Friday, October 18, 2024

Latest Posts

Karnataka :ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

- Advertisement -

ಟೆಕ್ಕಿಯಾಗುವ ಕನಸು ಕಾಣುತ್ತಿರುವ ಪಿಯು ವಿದ್ಯಾರ್ಥಿಗಳಿಗೆ ಇದು ಸಿಹಿಸುದ್ದಿ. ಈ ವರ್ಷ ಹೆಚ್ಚುವರಿಯಾಗಿ ಸಾವಿರ ಎಂಜಿನಿಯರಿಂಗ್ ಸೀಟುಗಳು ವಿದ್ಯಾರ್ಥಿಗಳಿಗೆ ಸಿಗಲಿವೆ. ಎಂಜಿನಿಯರಿಂಗ್ ಸೀಟುಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ ಇನ್‍ಟೇಕ್ ಸಡಿಲಗೊಳಿಸಿದೆ.
2024-25ನೇ ಸಾಲಿನ ಎಂಜಿನಿಯರಿಂಗ್ ಪ್ರವೇಶಕ್ಕೆ ಎಲ್ಲ ಮಾದರಿಯ 245 ಎಂಜಿನಿಯರಿಂಗ್ ಕಾಲೇಜುಗಳಿಂದ 1,32,309 ಸೀಟುಗಳ ಇನ್‍ಟೇಕ್ ಇದ್ದು, ಈ ಪೈಕಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ 62,930 ಸೀಟುಗಳು ಲಭ್ಯವಾಗಿವೆ.
2023ರಲ್ಲಿ 258 ಕಾಲೇಜುಗಳಿಂದ 1,24,551 ಸೀಟುಗಳು ಲಭ್ಯ ವಿದ್ದವು. ಈ ಪೈಕಿ ಕೆಐಎಗೆ 58,845 ಸೀಟುಗಳು ಸೇರಿದ್ದವು. ಈ ವರ್ಷದ ಸೀಟುಗಳನ್ನು ಕಳೆದ ವರ್ಷಕ್ಕೆ ಹೋಲಿಸಿದರೆ, ಒಟ್ಟಾರೆ ಇನ್‍ಟೇಕ್‍ನಲ್ಲಿ 7,758 ಸೀಟುಗಳು ಹಾಗೂ ಕೆಇಎ ಪಾಲಿಗೆ 4,085 ಸೀಟುಗಳು ಲಭ್ಯವಾಗಿವೆ. ಆದರೆ, ಇನ್ನೂ 13 ಕಾಲೇಜುಗಳ ಸೀಟುಗಳು ಕೆಇಎಗೆ ಸೇರ್ಪಡೆ ಯಾಗಿಲ್ಲದಿರುವುದರಿಂದ ಮುಂದಿನ ದಿನಗಳಲ್ಲಿ ಸೀಟುಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಈ ವರ್ಷ 3.10 ಲಕ್ಷ ವಿದ್ಯಾರ್ಥಿಗಳು ಸಿಇಟಿ ತೆಗೆದುಕೊಂಡಿದ್ದರು. ಈ ಪೈಕಿ 2.74 ಲಕ್ಷ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಸೀಟು ಪಡೆಯಲು ಅರ್ಹತೆ ಪಡೆದಿದ್ದರು. ಕಳೆದವರ್ಷ 2.03 ಲಕ್ಷ ವಿದ್ಯಾರ್ಥಿಗಳು ಸಿಇಟಿ ಪಾಸಾಗಿದ್ದರು. ಇದರಿಂದ ಈ ವರ್ಷಕ್ಕೆ 70 ಸಾವಿರ ವಿದ್ಯಾರ್ಥಿಗಳು ಹೆಚ್ಚಾಗಿದ್ದು,ಎಂಜಿನಿಯರಿಂಗ್ ಸೀಟುಗಳಿಗೆ ಬೇಡಿಕೆ ಸೃಷ್ಟಿಯಾಗಿರುವುದನ್ನು ಕಾಣಬಹುದು.
ಇಷ್ಟು ವರ್ಷ ಸೀಟು ಹೆಚ್ಚಳಕ್ಕೆ ಆಯಾ ವಿವಿಗಳಿಗೆ ಕಾಲೇಜುಗಳು ಪ್ರಸ್ತಾವನೆಯನ್ನು ಸಲ್ಲಿಸಬೇಕಾಗಿತ್ತು. ಸ್ಥಳೀಯ ವಿಚಾರಣಾ ಸಮಿತಿ ಪರಿಶೀಲನೆ ನಡೆಸಿದ ನಂತರ ನಿರ್ಧಾರ ಮಾಡುತ್ತಿತ್ತು. ಆದರೆ, ಈ ವರ್ಷದಿಂದ ಕಾಲೇಜುಗಳು ಸೀಟು ಹೆಚ್ಚಳಕ್ಕೆ ನೇರವಾಗಿ ಎಐಸಿಟಿಇಗೆ ಪ್ರಸ್ತಾವನೆ ಸಲ್ಲಿಸಿದ್ದವು. ಇದಕ್ಕೆ ರಾಜ್ಯ ಸರಕಾರ ವಿರೋಧ ವ್ಯಕ್ತಪಡಿಸಿ ಎಐಸಿಟಿಇಗೆ ಪತ್ರವನ್ನೂ ಬರೆದಿತ್ತು. ಆದರೆ, ಯಾವುದೇ ಪ್ರಯೋಜನ ಕಾಣಲಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳ ಕಾಲೇಜುಗಳು ಬೇಡಿಕೆ ಅನುಗುಣವಾಗಿ ಇನ್‍ಟೇಕ್ ಹೆಚ್ಚಿಸಿಕೊಂಡ ಪರಿಣಾಮ, ಈ ವರ್ಷ ಸೀಟುಗಳ ಸಂಖ್ಯೆಯಲ್ಲೂ ಆ ಏರಿಕೆ ಕಾಣುತ್ತಿದೆ.
ಯಾವುದರಲ್ಲಿ ಎಷ್ಟು ಸೀಟು?
ಕೆಇಎಗೆ ಲಭ್ಯವಾಗಿರುವ 62,930 ಸೀಟುಗಳ ಪೈಕಿ ಖಾಸಗಿ ಕಾಲೇಜುಗಳಲ್ಲಿ 38,024 ಮತ್ತು ಖಾಸಗಿ ವಿವಿಗಳಲ್ಲಿ 9,988 ಸೀಟುಗಳು ಸೇರಿವೆ. ಇದರಲ್ಲಿ 746 ಸೀಟುಗಳು ಆರ್ಕಿಟೆಕ್ಟರ್‍ಗೆ ಸಂಬಂಧಿಸಿದ್ದಾಗಿವೆ. 2023ರಲ್ಲಿ ಖಾಸಗಿ ಕಾಲೇಜುಗಳಲ್ಲಿ 36,761 ಮತ್ತು ಖಾಸಗಿ ವಿವಿಯಲ್ಲಿ 8,460 ಸೀಟುಗಳಿದ್ದವು. ಇವೆರಡರಿಂದ 2,795 ಸೀಟುಗಳು ಹೆಚ್ಚಾಗಿವೆ.

- Advertisement -

Latest Posts

Don't Miss