- Advertisement -
Hassan News: ಹಾಸನ: ಪೊಲೀಸ್ ಪೇದೆಯಿಂದ ಎಸ್ಪಿ ಕಚೇರಿ ಎದುರೇ ಪತ್ನಿಯನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸ್ ಪೇದೆಯ ಮಗ ಸಂಯಮ್ ಹೇಳಿಕೆ ನೀಡಿದ್ದಾನೆ.
ಮೊನ್ನೆ ನನ್ನ ತಾಯಿಗೆ ನಮ್ಮ ಅಪ್ಪ ಸ್ಕೂಟಿಯಲ್ಲಿ ಬೇಕಂತಲೇ ಗುದ್ದಿದ್ದ. ಹೆಲ್ಮೆಟ್, ಬ್ಯಾಟ್ ನಲ್ಲಿ ಹೊಡೆಯಲು ಮುಂದಾಗಿದ್ದ. ನಾನು ಮತ್ತು ನನ್ನ ತಮ್ಮ ಅವರನ್ನ ತಡೆದಿದ್ದೆವು. ಏಳೆಂಟು ವರ್ಷದ ಹಿಂದೆಯೇ ಅಕ್ರಮ ಸಂಬಂಧ ವಿಚಾರವಾಗಿ ಇಬ್ಬರಿಗೂ ಗಲಾಟೆ ನಡೆದಿತ್ತು.
ನಮ್ಮಪ್ಪನ ಅಕ್ರಮ ಸಂಬಂಧ ಬಿಡು ಎಂದು ಹೇಳಿದ್ದರೂ ಬಿಟ್ಟಿರಲಿಲ್ಲ. ಈ ಸಂಬಂಧ ಪೊಲೀಸ್ ಠಾಣೆಗೂ ಹೋಗಿದ್ದರು. ನೆನ್ನೆಯೂ ಎಸ್ಪಿಯವರಿಗೆ ದೂರು ನೀಡುತ್ತೇನೆ ಎಂದು ನಮ್ಮಮ್ಮ ಹೋಗಿದ್ದರು. ಇದನ್ನ ತಿಳಿದ ನಮ್ಮ ಅಪ್ಪ ನಮಗೆ ಅವಳನ್ನ ಸಾಯಿಸುತ್ತೇನೆ ಎಂದು ಹೋದರು. ನಾವು ಇರ್ಲಿ ಇರದೇ ಇರಲಿ ನೀವು ಚನ್ನಾಗಿ ಓದಿ ಎಂದು ಹೇಳಿ ಹೋದ ಎಂದು ಸಂಯಮ್ ಹೇಳಿದ್ದಾರೆ.
- Advertisement -