Thursday, February 13, 2025

Latest Posts

ಟೀಂ ಇಂಡಿಯಾ ಫೈನಲ್​ಗೆ- ರೋಹಿತ್ ಕಣ್ಣೀರು

- Advertisement -

ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿ ಫೈನಲ್‌ಗೆ ಪ್ರವೇಶ ಪಡೆದಿದೆ. ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರೋಹಿತ್ ಬಳಗ 68 ರನ್‌ಗಳ ಜಯ ಸಾಧಿಸಿದೆ.
ಮಳೆ ಅಡಚಣೆ ನಡುವೆ ಆರಂಭವಾದ ಪಂದ್ಯದಲ್ಲಿ ಟಾಸ್‌ ಗೆದ್ದು ಇಂಗ್ಲೆಂಡ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟ್‌ ಮಾಡಿದ ಟೀಂ ಇಂಡಿಯಾ 171 ರನ್‌ ಗಳಿಸಿತ್ತು. 172 ರನ್‌‌ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್‌, 103 ರನ್​ಗೆ‌ ಎಲ್ಲಾ ವಿಕೆಟ್​ ಕಳೆದುಕೊಂಡಿತು.


ನಾಯಕ ರೋಹಿತ್ ಶರ್ಮಾ 57 ರನ್, ಸೂರ್ಯಕುಮಾರ್ ಯಾದವ್ 47 ರನ್, ಹಾರ್ದಿಕ್ ಪಾಂಡ್ಯ 23 ರನ್ ಮತ್ತು ರವೀಂದ್ರ ಜಡೇಜಾ ಔಟಾಗದೆ 17 ರನ್ ಗಳಿಸಿದ್ರು. ಇಂಗ್ಲೆಂಡ್ ಪರ ಕ್ರಿಸ್ ಜೋರ್ಡಾನ್ ಮೂರು ವಿಕೆಟ್ ಪಡೆದರು.
ಇಂಗ್ಲೆಂಡ್ ಪರ ಕ್ಯಾಪ್ಟನ್ ಜೋಸ್ ಬಟ್ಲರ್ 23, ಹ್ಯಾರಿ ಬ್ರೂಕ್ 25 ಹಾಗೂ ಜೋಫ್ರಾ ಅರ್ಚರ್ 21 ರನ್ ಗಳಿಸಿದ್ರು. ಅಕ್ಸರ್ ಪಟೇಲ್ ಹಾಗೂ ಕುಲ್​ದೀಪ್ ಯಾದವ್ ತಲಾ 3 ವಿಕೆಟ್ ಪಡೆಯುವ ಮೂಲಕ ಟೀಂ ಇಂಡಿಯಾಕ್ಕೆ ಗೆಲುವು ತಂದುಕೊಟ್ರು.
ಭಾರತ ಫೈನಲ್​ ಪ್ರವೇಶಿಸುತ್ತಿದ್ದಂತೆ ನಾಯಕ ರೋಹಿತ್​ ಶರ್ಮ ಅವರು ಸಂತಸದಲ್ಲಿ ಆನಂದಭಾಷ್ಪ ಸುರಿಸಿದರು. 2007ರಿಂದ ಎಲ್ಲ ಟಿ20 ವಿಶ್ವಕಪ್ ಆಡಿರುವ ರೋಹಿತ್​ ತಮ್ಮ ನಾಯಕತ್ವದಲ್ಲಿ ಇದೇ ಮೊದಲ ಬಾರಿಗೆ ತಂಡ ಫೈನಲ್​ ಪ್ರವೇಶಿಸಿತು. ಜತೆಗೆ 10 ವರ್ಷಗಳ ಬಳಿಕ ಭಾರತ ತಂಡ ಈ ಟೂರ್ನಿಯಲ್ಲಿ ಪ್ರಶಸ್ತಿ ಸುತ್ತಿಗೇರಿತು. ಈ ಎಲ್ಲ ಖುಷಿಯಿಂದ ರೋಹಿತ್​ ಕಣ್ಣೀರು ಸುರಿಸಿದರು. ರೋಹಿತ್​ ಕಣ್ಣೀರು ಹಾಕುತ್ತಿದ್ದ ವೇಳೆ ಸಹ ಆಟಗಾರ ವಿರಾಟ್​ ಬೆನ್ನು ತಟ್ಟಿ ಬೆಂಬಲ ಸೂಚಿಸಿದ್ದು ಕೂಡ ಈ ವಿಡಿಯೊದಲ್ಲಿ ನೋಡಬಹುದಾಗಿದೆ.

- Advertisement -

Latest Posts

Don't Miss