Friday, July 11, 2025

Latest Posts

ಯಾರಾಗ್ತಾರೆ ಅವಳಿನಗರದ ಪ್ರಥಮ ಪ್ರಜೆ: ನಾಳೆ ಮೇಯರ್-ಉಪಮೇಯರ್ ಚುನಾವಣೆ..!

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 23ನೇ ಅವಧಿಗೆ ಮೇಯರ್, ಉಪಮೇಯರ್ ಆಯ್ಕೆಗೆ ಇನ್ನೇನು ಒಂದು ದಿನ ಬಾಕಿ ಉಳಿದಿದೆ. ಬಣ ರಾಜಕಾರಣದಲ್ಲಿ ಯಾರಾಗುತ್ತಾರೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಪ್ರಥಮ ಪ್ರಜೆ ಎಂಬುವುದು ಯಕ್ಷ ಪ್ರಶ್ನೆಯಾಗಿದೆ.

ಮಹಾನಗರ ಪಾಲಿಕೆ ಮೇಯರ್ ,ಉಪಮೇಯರ್ ಸ್ಥಾನಕ್ಕೆ ನಾಳೆ‌ ಚುನಾವಣೆ ನಡೆಯಲಿದೆ. ಮೇಯರ್ ಸ್ಥಾನ ಹಿಂದುಳಿದ ವರ್ಗ ಅ ಪುರುಷ ಹಾಗೂ‌ ಉಪಮೇಯರ್ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿದೆ. ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಸ್ಪಷ್ಟ‌ ಬಹುಮತವಿದೆ. ಮಹಾನಗರ ಪಾಲಿಕೆಯಲ್ಲಿದ್ದಾರೆ 82 ಜನ ಸದಸ್ಯರು. ಇದರಲ್ಲಿ 38 ಬಿಜೆಪಿ ಸದಸ್ಯರಿದ್ದರೆ ಕಾಂಗ್ರೆಸ್ 33, ಜೆಡಿಎಸ್ನಿಂದ ಓರ್ವ, ಪಕ್ಷೇತರ 6 ಹಾಗೂ ಎಂಐಎಂ ನಿಂದ 3 ಜನ ಸದಸ್ಯರಿದ್ದಾರೆ. ಚುನಾಯಿತ 8 ಜನಪ್ರತಿನಿಧಿಗಳು ಕೂಡ ಹಕ್ಕು ಚಲಾಯಿಸಲಿದ್ದಾರೆ. ಕಾಂಗ್ರೆಸ್ ಇಬ್ಬರು, ಬಿಜೆಪಿಯ 6 ಜನ ಮತಚಲಾಯಿಸಲಿದ್ದಾರೆ.

ಇನ್ನೂ ಮ್ಯಾಜಿಕ್‌ನಂಬರ್ 45 ದಾಟಿದವರು ಮೇಯರ್, ಉಪಮೇಯರ್ ಆಗಲಿದ್ದಾರೆ. ಧಾರವಾಡ ‌ಬಿಜೆಪಿಲಿಯಲ್ಲಿದೆ ನಾಲ್ಕು ಬಣಗಳು, ನಾಳೆ ಯಾರ ಬಣಕ್ಕೆ ಮೇಲುಗೈ ಎಂಬುವುದೇ ಮುಂದಿರುವ ಪ್ರಶ್ನೆಯಾಗಿದೆ. ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿಯವರ ಒಂದು ಬಣ, ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ‌ಜಗದೀಶ್ ಶೆಟ್ಟರ್ ಮತ್ತೊಂದು ಬಣ,ಶಾಸಕರಾದ ಮಹೇಶ ಟೆಂಗಿನ‌ಕಾಯಿ‌ ಹಾಗೂ ಅರವಿಂದ ಬೆಲ್ಲದ ಬಣಗಳ ನಡುವೇ ತೀವ್ರ ಪೈಪೋಟಿಯಿದೆ. ತಮ್ಮ ತಮ್ಮ ಬಣದಲ್ಲಿ ಗುರುತಿಸಿಕೊಂಡ ಪಾಲಿಕೆ ಸದಸ್ಯರನ್ನು ಪಟ್ಟಕ್ಕೇರಿಸಲು ನಾಯಕರ ಕಸರತ್ತು ನಡೆಸಿದ್ದು, ಯಾರ ಬಣ ಮೇಲುಗೈ ಸಾಧಿಸಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.

ಟೀಂ ಇಂಡಿಯಾ ಫೈನಲ್​ಗೆ- ರೋಹಿತ್ ಕಣ್ಣೀರು

ಸಿದ್ದರಾಮಯ್ಯ ಎಷ್ಟು ದಿನ ಸಿಎಂ ಆಗಿರ್ತಾರೋ ಗೊತ್ತಿಲ್ಲಾ: ಬಿ.ವೈ. ವಿಜಯೇಂದ್ರ

Karnataka ;ಕೆಜಿಎಫ್ ಹೊಸ ಚಾಪ್ಟರ್ ಶುರು ;ಮತ್ತೆ ಶುರುವಾಗಲಿದೆ ಚಿನ್ನದ ಬೇಟೆ

- Advertisement -

Latest Posts

Don't Miss