Friday, August 29, 2025

Latest Posts

ತಿರುಪತಿ ತಿಮ್ಮಪ್ಪನ ಲಾಡು ಪ್ರಸಾದದ ಬಗ್ಗೆ ನಿಮಗೆ ಗೊತ್ತಿರದ ಸಂಗತಿ..!

- Advertisement -

ಭಾರತದಲ್ಲಿರುವ ಪ್ರಖ್ಯಾತ ಮತ್ತು ಶ್ರೀಮಂತ ದೇಗುಲಗಳಲ್ಲಿ ತಿರುಪತಿ ಕೂಡ ಒಂದು. ಜೀವನದಲ್ಲಿ ಒಮ್ಮೆಯಾದರೂ ತಿರುಪತಿಗೆ ಹೋಗಿ ಬರಬೇಕು ಅಂತಾ ಹೇಳ್ತಾರೆ. ಅಷ್ಟು ಮಹತ್ವ ಹೊಂದಿದ ದೇವಸ್ಥಾನವದು.

ಆಂಧ್ರಪ್ರದೇಶದ ಚಿತ್ತೂರಿನಲ್ಲಿರುವ ತಿರುಪತಿ ದೇಗುಲ ಪುರಾತನ ದೇವಾಲಯಗಳಲ್ಲೊಂದು. ಇಲ್ಲಿ ಜಾತಿ ಭೇದವಿಲ್ಲದೇ, ದೇಶ -ವಿದೇಶಗಳಿಂದ ಭಕ್ತರು ಆಗಮಿಸಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುತ್ತಾರೆ.

ತಿರುಪತಿಯಲ್ಲಿ ಫೇಮಸ್ ಅಂದ್ರೆ ಲಡ್ಡು ಪ್ರಸಾದ. ಲಡ್ಡು ಪ್ರಸಾದ ತೆಗೆದುಕೊಳ್ಳದೇ ತಿರುಪತಿಗೆ ಹೋಗಿ ಬಂದ್ರೆ, ಅದಕ್ಕೆ ಅರ್ಥವೇ ಇರೋದಿಲ್ಲ. ಅಂತೆಯೇ, ತಿರುಪತಿಯ ತಿರ್ಥಯಾತ್ರೆ ಪರಿಪೂರ್ಣಗೊಳ್ಳುವುದಿಲ್ಲ. ಈ ಲಾಡುವಿನ ಬಗ್ಗೆ ಇರುವ ಕೆಲವು ಕುತೂಹಲಕಾರಿ ಸಂಗತಿ ನಾವು ನಿಮಗೆ ಹೇಳ್ತೀವಿ.

ತಿರುಪತಿ ಲಡ್ಡುವಿಗೆ ಮುನ್ನೂರು ವರ್ಷಗಳ ಇತಿಹಾಸವಿದ್ದು, ಆಗಸ್ಟ್ 2 1516ರಲ್ಲಿ ಲಾಡು ಪ್ರಸಾದ ವಿತರಿಸಲು ಶುರು ಮಾಡಲಾಯಿತು. ತಿರುಪತಿ ಪ್ರಸಾದವನ್ನು ಮತ್ಯಾರೂ ನಕಲು ಮಾಡಬರದೆಂದು 1999ರಲ್ಲಿ ಪೇಟೆಂಟ್ ತೆಗೆದುಕೊಳ್ಳಲಾಯಿತು.

ಇಲ್ಲಿ ತಯಾರಾಗುವ ಲಾಡು ಬೆಳಗ್ಗಿನ ಪೂಜೆಯಲ್ಲಿ ತಿಮ್ಮಪ್ಪನಿಗೆ ನೈವೇದ್ಯದ ರೂಪದಲ್ಲಿ ಅರ್ಪಿಸಲಾಗುತ್ತದೆ. ದೇವಸ್ಥಾನದ ಬಳಿಯೇ ಇರುವ ಪೋತು ಎಂಬ ಪಾಕಶಾಲೆಯಲ್ಲಿ ಈ ಲಾಡು ಪ್ರಸಾದವನ್ನ ಪರಂಪರಾಗತವಾಗಿ ಬಂದ ಅರ್ಚಕರು ತಯಾರಿಸುತ್ತಾರೆ. ಪ್ರಸಾದದ ರೂಪದಲ್ಲಿ ಸಿಗುವ ಈ ಲಡ್ಡುವನ್ನು, ಮಾರಾಟ ಕೂಡ ಮಾಡಲಾಗುತ್ತದೆ. ಕೇವಲ ಈ ಪ್ರಸಾದದಿಂದಲೇ ದೇವಸ್ಥಾನಕ್ಕೆ ಕೋಟಿ ಕೋಟಿ ಆದಾಯ ಬರುತ್ತದೆ.

ಇನ್ನು ತಿರುಪತಿಯಲ್ಲಿ ಪ್ರತಿದಿನ 2ಲಕ್ಷದ 8 ಸಾವಿರ ಲಡ್ಡುಗಳು ತಯಾರಾಗುತ್ತದೆ. ಈ ಲಡ್ಡು ತಯಾರಿಕೆಗೆ 10 ಟನ್‌ಗಳಷ್ಟು ಕಡಲೆ ಹಿಟ್ಟು, 10 ಟನ್ ಸಕ್ಕರೆ, 700 ಕೆಜಿ ಗೋಡಂಬಿ, 150 ಕೆಜಿ ಏಲಕ್ಕಿ, 300ರಿಂದ 500 ಲೀಟರ್ ತುಪ್ಪ, 500 ಕೆಜಿ ಕಲ್ಲುಸಕ್ಕರೆ ಮತ್ತು 540 ಕೆಜಿ ಒಣದ್ರಾಕ್ಷಿ ಬಳಸಲಾಗುತ್ತದೆ.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss