Political News: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದು ಧವಳಗಿರಿ ನಿವಾಸದ ಬಳಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಸಿಎಂ ಪೆಟ್ರೋಲ್ ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ ಮಾಡಿದ್ದಾರೆ. ರಾಜ್ಯದ ಬಡವರ, ಮಧ್ಯಮ ವರ್ಗದ ಜನರಿಗೆ ಅನಾನುಕೂಲ ಸೃಷ್ಟಿ ಮಾಡಿದ್ದಾರೆ. ತಮಿಳುನಾಡಿನ ಸ್ಟಾಲಿನ್ 3 ರೂ. ಕಡಿಮೆ ಮಾಡಿದ್ರು. ವಿಪಕ್ಷ ನಾಯಕರಿದ್ದಾಗ ಸಿದ್ದರಾಮಯ್ಯ ನಮ್ಮ ಸರ್ಕಾರ ಇದ್ದಿದ್ರೆ 10 ರೂ ಕಡಿಮೆ ಮಾಡ್ತಿದ್ದೆ ಎಂದಿದ್ರು. ಜನ ಸಾಮಾನ್ಯರಿಗೆ ಬೆಲೆ ಏರಿಕೆಯಿಂದ ತೊಂದರೆ ಆಗ್ತಿದೆ. ಬಿಜೆಪಿ ಇಂದು ಪ್ರತಿಭಟನೆ ಹಮ್ಮಿಕೊಂಡಿದೆ. ಸರ್ಕಾರ ಎಲ್ಲಿಯವರೆಗೂ ತೆರಿಗೆ ಕಡಿಮೆ ಮಾಡೊದಿಲ್ವೋ ಅಲ್ಲಿಯವರೆಗೂ ಹೋರಾಟ ಮಾಡ್ತೀವಿ. ಜೆಡಿಎಸ್ ಸೇರಿದಂತೆ ಎಲ್ಲ ಸಂಘಟನೆಗಳನ್ನ ಸೇರಿಸಿಕೊಂಡು ಹೋರಾಟ ಮಾಡ್ತೀವಿ ಎಂದು ವಿಜಯೇಂದ್ರ ಹೇಳಿದ್ದಾರೆ.
ಮುದ್ದೇಬಿಹಾಳ ಶಾಸಕ ನಾಡಗೌಡರು ಅಭಿವೃದ್ದಿಗೆ ಅನುದಾನ ಸಿಕ್ತಿಲ್ಲ. ಶಾಸಕ ಸ್ಥಾನಕ್ಕೂ ರಾಜೀನಾಮೆಯ ನಿಡ್ತೀನಿ ಎಂದು ಹೇಳಿದ್ರು. ಇದು ರಾಜ್ಯ ಸರ್ಕಾರ ಹೇಗೆ ನಡೆಯುತ್ತಿದೆ ಎಂದು ಕಾಂಗ್ರೆಸ್ ಶಾಸಕರೇ ತೆರದಿಟ್ಟಿದ್ದಾರೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಭ್ರಷ್ಟಾಚಾರ ಹೆಚ್ಚಾಗಿದೆ. ಸಿಎಂ ಆಡಳಿತದಿಂದ ಜನರಿಗೆ ತೊಂದರೆ ಆಗಿದೆ. ಸಿಎಂ ಅವರು ತಮ್ಮ ಉಡಾಫೆ ಮಾತನ್ನ ಬದಿಗಿಟ್ಟು ಬೇರೆ ರಾಜ್ಯದಲ್ಲಿ ಹೀಗಿದೆ, ಅಷ್ಟಿದೆ ಎಂದು ಹೇಳ್ತಾರೆ ಎಂದು ವಿಜಯೇಂದ್ರ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಾಕಿದ್ದಾರೆ.