Friday, November 22, 2024

Latest Posts

ಕಾಂಗ್ರೆಸ್‌ನ ಪಂಚ ಗ್ಯಾರಂಟಿ ಜೊತೆ 6ನೇ ಗ್ಯಾರಂಟಿ ಅಂದ್ರೆ ಬೆಲೆ ಏರಿಕೆ: ಮಾಜಿ ಸಚಿವ ಸಿ.ಸಿ.ಪಾಟೀಲ್

- Advertisement -

Gadag News: ಗದಗದಲ್ಲಿ ಸುದ್ದಿಗೋಷ್ಠಿ ನಡೆಸಿ, ಮಾತನಾಡಿರುವ ಮಾಜಿ ಸಚಿವ ಸಿ.ಸಿ.ಪಾಟೀಲ್,  ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಕಾಂಗ್ರೆಸ್ ಸರ್ಕಾರ ಒದ್ದಾಡ್ತಿದೆ. ಸಿಧ್ಧರಾಮಯ್ಯ ಹಾಗೂ ಡಿ ಕೆ ಶಿವಕುಮಾರ ನೇತೃತ್ವದ ಸರ್ಕಾರ ಏನು ಮಾಡಬೇಕು ಹೇಗೆ ಮಾಡಬೇಕು ಅಂತಾ ತಿಳಿಯಲಾರದಂತ ಪರಿಸ್ಥಿತಿಯಲ್ಲಿ ಒದ್ದಾಡ್ತಿದೆ. ಮೂರು ತಿಂಗಳ ಹಿಂದೆ ದಾಖಲಾದ ಪ್ರಕರಣಕ್ಕೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪನವರ ವಿರುದ್ಧ ಅರೆಸ್ಟ್ ವಾರೆಂಟ್ ತರೋವಂತ ದ್ವೇಷದ ರಾಜಕಾರಣವನ್ನ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಮಾಡಿದೆ. ಇದನ್ನ ಕಟುವಾಗಿ ನಾನು ಖಂಡಿಸ್ತೇನೆ ಎಂದು ಹೇಳಿದ್ದಾರೆ.

ಗೃಹ ಸಚಿವ ಜಿ ಪರಮೇಶ್ವರ ಹೇಳಿದ್ರು ಆ ಹೆಣ್ಣುಮಗಳಿಗೆ ಗಣ್ಯವ್ಯಕ್ತಿಗಳ ಮೇಲೆ, ಪ್ರಭಾವಿ ವ್ಯಕ್ತಿಗಳ ಮೇಲೆ ದೂರು ಕೊಡೋ ಹವ್ಯಾಸ ಇದೆ. ಇದನ್ನ ಸೀರಿಯಸ್ ಆಗಿ ತೆಗೆದುಕೊಳ್ಳುವಂತಹ ಅವಶ್ಯಕತೆ ಇಲ್ಲ ಅಂತಾ ಗೃಹ ಸಚಿವರೇ ಹೇಳಿದ್ರು. ಅರೆಸ್ಟ್ ವಾರೆಂಟ್ ತಗೊಂಡು ದ್ವೇಷದ ರಾಜಕಾರಣ ಮಾಡಿದ್ರು. ಚೀಮಾರಿ ಹಾಕಿಸಿಕೊಳ್ಳೋ ಹೀನಾಯ ಕೆಲಸ ಸಿಧ್ಧರಾಮಯ್ಯ ನೇತೃತ್ವದ ಸರ್ಕಾರ ಮಾಡಿದೆ. ಇನ್ನಾದ್ರೂ ಭ್ರಮೆಯೊಳಗಿಂದ ಅವರು ಕೆಳಗೆ ಬರಬೇಕು. ಹಣಕಾಸಿನ ಹೊರೆಯನ್ನ ತಗ್ಗಿಸಲು ಇಲಾಖೆವಾರು ಎಲ್ಲಾ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಿದ್ರು ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿ.ಸಿ.ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಜೊತೆಗೆ 6 ನೇ‌ ಗ್ಯಾರಂಟಿ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದೆ.  ಜನರ ದುಡ್ಡನ್ನ ಒಂದು ಜೇಬಿನಿಂದ ತೆಗೆದು‌ ಇನ್ನೊಂದು ಕೈಯಿಂದ ಕೊಟ್ಟು ಪಂಚ ಗ್ಯಾರಂಟಿ ಅನ್ನೋದು. ಆರ್ಥಿಕ ಶಿಸ್ತು, ಆರ್ಥಿಕತೆ ಬಗ್ಗೆ ಲಕ್ಷ್ಯ ಇಲ್ಲದಂತಹ ಕೇವಲ ಭ್ರಮಾ ಲೋಕದಲ್ಲಿ ನಡೀತಿರೋವಂತಹದ್ದು ಈ ಸರ್ಕಾರ. ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಸಿದ್ದು. ಇದುವರೆಗೂ ಪ್ರತಿ ತಿಂಗಳು 1700 ಕೋಟಿ ರೂಪಾಯಿ ಪೆಟ್ರೋಲ್ ಮತ್ತು ಡೀಸೇಲ್ ಮೇಲೆ ಸೇಲ್ ಟ್ಯಾಕ್ಸ್ ಸರ್ಕಾರಕ್ಕೆ ಬರ್ತಿತ್ತು. ಇಂದು ಮತ್ತೆ ಎರಡು ಮೂರು ರೂಪಾಯಿ ಹಾಕಿದ್ರಿಂದ 2400 ಕೋಟಿ ರೂಪಾಯಿ ಹೊರೆ ಕರ್ನಾಟಕ ರಾಜ್ಯದ ಜನರ ಮೇಲೆ ಬರತ್ತೆ.

