Bollywood News: ನಟ ಅನುಪಮ್ ಖೇರ್ ಮನೆಯಲ್ಲಿ ಕಳ್ಳತನ.. ಕಳ್ಳರು ಕದ್ದಿದ್ದೇನು ಗೊತ್ತಾ..?

Bollywood News: ಸದಾಕಾಲ ಬಿಜೆಪಿ ಮತ್ತು ಪ್ರಧಾನಿ ಮೋದಿಯವರನ್ನು ಬೆಂಬಲಿಸುತ್ತ ಸುದ್ದಿಯಾಗುವ ನಟ ಅನುಪಮ್ ಖೇರ್ ಅವರ ಮನೆಯಲ್ಲಿ ಕಳ್ಳತನವಾಗಿದೆ.

ಅವರ ಮನೆಯಲ್ಲಿಯೇ ಅವರ ಕಚೇರಿ ಇರುವ ಕಾರಣಕ್ಕೆ, ಕಚೇರಿಯಲ್ಲಿ ಸಣ್ಣ ಮಟ್ಟದ ಕಳ್ಳತನವಾಗಿದೆ. ಮನೆ ಬಾಗಿಲು ಒಡೆದು ಕಚೇರಿಗೆ ನುಗ್ಗಿರುವ ಕಳ್ಳರು, ಅನುಪಮ್ ಖೇರ್ ಕಂಪನಿ ಸಿನಿಮಾದ ನೆಗೆಟಿವ್ಸ್ ಕದ್ದೊಯ್ದಿದ್ದಾರೆ. ಲಾಕರ್ ಬೀಗ ಸೇಫ್ ಆಗಿದ್ದ ಕಾರಣ, ಹಣ ಕಳ್ಳತನ ಮಾಡಲು ಸಾಧ್ಯವಾಗಿಲ್ಲ.

ಆಟೋದಲ್ಲಿ ಬಂದ ಕಳ್ಳರು, ಕಚೇರಿಯಲ್ಲಿ ಸಿಕ್ಕ ನೆಗೆಟಿವ್ಸ್, ಸಣ್ಣ ಪುಟ್ಟ ವಸ್ತುಗಳನ್ನು ಕದ್ದೊಯ್ದಿದ್ದಾರೆ. ಈ ಬಗ್ಗೆ ಅನುಪಮ್ ಖೇರ್ ಕಂಪನಿ ದೂರು ದಾಖಲಿಸಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಬಗ್ಗೆ ಅನುಪಮ್ ಖೇರ್ ಸೋಶಿಯಲ್ ಮಾಡಿಯಾದಲ್ಲಿ ಪೋಸ್ಟ್ ಹಾಕಿ, ಕಳ್ಳರಿಗೆ ದೇವರು ಒಳ್ಳೆಯದು ಮಾಡಲಿ ಎಂದಿದ್ದಾರೆ.

ಕಚೇರಿಗೆ ಲೇಟಾಗಿ ಬಂದ್ರೆ ದಂಡ ಫಿಕ್ಸ್!

Karnataka : ಮದ್ಯ ಪ್ರಿಯರಿಗೆ ಬೆಲೆ ಇಳಿಕೆ ‘ಕಿಕ್‌’ ; ಎಣ್ಣೆ ಪ್ರಿಯರಿಗೇ ಗುಡ್​ ನ್ಯೂಸ್​

Delhi : ಕೇಜ್ರಿವಾಲ್‍ಗೆ ಹೈಕೋರ್ಟ್ ಶಾಕ್!

About The Author