Friday, November 14, 2025

Latest Posts

Shivamogga : ಅಬ್ಬಿ ಫಾಲ್ಸ್​​ನಲ್ಲಿ ನಾಪತ್ತೆಯಾಗಿದ್ದ ಟೆಕ್ಕಿ ಮೃತದೇಹ ಪತ್ತೆ!

- Advertisement -

ಶಿವಮೊಗ್ಗ: ಅಬ್ಬಿ ಫಾಲ್ಸ್‌ ವೀಕ್ಷಣೆಗೆ ಹೋಗಿದ್ದ ಬೆಂಗಳೂರಿನ 26 ವರ್ಷದ ಸಾಫ್ಟ್‌ವೇರ್ ಉದ್ಯೋಗಿ ಕಾಲು ಜಾರಿ ಬಿದ್ದಿದ್ದರು. ವಿನೋದ್ ಎಂಬಾತ ಟೆಕ್ಕಿ ಫೋಟೋಗೆ ಪೋಸ್‌ ಕೊಡೋ ಜೋಶ್‌ನಲ್ಲಿ ಮೈಮರೆತಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಇದೀಗ ಮೃತ ವಿನೋದ್ ಮೃತದೇಹ ಪತ್ತೆಯಾಗಿದೆ.
ನಿನ್ನೆ ಮಧ್ಯಾಹ್ನ ಬೆಂಗಳೂರಿನಿಂದ 12 ಜನರ ತಂಡ ಕೊಡಚಾದ್ರಿಯಿಂದ ಹೊಸನಗರ ತಾಲೂಕಿನ ಯಡೂರು ಸಮೀಪದ ಅಬ್ಬೆ ಫಾಲ್ಸ್‌ಗೆ ತೆರಳಿದ್ದರು. 3 ಗಂಟೆ ಸುಮಾರಿಗೆ ಫಾಲ್ಸ್‌ ಬಳಿ ತೆರಳಿದ್ದಾಗ ವಿನೋದ್ ಕಾಲು ಜಾರಿ ಬಿದ್ದಿದ್ದಾನೆ.
ನಾಪತ್ತೆಯಾಗಿರುವ ವಿನೋದ್​ಗಾಗಿ ಅಗ್ನಿಶಾಮಕ ದಳ ಹಾಗೂ ನಗರ ಠಾಣೆ ಪೊಲೀಸರು ಹುಡುಕಾಟ ನಡೆಸಿದ್ದರು. ಕತ್ತಲೆಯಾಗಿರುವ ಕಾರಣ ಪತ್ತೆ ಕಾರ್ಯಕ್ಕೆ ತೊಡಕು ಉಂಟಾಗಿತ್ತು. ನಿನ್ನೆಯಿಂದ ನಿರಂತರ ಶೋಧ ಕಾರ್ಯಾಚರಣೆ ನಡೆದಿದ್ದು ಇದೀಗ ಅಂತ್ಯವಾಗಿದೆ. ನಿರಂತರ 18 ಗಂಟೆ ಶೋಧ ಕಾರ್ಯಾಚರಣೆ ಬಳಿಕ ವಿನೋದ್ ಮೃತದೇಹ ಪತ್ತೆ ಹಚ್ಚಲಾಗಿದೆ.
ಅಬ್ಬಿ ಫಾಲ್ಸ್‌ನಲ್ಲಿ ಜಾರಿ ಹೋದ ವಿನೋದ್ ಮೃತದೇಹ ಕೊಚ್ಚಿ ಹೋದ ಮೇಲೆ ಬಹಳ ದೂರ ಹೋಗಿತ್ತು. ರಕ್ಷಣಾ ಸಿಬ್ಬಂದಿ ರಸ್ತೆ ಕಿರಿದಾದ ಹಿನ್ನೆಲೆಯಲ್ಲಿ ಕಂಬಕ್ಕೆ ಮೃತದೇಹವನ್ನು ಕಟ್ಟಿ ತೆಗೆದುಕೊಂಡು ಬಂದಿದ್ದಾರೆ.
ಕಳೆದ ವರ್ಷ ಪ್ರವಾಸಿಗನೊಬ್ಬ ಮೃತಪಟ್ಟ ಹಿನ್ನೆಲೆಯಲ್ಲಿ ಅಬ್ಬಿ ಜಲಪಾತದ ಮಾರ್ಗವನ್ನು ಕಂದಕ ತೋಡಿ ನಿರ್ಬಂಧಿಸಲಾಗಿತ್ತು. ಆದರೆ, ಯುವಕರು ವಾಹನ ನಿಲ್ಲಿಸಿ ಒಂದೂವರೆ ಕಿ.ಮೀ ನಡೆದು ಜಲಪಾತ ತಲುಪಿದ್ದರು. ಬೆಂಗಳೂರಿನಿಂದ ಅಬ್ಬಿ ಫಾಲ್ಸ್‌ ಪ್ರವಾಸಕ್ಕೆ ಬಂದಿದ್ದ 12 ಪ್ರವಾಸಿಗರ ಪೈಕಿ ಇದೀಗ ಬಳ್ಳಾರಿ ಮೂಲದ ವಿನೋದ್ ಸಾವನ್ನಪ್ಪಿದ್ದು ನಿರಂತರ ಕಾರ್ಯಾಚರಣೆ ಬಳಿಕ ವಿನೋದ್ ಮೃತದೇಹ ಪತ್ತೆ ಹಚ್ಚಲಾಗಿದೆ.

- Advertisement -

Latest Posts

Don't Miss