Thursday, November 27, 2025

Latest Posts

‘ಸದ್ಯಕ್ಕೆ ಕೊರೋನಾ ನಿಲ್ಲೋದಲ್ಲಾ, ಸೋಂಕಿತರಿಗೆ ನಾವು ಧೈರ್ಯ ತುಂಬಬೇಕು’

- Advertisement -

ಮಂಡ್ಯ: ಮಂಡ್ಯದಲ್ಲಿಂದು ಜಿಲ್ಲಾಡಳಿತಕ್ಕೆ ಸಮರ್ಥನಂ ಸಂಸ್ಥೆ ವತಿಯಿಂದ ಪಿಪಿಇ ಕಿಟ್ ವಿತರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡರ ಮೂಲಕ ಜಿಲ್ಲಾಡಳಿತಕ್ಕೆ ಪಿಪಿಇ ಕಿಟ್ ಹಸ್ತಾಂತರ ಮಾಡಲಾಯಿತು.

ಪಿಪಿಇ ಕಿಟ್, ಮಾಸ್ಕ್, ಹ್ಯಾಂಡ್ ಗ್ಲೌಸ್, ಮಲ್ಟಿಪರ್ಪಸ್ ಕ್ಲೀನರ್, ಐಸಿಯು ಬೆಡ್ ಸೇರಿದಂತೆ, ಕೋವಿಡ್ -19 ತಡೆಗಟ್ಟಲು ಬೇಕಾದ ಇನ್ನಿತರ ಸಾಮಗ್ರಿಗಳನ್ನು ಸಮರ್ಥನಂ ಸಂಸ್ಥೆ ಮಂಡ್ಯ ಜಿಲ್ಲಾಡಳಿತಕ್ಕೆ ನೀಡಿದೆ.

ಇನ್ನು ಈ ವೇಳೆ ಮಾತನಾಡಿದ ಸಚಿವ ನಾರಾಯಣ ಗೌಡ, ಸಮರ್ಥನಂ ಸಂಸ್ಥೆ ವತಿಯಿಂದ 28 ಲಕ್ಷದ ಸಾಮಾಗ್ರಿ ನೀಡಿದ್ದಾರೆ. ಕೊರೋನಾ ಮಹಾಮಾರಿ ನಿಯಂತ್ರಣಕ್ಕೆ ಸಹಕಾರಿಯಾಗಿದ್ದಾರೆ. ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಅಭಿನಂದನೆ ಸಲ್ಲಿಸುತ್ತೇನೆ.

ಈ ಸಂದರ್ಭದಲ್ಲಿ ಕೊರೋನಾ ವಾರಿಯರ್ಸ್ ಕೆಲಸ ಮಾಡ್ತಿದ್ದಾರೆ. ಡಾಕ್ಟರ್ ಹಾಗೂ ಅಧಿಕಾರಿಗಳು ಕೆಲಸ ಮಾಡ್ತಿದ್ದಾರೆ. ಮಂಡ್ಯ ಜಿಲ್ಲೆ ಮೊದಲ ಸ್ಥಾನಕ್ಕೆ ಹೋಗಿತ್ತು. ಜಿಲ್ಲಾಧಿಕಾರಿಗಳು ಕೆಲಸ ಮಾಡಿ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ತಂದಿದ್ದಾರೆ ಎಂದಿದ್ದಾರೆ.

https://youtu.be/-5XbOdPlrR4

ಅಲ್ಲದೇ, ಸದ್ಯಕ್ಕೆ ಕೊರೋನಾ ನಿಲ್ಲೋದಲ್ಲಾ. ಹೊರಗಿನಿಂದ ಬಂದಂತಹವರಿಂದ ಸೋಂಕು ಇದು. ಕರ್ನಾಟಕದಲ್ಲಿ ನೊಡ್ತಿದ್ದೆವೆ ಯಾವ ಪರಿಸ್ಥಿತಿ ಇದೆ ಅಂತ. ಎಲ್ಲಿಂದಾರೂ ಬರಲಿ ಅವರಿಗೆ ಧೈರ್ಯ ತುಂಬಬೇಕು. ಸಿಎಂ ಪುತ್ರ ವಿಜೇಯೇಂದ್ರರವರು 2ತಿಂಗಳು ಮೆಡಿಸಿನ್‌ಗಳ ದಾನ ಮಾಡಿದ್ದಾರೆ. ಎಲ್ಲಾ ದಾನಿಗಳು ದಾನ ಮಾಡ್ತಿದ್ದಾರೆ. ಅವರಿಗೆಲ್ಲಾ ನನ್ನ ಧನ್ಯವಾದಗಳು ಎಂದು ನಾರಾಯಣಗೌಡ ತಿಳಿಸಿದ್ದಾರೆ.
ಪ್ರವೀಣ್ ಕುಮಾರ್ ಜಿ.ಟಿ, ಕರ್ನಾಟಕ ಟಿವಿ, ಮಂಡ್ಯ

- Advertisement -

Latest Posts

Don't Miss