Monday, December 23, 2024

Latest Posts

ಪ್ಯಾಕಿಂಗ್ ಮಷಿನ್ ಇದ್ದರೆ ಸಾಕು, 10 ಉದ್ಯಮಗಳಿಂದ ನೀವು ಉತ್ತಮ ಲಾಭ ಗಳಿಸಬಹುದು..!

- Advertisement -

ನಿಮ್ಮ ಬಳಿ ಪ್ಯಾಕಿಂಗ್ ಮಷಿನ್ ಇದ್ದರೆ ನೀವು 10 ಉದ್ಯಮಗಳನ್ನ ಆರಂಭಿಸಿ ಅದರಿಂದ ಉತ್ತಮ ಲಾಭ ಗಳಿಸಬಹುದು. ಹಾಗಾದ್ರೆ ಯಾವುದು ಆ 10 ಉದ್ಯಮಗಳು ಅನ್ನೋದನ್ನ ನೋಡೋಣ ಬನ್ನಿ.

ಸ್ಕ್ರಬರ್ ಪ್ಯಾಕಿಂಗ್: ಅಂಗಡಿಗಳಲ್ಲಿ, ಅಥವಾ ಆನ್‌ಲೈನ್‌ನಲ್ಲಿ ಸ್ಕ್ರಬರ್ ರೋಲ್ ಸಿಗುತ್ತದೆ. ಅದನ್ನ ತಂದು ಕರೆಕ್ಟ್ ಶೇಪ್‌ನಲ್ಲಿ ಕಟ್ ಮಾಡಿ, ಪ್ಯಾಕೇಟ್‌ನಲ್ಲಿ ತುಂಬಬೇಕು. ನಿಮಗೆ ಬೇಕಾದ್ದಲ್ಲಿ ಪ್ಯಾಕೇಟ್‌ ಮೇಲೆ ನಿಮ್ಮ ಬ್ರ್ಯಾಂಡ್ ಪ್ರಿಂಟ್ ಮಾಡಿಸಿ. ನಂತರ ಪ್ಯಾಕಿಂಗ್ ಮಷಿನ್ ಸಹಾಯದಿಂದ ಪ್ಯಾಕ್ ಮಾಡಿ. ಇದನ್ನ ನೀವು ರಿಟೇಲ್ ಶಾಪ್‌ನಲ್ಲಿ ಮಾರಬಹುದು.

ಡ್ರೈಫ್ರೂಟ್ಸ್: ಡ್ರೈಫ್ರೂಟ್ಸ್‌ ಮಾರಾಟವೂ ಇದೇ ರೀತಿ ಮಾಡಬಹುದು. ಹೋಲ್‌ಸೇಲ್‌ ಅಂಗಡಿಯಲ್ಲಿ 5ರಿಂದ 6 ಥರದ ಡ್ರೈಫ್ರೂಟ್ಸ್ ತಂದು ಮಿಕ್ಸ್ ಮಾಡಿ, ಚಿಕ್ಕ ಚಿಕ್ಕ ಪ್ಯಾಕೆಟ್ ಮಾಡಿ ಮಾರಬಹುದು.

ಚಿಪ್ಸ್- ಚಕ್ಕುಲಿ: ಮನೆಯಲ್ಲೇ ಚಕ್ಕುಲಿ ಚಿಪ್ಸ್ ಮಾಡಿ ಪ್ಯಾಕ್ ಮಾಡಿ ಮಾರಬಹುದು.

ಅರಿಷಿನ ಕುಂಕುಮ ಪ್ಯಾಕಿಂಗ್: ಅರಿಷಿನ ಕುಂಕುಮವನ್ನ ಚಿಕ್ಕ ಚಿಕ್ಕ ಪ್ಯಾಕೇಟ್‌ನಲ್ಲಿ ತುಂಬಿಸಿ ರಿಟೇಲ್ ಅಂಗಡಿಯಲ್ಲಿ ಮಾರಬಹುದು.

ಮಸಾಲೆ: ಮಸಾಲೆ ಪದಾರ್ಥಗಳು ಅಂದರೆ ಲವಂಗ, ಏಲಕ್ಕಿ, ಕಾಳುಮೆಣಸು, ಚಕ್ಕೆ, ಮಸಾಲೆ ಎಲೆ ಇಂಥವಲ್ಲವನ್ನೂ ತಂದು ಎಲ್ಲವನ್ನೂ ಸಪರೇಟ್ ಆಗಿ ಪ್ಯಾಕ್ ಮಾಡಿ ಮಾರಬಹುದು. ಇಲ್ಲವೇ ಪಲಾವ್ ಮಸಾಲೆ ಎಂದು ಎಲ್ಲವನ್ನೂ ಮಿಕ್ಸ್ ಮಾಡಿ ಪ್ಯಾಕ್ ಮಾಡಿ ಮಾರಬಹುದು.

https://youtu.be/465Mb5bSplY

ಕರ್ಪೂರ: ಕರ್ಪೂರವನ್ನು ಹೋಲ್‌ಸೇಲ್‌ ಅಂಗಡಿಯಿಂದ ತಂದು ಪ್ಯಾಕ್ ಮಾಡಿ ಮಾರಬಹುದು.

ಇದೇ ರೀತಿ, ಮೆಹಂದಿ ಪುಡಿ, ಸಂಡಿಗೆ- ಬೋಟಿ, ಬತ್ತಿ, ಲಾಡು ಎಲ್ಲವನ್ನೂ ಮಾಡಿ ಮಾರಬಹುದು.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

- Advertisement -

Latest Posts

Don't Miss