ತೆರಿಗೆ ಏರಿಕೆಯನ್ನ ನಮ್ಮ ರಾಜ್ಯಾಧ್ಯಕ್ಷರು ಖಂಡಿಸಿದ್ದಾರೆ. ನಾವೂ ಕೂಡಾ ಖಂಡಿಸಿ ರಾಜ್ಯಾಧ್ಯಕ್ಷರ, ಪಕ್ಷದ ಸೂಚನೆ ಮೇರೆಗೆ ಹೋರಾಟವನ್ನ ಹಮ್ಮಿಕೊಳ್ಳಿತ್ತೇವೆ. ನಮಗೂ ಡಿಸೆಲ್ ಬೇಕು, ಪೆಟ್ರೋಲ್ ಬೇಕು. ಪೆಟ್ರೋಲ್, ಡಿಸೆಲ್ ಮೇಲೆ ಅವಮಬಿತ ಎಲ್ಲದರ ಬೆಲೆಗಳೂ ಹೆಚ್ಚಾಗ್ತವೆ. ಶಕ್ತಿ ಯೋಜನೆಗೆ ಬೇಕಾದ ಹಣವನ್ನ ಬಸ್ ದರ ಏರಿಸಿ ತುಂಬಿಕೊಂಡ್ರು. ಪೆಟ್ರೋಲ್, ಡೀಸೆಲ್ ನಲ್ಲಿ ವಸೂಲಿ ಮಾಡಿದ್ರು, ಬಸ್ ನಲ್ಲಿ ಫ್ರೀ ಬಿಟ್ಟೀವಿ ಅಂದ್ರು. ಒಂದು ಗ್ಯಾರಂಟಿಗೆ ಕಂಪ್ಯಾನ್ಶಿಯೆಟ್ ಮಾಡಿದ್ರು. ಇನ್ನು ನಾಲ್ಕು ಗ್ಯಾರಂಟಿಗೆ ಯಾವ ರೇಟ್ ಹೆಚ್ಚಿಗೆ ಮಾಡ್ತಾರೋ ನೋಡಬೇಕು. ಈ ಏರಿಕೆಯನ್ನ ಕೂಡಲೇ ನಿಲ್ಲಿಸಬೇಕು, ಯತಾಸ್ಥಿತಿಗೆ ತರಬೇಕು ಅನ್ನೋ ಒತ್ತಾಯ ಬಿಜೆಪಿ ಮಾಡತ್ತೆ. ಹೋರಾಟವನ್ನ ನಾವು ಮಾಡ್ತೇವೆ ಎಂದು ಸಿ.ಸಿ.ಪಾಟೀಲ್ ಹೇಳಿದ್ದಾರೆ.

- Advertisement -

Latest Posts

Don't Miss