Thursday, December 12, 2024

Latest Posts

ಮನೆ ಮುಂದೆ ನೀರು ಸಂಗ್ರಹ ವಸ್ತುಗಳನ್ನು ಇಟ್ಟಿದ್ರೆ ಹುಷಾರ್..! ಡೆಂಗ್ಯೂ ಅಟ್ಯಾಕ್ ಆಗಬಹುದು

- Advertisement -

Hubli News: ಹುಬ್ಬಳ್ಳಿ : ಇತ್ತಿಚೀನ ದಿನಗಳಲ್ಲಿ ಧಾರವಾಡ ಜಿಲ್ಲೆಯಾಧ್ಯಂತ ಡೆಂಗ್ಯೂ ಜ್ವರದ ಹಾವಳಿ ಹೆಚ್ಚಾಗಿದೆ. ಈಗಾಗಲೇ ಸಾವು ಕೂಡವಾಗಿವೆ. ಅದೆಷ್ಟೋ ಜನರು ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆ. ಜನರಿಗೆ ಜಾಗೃತಿ ಮೂಡಿಸಲು ಮಹಾನಗರ ಪಾಲಿಕೆಯ ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಧರ ದಂಡೆಪ್ಪನವರ ಬೆಳ್ಳಂ ಬೆಳಗ್ಗೆ ಫಿಲ್ಡ್‌ಗೆ ಇಳಿದು ಜನರಲ್ಲಿ ಮನವರಿಕೆ ಮಾಡಿದ್ದಾರೆ. ಅಷ್ಟೆ ಅಲ್ಲೆ ನೀರು ಸಂಗ್ರಹವಾದ ವಸ್ತುಗಳನ್ನು ತೆರವು ಕೂಡ ಮಾಡಿದ್ದಾರೆ.

ಮನೆಯ ಮುಂದೆ ಮನೆಯ ಮೇಲೆ ಟಾಯರ್, ತೆಂಗಿನಕಾಯಿ ಚಿಪ್ಪು, ಮುರಿದ ಬಗೆಟ್ ಹೀಗೆ ನೀರು ಸಂಗ್ರಹವಾಗುವ ವಸ್ತುಗಳನ್ನು ಇಟ್ಟಿದ್ದರಿಂದ ಸೊಳ್ಳೆಗಳು ಉದ್ಭವಾಗುತ್ತವಂತೆ. ಈ ಸೊಳ್ಳೆಗಳು ಕಡಿದ್ರೆ ಸಾಕು ಡೆಂಗ್ಯೂ ಜ್ವರ ಬರೊದು ಮಾತ್ರ ಗ್ಯಾರಂಟಿ ಅಂತೀದ್ದಾರೆ ಆರೋಗ್ಯ ಅಧಿಕಾರಿಗಳು. ಇಂದು ಡಾ.ಶ್ರೀಧರ ದಂಡೆಪಗಪನವರ ಹುಬ್ಬಳ್ಳಿಯ ಹಳೇ ಹುಬ್ಬಳ್ಳಿ, ಎಸ್.ಎಮ್ ಕೃಷ್ಣನಗರ, ಕೆಲವೊಂದು ಸ್ಲಮ್ ಏರಿಗಳಿಗೆ ವೀಕ್ಷಣೆ ಮಾಡಿದ್ದಾರೆ. ಅಲ್ಲಿನ ಜನರು ಒಡೆದ ಬಕೆಟ್, ಡ್ರಮ್, ಟಾಯರ್, ಹೀಗೆ ನೀರು ಸಂಗ್ರಹವಾಗುವ ವಸ್ತುಗಳನ್ನು ಬೇಕಾಬಿಟ್ಟಿಯಾಗಿ ಎಸೆದಿದ್ದರು. ಅದರಲ್ಲಿ ನೀರು ಸಂಗ್ರಹವಾಗಿ ಸೊಳ್ಳೆಗಳ ಹಾವಳಿ ಹೆಚ್ಚಾಗಿತ್ತು.
ಇದನ್ನು ಗಮನಿಸಿದ ಆರೋಗ್ಯ ಅಧಿಕಾರಿಗಳು ಎಲ್ಲ ವಸ್ತುಗಳನ್ನು ತೆರವು ಮಾಡಿ ಅಲ್ಲಿನ ಜನರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದರು. ಈ ಡೆಂಗ್ಯೂ ಹಾವಳಿ ಬಗ್ಗೆ ಮಹಾನಗರ ಪಾಲಿಕೆಯ ಮುಖ್ಯ ವೈದ್ಯಾಧಿಕಾರಿಗಳು ಏನು ಹೇಳ್ತಾರೆ ಕೇಳಿ.

ಒಟ್ನಲ್ಲಿ ಹೇಳುವುದಾದರೆ ಈಗ ಮಳೆಗಾಲ ಕೂಡ ಆರಂಭವಾಗಿದೆ. ಆರೋಗ್ಯವನ್ನು ಚನ್ನಾಗಿ ಕಾಪಾಡಿಕೊಳ್ಳಬೇಕು. ಅಷ್ಟೇ ಅಲ್ಲೆ ಡೆಂಗ್ಯೂ ಜ್ವರದ ಹಾವಳಿ ಸಹ ಹೆಚ್ಚಾಗಿದೆ. ಆದ್ದರಿಂದ ಸಾರ್ವಜನಿಕರು ತಮ್ಮ ತಮ್ಮ ಮನೆ ಸುತ್ತ ಸ್ವಚ್ಛತೆಯನ್ನು ಕಾಪಾಡಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಎಲ್ಲರ ಮನವಿಯಾಗಿದೆ.

ಸಂಗಮೇಶ್ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ

- Advertisement -

Latest Posts

Don't Miss