಕರ್ ಟ್ವೀಟ್ ಮಾಡಿದ್ದಾರೆ.
ಅಲ್ಲದೇ, ಈ ವಿಷಯ ಗೊತ್ತಾಗುತ್ತಿದ್ದಂತೆ, ಸೃಜನ್ ಲೋಕೇಶ್, ಗೋಲ್ಡನ್ ಸ್ಟಾರ್ ಗಣೇಶ್, ಸುದೀಪ್ ತಮ್ಮ ಮನೆಯಲ್ಲಿರುವಂತೆ ಹೇಳಿದರಂತೆ.
ಈ ಬಗ್ಗೆ ಟ್ವೀಟ್ ಮಾಡಿ ಧನ್ಯವಾದ ತಿಳಿಸಿದ ರವಿಶಂಕರ್, ಸುದೀಪ , ಗಣಪ , ಸೃಜಾನ , ಮಕ್ಕಳನ್ನು ಕರೆದುಕೊಂಡು ನಮ್ಮನೆಗೆ ಬಾ ಅಂದರು. ಇದು ಗೆಳೆತನ ಅಂದ್ರೆ. ವಿಚಾರಿಸಿದ , ಸಂತೋಷ್ ಆನಂದ್ , ರಘುರಾಮ್ , ಧನ್ಯವಾದಗಳು ಎಂದಿದ್ದಾರೆ.
ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾವಿನ ಸಂಖ್ಯೆಯೂ ಏರುತ್ತ ಹೊರಟಿದೆ. ಈಗಾಗಲೇ ಕೆಲ ಏರಿಯಾಗಳನ್ನ ಸೀಲ್‌ಡೌನ್ ಮಾಡಲಾಗಿದ್ದು, ಬೆಂಗಳೂರನ್ನ ಮತ್ತೆ ಲಾಕ್‌ಡೌನ್ ಮಾಡಬೇಕೆಂಬ ಕೂಗು ಕೇಳಿಬರುತ್ತಿದೆ.
