Saturday, July 5, 2025

Latest Posts

ನಟ ದರ್ಶನ್ ಕೇಸ್ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮೊದಲ ಪ್ರತಿಕ್ರಿಯೆ..

- Advertisement -

Hubli News: ಹುಬ್ಬಳ್ಳಿ: ನಾನು ಕೇಂದ್ರ ಸಚಿವನಾಗಿ ದರ್ಶನ ಕೇಸ್ ಬಗ್ಗೆ ಚರ್ಚೆ ಮಾಡುವುದು ಸರಿಯಲ್ಲ. ಕಾನೂನು ವ್ಯಾಪ್ತಿಯಲ್ಲಿ ಯಾರು ಕೂಡ ದೊಡ್ಡವರಲ್ಲ. ಕಾನೂನು ಬಾಹಿರ ಕೃತ್ಯಗಳಿಗೆ ಕಾನೂನು ರೀತಿಯಲ್ಲಿ ಕ್ರಮವನ್ನು ಜರುಗಿಸಬೇಕು ಎಂದು ಕೇಂದ್ರ ಸಚಿವ ಹಾಗೂ ಮಾಜಿಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ನಗರದ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಸರ್ಕಾರ ನಂಬಿಕೆ‌ ಇಟ್ಟು ಎರಡು ಪ್ರಮುಖ ಖಾತೆ ಕೊಟ್ಟಿದ್ದಾರೆ. ನಾನು ಕೇಂದ್ರದಲ್ಲಿ ಪ್ರಥಮವಾಗಿ ಸಚಿವನಾಗಿದ್ದೇನೆ.‌ಜಿಡಿಪಿ ಬೆಳವಣಿಗೆ ಹಾಗೂ ಉದ್ಯೋಗ ಸೃಷ್ಟಿಯ ಬಗ್ಗೆ ಶ್ರಮಿಸುತ್ತೇನೆ. ಎಲ್ಲರಿಗೂ ಹುಟ್ಟಿದಾಗಲೇ ತಿಳವಳಿಕೆ ಇರುವುದಿಲ್ಲ ಖಾತೆಯ ಬಗ್ಗೆ ಹಾಗೂ ಜವಾಬ್ದಾರಿ ನಿರ್ವಹಣೆ ಬಗ್ಗೆ ಮತ್ತಷ್ಟು ತಿಳಿದಿಕೊಂಡು ನಿಮ್ಮ ಮುಂದೆ ಬರುತ್ತೇನೆ ಎಂದರು.

ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ ಯೋಜನೆಯ ವಿವಿಧ ಕಂತಿನ ಮೂಲಕ ರೈತರಿಗೆ ಹಣ ಸಂದಾಯ ಮಾಡಲಾಗುತ್ತಿದೆ. 17 ನೇ ಕಂತಿನ ಹಣ ಇಂದು ಬಿಡುಗಡೆ ಮಾಡಲಾಗುತ್ತಿದೆ. ವಾರಾಣಸಿಯಲ್ಲಿ ಮೋದಿಯವರ‌ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ದೇಶದ 50 ಕಡೆ ರೈತರನ್ನು ಉದ್ದೇಶಿಸಿ ವಿಡಿಯೋ ಕಾನ್ಫರನ್ಸ್ ಮೂಲಕ ಮಾತನಾಡಲಿದ್ದಾರೆ. ಪ್ರಧಾನಿಗಳು ನಂಬಿಕೆಯಿಟ್ಟು ಪ್ರಮುಖ ಎರಡು ಖಾತೆ ನೀಡಿದ್ದಾರೆ. ಕೇಂದ್ರದಲ್ಲಿ ಪ್ರಥಮ ಬಾರಿಗೆ ಮಂತ್ರಿ ಆಗಿದ್ದೆನೆ. ನನ್ನ ಇಲಾಖೆ ಅರ್ಥ ಮಾಡಿಕೊಳ್ಳಲು ಸಮಯ ಬೇಕು ಈ ಖಾತೆಗಳಲ್ಲಿ ದೇಶದ ಜಿಡಿಪಿ ಅಭಿವೃದ್ಧಿಪಡಿಸಿಲು ಮತ್ತು ನಿರುದ್ಯೋಗ ನಿರ್ಮೂಲನೆ ಮಾಡಲು ಸಾಕಷ್ಟು ಅವಕಾಶಯಿದೆ. ಇಲಾಖೆಯಲ್ಲಿನ ಪಾಸಿಟಿವ್ ನೆಗೆಟಿವ್ ಅರ್ಥ ಮಾಡಿಕೊಳ್ಳುವೆ ಎಂದು ಅವರು ಹೇಳಿದರು.

ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ವಿಚಾರವಾಗಿ, ಸರ್ಕಾರದ ಪರಿಸ್ಥಿತಿ ಹೇಗಿದೆ ಅಂತ ಇದರಿಂದ ಗೊತ್ತಾಗುತ್ತಿದೆ. ಜನರಿಂದ ದುಡ್ಡು ಕಿತ್ತಿಕೊಂಡು ಮತ್ತೆ ಜನರಿಗೆ ನೀಡುವಲ್ಲಿ ಅರ್ಥ ಏನಿದೆ. ಕಳೆದ ಏಂಟು ತಿಂಗಳಿಂದ ಹಾಲಿನ ಪ್ರೋತ್ಸಾಹ ಧನವೇ ನೀಡಿಲ್ಲ. ಈಗ ಕೇಂದ್ರ ಕಡೆ ಬೆಟ್ಟು ಮಾಡುತ್ತಾರೆ ಕೇಂದ್ರ ಸರ್ಕಾರ ದರ ಏರಿಕೆ ಮಾಡಿಲ್ಲ ರಾಜ್ಯ ಸರ್ಕಾರ ಏರಿಕೆ ಮಾಡಿದೆ. ಗ್ಯಾರಂಟಿಗೆ ಹಣ ಬೇಕು ಅಂತ ಸ್ವತಃ ಎಂ.ಬಿ.ಪಾಟೀಲ್ ಹೇಳಿದ್ದಾರೆ ಎಂದು ಅವರು ಹೇಳಿದರು.

- Advertisement -

Latest Posts

Don't Miss