ಕೊರೊನಾ ಕಾಟದಿಂದ ಲಾಕ್‌ಡೌನ್ ಇದ್ದಾಗ ಎಲ್ಲರೂ ಮನೆಯಲ್ಲಿ ಸೇಫ್ ಆಗಿದ್ದರೆ, ವೈದ್ಯರು, ಪೊಲೀಸರು, ಮಾಧ್ಯಮದವರು, ಪೌರ ಕಾರ್ಮಿಕರೆಲ್ಲರೂ ಕೆಲಸದಲ್ಲಿ ತೊಡಗಿದ್ದರು. ಮೂರುವರೆ ತಿಂಗಳಿಂದ ಸತತವಾಗಿ ಕೆಲಸದಲ್ಲಿ ಭಾಗಿಯಾಗಿದ್ದ ಪೊಲೀಸರಿಗೆ ಧನ್ಯವಾದ ತಿಳಿಸಲು ಇಂದು ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಈ ವೇಳೆ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಮಾತನಾಡಿದ್ದು, ಭಾವುಕರಾಗಿದ್ದಾರೆ. ಕರ್ನಾಟಕ ಪೊಲೀಸರು, ಬೆಂಗಳೂರು ಪೊಲೀಸರು, ಕೊರೊನಾ ತಡೆಗಟ್ಟಲು ಡಿಜಿಪಿ, ಐಜಿಪಿ ಮಾರ್ಗದರ್ಶನದಲ್ಲಿ ಕೆಲಸ ಮಾಡಿದ್ದೇವೆ.
ಈ ವೇಳೆ ಪೊಲೀಸರು ಹಲವರನ್ನು ಭೇಟಿಯಾಗುವ ಸಂದರ್ಭ ಬಂದಿತ್ತು. ಆ ಪೊಲೀಸರು ರಿಸ್ಕ್ ತೆಗೆದುಕೊಂಡಿರ್ತಾರೆ. ಪ್ರವೀಣ್ ಸೂದ್ ಅವರು ಕೂಡ ನಮಗೆ ಬಂದ ಸಮಸ್ಯೆಯನ್ನ ತುರ್ತಾಗಿ ನಿವಾರಣೆ ಮಾಡುತ್ತ ಹೋಗಿದ್ದರಿಂದ ನಮಗೆ ಕೆಲಸ ಮಾಡಲು ಸುಲಭವಾಯಿತು ಎಂದು ಭಾಸ್ಕರ್ ರಾವ್ ಹೇಳಿದರು.
ಇನ್ನು ಕೆಲಸದ ವೇಳೆ ಹುತಾತ್ಮರಾದ ಪೊಲೀಸರ ಬಗ್ಗೆ ಮಾತನಾಡುವಾಗ ಭಾಸ್ಕರ್ ರಾವ್ ಭಾವುಕರಾಗಿದ್ದಾರೆ. ನಮ್ಮ ಪೊಲೀಸರು ಹುತಾತ್ಮರಂತೆ ಮರಣ ಹೊಂದಿದ್ದಾರೆ. ಅವರ ಕುಟುಂಬಕ್ಕೆ ಸಹಾಯಧನ ನೀಡುವ ಸಲುವಾಗಿ ಈ ಸಭೆ ಕರೆಯಲಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲು ಒಂದು ನಿಮಿಷ ಮೌನಾಚರಣೆ ಮಾಡೋಣ ಎಂದು ಹೇಳಿದರು.
