Saturday, July 20, 2024

Latest Posts

Sandalwood News: ನಟ ದರ್ಶನ್ ಪತ್ನಿಗೂ ಸಂಕಷ್ಟ!

- Advertisement -

Sandalwood News: ರೇಣುಕಾಸ್ವಾಮಿ ಕೇಸ್‍ನಲ್ಲಿ ದರ್ಶನ್ ಮತ್ತು ಗ್ಯಾಂಗ್ ಅರೆಸ್ಟ್ ಆಗಿದ್ದು, ತನಿಖೆ ನಡೆಸುತ್ತಿದ್ದಂತೆ ಹಲವಾರು ಸತ್ಯಗಳು ಬಯಲಾಗುತ್ತಿವೆ. ರೇಣುಕಾ ಸ್ವಾಮಿ ಕೇಸ್‍ನಲ್ಲಿ ಪವಿತ್ರಾಗೌಡ ಎ1 ಆಗಿದ್ದು, ದರ್ಶನ್ ಎ2 ಆರೋಪಿ ಆಗಿದ್ದಾರೆ. ಆದರೆ ಈಗ ದರ್ಶನ್‍ರ ಪತ್ನಿಗೂ ಸಂಕಷ್ಟ ಎದುರಾಗಿದೆ. ಪ್ರಕರಣವೊಂದರಲ್ಲಿ ವಿಜಯಲಕ್ಷಿ ಎ1 ಆಗಿದ್ದು, ಅದೇ ಪ್ರಕರಣದಲ್ಲಿ ದರ್ಶನ್ ಎ3 ಆಗಿದ್ದಾರೆ. ಪ್ರಕರಣದ ಚರ್ಚ್ ಶೀಟ್ ಸಲ್ಲಿಕೆಗೆ ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ.

ಕಳೆದ ವರ್ಷ ಜನವರಿಯಲ್ಲಿ ದರ್ಶನ್ ಅವರ ಮೈಸೂರಿನ ಫಾರಂ ಹೌಸ್ ಮೇಲೆ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ದರ್ಶನ್ ಅಕ್ರಮವಾಗಿ ಸಾಕಿಕೊಂಡಿದ್ದ ಬಾರ್ ಹೆಡೆಡ್ ಗೂಸ್ ಪಕ್ಷಿಗಳನ್ನು ವಶಪಡಿಸಿಕೊಂಡಿದ್ದರು. ಈ ಪಕ್ಷಿಯನ್ನು ಸಾಕುವುದು ಕಾನೂನು ಪ್ರಕಾರ ಅಪರಾಧ. ಹಾಗಾಗಿ ಪಕ್ಷಿಗಳನ್ನು ವಶಡಿಸಿಕೊಂಡಿದ್ದ ಅರಣ್ಯ ಇಲಾಖೆ , ದರ್ಶನ್ ವಿರುದ್ಧ ಪ್ರಕರಣ ದಾಖಲಿಸಿತ್ತು.

ನಿಯಮ ಬಾಹಿರವಾಗಿ ಪಕ್ಷಿಗಳನ್ನು ಸಾಕಿದ್ದ ಕಾರಣ, ಮೈಸೂರು ಫಾರಂ ಹೌಸ್ ನ ಮಾಲೀಕರಾಗಿರುವ ವಿಜಯಲಕ್ಷ್ಮಿ ದರ್ಶನ್, ಮ್ಯಾನೇಜರ್ ನಾಗರಾಜು ಹಾಗೂ ದರ್ಶನ್ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆಗೆ ಕರೆಯಲಾಗಿತ್ತು. ಈ ಪ್ರಕರಣದಲ್ಲಿ ವಿಜಯಲಕ್ಷ್ಮಿ ಎ1, ನಾಗರಾಜು ಎ2 ಹಾಗೂ ದರ್ಶನ್ ಎ3 ಆಗಿದ್ದರು. ಆದರೆ ಯಾರೂ ಸಹ ವಿಚಾರಣೆಗೆ ಬಂದಿರಲಿಲ್ಲ. ಇದೀಗ ಅರಣ್ಯ ಇಲಾಖೆ ಸಿಬ್ಬಂದಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲು ಸಿದ್ಧವಾಗಿದೆ.

ಈಗಾಗಲೇ ಕೊಲೆ ಪ್ರಕರಣದಲ್ಲಿ ಸಿಲುಕಿರುವ ದರ್ಶನ್​ಗೆ ಈಗ ಅರಣ್ಯ ಇಲಾಖೆ ಪ್ರಕರಣವೂ ದೊಡ್ಡ ತಲೆನೋವಾಗಿ ಪರಿಣಮಿಸಲಿದೆ. ಈ ಪ್ರಕರಣದಲ್ಲಿ ವಿಜಯಲಕ್ಷ್ಮಿ ಎ1 ಆಗಿದ್ದು, ಅವರೂ ಸಹ ವಿಚಾರಣೆಗೆ ಹಾಜರಾಗಬೇಕಿದೆ. ಚಾರ್ಜ್ ಶೀಟ್ ಸಲ್ಲಿಸಿದ ಬಳಿಕ ನ್ಯಾಯಾಲಯ ಯಾವ ಆದೇಶ ನೀಡುತ್ತದೆ ಎಂಬದು ಕಾದುನೋಡಬೇಕಾಗಿದೆ.

- Advertisement -

Latest Posts

Don't Miss