ಅಪ್ಪುವಿಗಾಗಿ ಬರೆದಿದ್ದ ಭೂಮಿಗೆ ಬಂದ ಭಗವಂತ ಹಾಡು ರಿಲೀಸ್ ಮಾಡಿದ ಅಪ್ಪ, ಅಮ್ಮ, ಅಪ್ಪು ತಂಡ

Movie News: ಸ್ಯಾಂಡಲ್‌ವುಡ್ ನಟ, ಅತ್ಯುತ್ತಮ ವ್ಯಕ್ತಿತ್ವದ ವ್ಯಕ್ತಿ ಪುನೀತ್ ರಾಜ್‌ಕುಮಾರ್ ನಮ್ಮನ್ನು ಅಗಲಿ ಮೂರು ವರ್ಷಗಳೇ ಆಯ್ತು. ಆದರೂ ಕೂಡ ಅವರ ನೆನಪು ನಮ್ಮನ್ನು ಬಿಟ್ಟಿಲ್ಲ.

ಅಪ್ಪು ಸಮಾಧಿಯನ್ನು ನೋಡಲು ಎಷ್ಟೋ ಅಭಿಮಾನಿಗಳು, ದೂರದೂರದ ಊರಿಂದ ಇಂದಿಗೂ ಬೆಂಗಳೂರಿನ ಕಂಠೀರವ ಸ್ಟುಡಿಯೋಗೆ ಬರುತ್ತಿದ್ದಾರೆ. ಅಲ್ಲದೇ, ಅಪ್ಪು ಸಮಾಧಿ ಬಳಿ, ಹೂವು, ಫೋಟೋ, ಟೀ ಶರ್ಟ್ ಸೇರಿ, ಇನ್ನೂ ಹಲವು ವ್ಯಾಪಾರಿಗಳು ಅಪ್ಪು ಹೆಸರಿನಲ್ಲಿ ಇಂದಿಗೂ ವ್ಯಾಪಾರ ಮಾಡಿ, ಮನೆ ನಡೆಸುತ್ತಿದ್ದಾರೆ.

ಹೀಗೆ ಮರಣದ ಬಳಿಕವೂ ಇನ್ನೊಬ್ಬರ ಜೀವನ ನಡೆಸಲು ಕಾರಣರಾಗಿರುವ ಅಪ್ಪು ಬಗ್ಗೆ, ಅಪ್ಪ, ಅಮ್ಮ, ಅಪ್ಪು ಚಿತ್ರತಂಡ ಹಾಡೊಂದನ್ನು ರಿಲೀಸ್ ಮಾಡಿದೆ. ಭೂಮಿಗೆ ಬಂದ ಭಗವಂತ ಅನ್ನೋ ಟೈಟಲ್ ಇರೋ ಈ ಹಾಡನ್ನು ವಿಜಯ್ ಕುಮಾರ್ ಬರೆದಿದ್ದು, ವಿಜಯ್ ಹರಿತ್ಸಾ ಕಂಪೋಸ್ ಮಾಡಿದ್ದಾರೆ. ಸರಿಗಮಪ ಖ್ಯಾತಿಯ ಸುನೀಲ್ ಈ ಹಾಡಿಗೆ ಕಂಠದಾನ ಮಾಡಿದ್ದಾರೆ.

ಭೂಮಿಗೆ ಬಂದ ಭಗವಂತ, ಭಕ್ತರನ್ನು ಬಿಟ್ಟು ಹೊರೇಟಬುಟ್ಟಾ, ಅಭಿಮಾನಿಗಳ ಮನಸಲಿ ನೀ ಶಾಶ್ವತ, ಎಲ್ಲರ ಮನೆ ಮನೆಯಲಿ ದೇವರಾದ ಪುನೀತ ಎಂದು ಹಾಡು ಬರೆಯಲಾಗಿದೆ. ಅಪ್ಪು ಫ್ಯಾನ್ಸ್ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.

Karnataka TV Impact: ನಿಷೇಧಿತ ಪ್ಲಾಸ್ಟಿಕ್ ಗೋಡೌನ್ ಮೇಲೆ ಹು-ಧಾ ಪಾಲಿಕೆ ಅಧಿಕಾರಿಗಳಿಂದ ದಾಳಿ

ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಸ್ಥಾನ ಡಿಕೆಶಿಗೆ ಬಿಟ್ಟುಕೊಡಿ: ಡಾ.ಕೆ.ಸುಧಾಕರ್

World cup : ವಿಶ್ವಕಪ್ ಗೆಲುವಿಗೆ ಈ ಕನ್ನಡಿಗನೂ ಕಾರಣ!

About The Author