ಆದಾಯಕ್ಕೂ ಮೀರಿ ಆಸ್ತಿ ಸಂಪಾದನೆ ಮಾಡಿದ ಆರೋಪದ ಮೇಲೆ ಪರಪ್ಪನ ಅಗ್ರಹಾರದ ಪಾಲಾಗಿರುವ ಶಶಿಕಲಾ ನಟರಾಜನ್, ಕೆಲ ದಿನಗಳಲ್ಲೇ ಬಿಡುಗಡೆಯಾಗ್ತಾರೆ ಎಂಬ ಸುದ್ದಿ ಕೇಳಿಬಂದಿತ್ತು. ಆದ್ರೆ ಈ ವಿಷಯವನ್ನ ಪರಪ್ಪನ ಅಗ್ರಹಾರ ಅಧಿಕಾರಿಗಳು ನಿರಾಕರಿಸಿದ್ದು, ಶೀಘ್ರದಲ್ಲಿ ಶಶಿಕಲಾ ಬಿಡುಗಡೆ ಅಸಾಧ್ಯ ಎಂದಿದ್ದಾರೆ.

ಮುಂದಿನ 30 ದಿನಗಳಲ್ಲಿ ಬಿಡುಗಡೆಯಾಗುವ ಖೈದಿಗಳ ಹೆಸರನ್ನ ಲೀಸ್ಟ್ ಮಾಡಲಾಗಿತ್ತು. ಆದ್ರೆ ಸಧ್ಯಕ್ಕೆ ಆ ಲೀಸ್ಟ್‌ನಲ್ಲಿ ಶಶಿಕಲಾ ಹೆಸರನ್ನ ಹಾಕಲಿಲ್ಲವೆನ್ನಲಾಗಿದೆ.
ಮುಂದಿನ 30 ದಿನಗಳಲ್ಲಿ ಶಶಿಕಲಾ ನಟರಾಜನ್ ಬಿಡುಗಡೆಯಾಗಲಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಈ ಸುದ್ದಿಗೆ ಬ್ರೇಕ್ ಬಿದ್ದಿದೆ. ಕಾರಾಗೃಹದ ನಿಯಮದ ಪ್ರಕಾರ, ಸನ್ನಡತೆ, ಶಿಸ್ತು, ತಿಂಗಳಲ್ಲಿ ಸಿಗುವ ರಜೆ, ಪೆರೋಲ್ ಪಡೆದ ದಿನಗಳನ್ನೆಲ್ಲ ಗಣನೆಗೆ ತೆಗೆದುಕೊಂಡು ಖೈದಿಗಳನ್ನ ಬಿಡುಗಡೆ ಮಾಡಲಾಗುತ್ತದೆ. ಆದ್ರೆ ಈ ಬಾರಿಯ ಖೈದಿಗಳನ್ನ ರಿಲೀಸ್ ಮಾಡುವ ಲೀಸ್ಟ್‌ನಲ್ಲಿ ಶಶಿಕಲಾ ಹೆಸರು ಇಲ್ಲ. ಆಧ್ದರಿಂದ ಶಶಿಕಲಾ ಬಿಡುಗಡೆ ಸದ್ಯ ಅಸಾಧ್ಯ ಎನ್ನಲಾಗಿದೆ.
2017ರಲ್ಲಿ ಶಶಿಕಲಾ ಅವರನ್ನು ಆದಾಯಕ್ಕೂ ಮೀರಿ ಆಸ್ತಿ ಸಂಪಾದನೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿತ್ತು. ಇವರೊಂದಿಗೆ ಇಳವರಸಿ ಮತ್ತು ಸುಧಾಕರನ್ ಕೂಡ ಜೈಲುಪಾಲಾಗಿದ್ದರು.
