ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ನಿವಾಸದ ಮೇಲೆ ಇ.ಡಿ.ಅಧಿಕಾರಿಗಳು ದಾಳಿ ನಡೆಸಿದ್ದು, ವಿಚಾರಣೆ ನಡೆಸಿದ್ದಾರೆ. ಸ್ಟರ್ಲಿಂಗ್ ಬಯೋಟೆಕ್ ಲಿಮಿಟೆಡ್ ಗ್ರೂಪ್‌ನ ಬ್ಯಾಂಕ್ ಸಾಲದ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಯಿತು.

ಈ ಹಿಂದೆ ವಿಚಾರಣೆಗೆ ಕರೆದಾಗ ಅಹ್ಮದ್ ಪಟೇಲ್ ಅನಾರೋಗ್ಯದ ಕಾರಣ ಹೇಳಿದ್ದರು. ಆದ್ದರಿಂದ ಇ.ಡಿ.ಅಧಿಕಾರಿಗಳನ್ನು ಮನೆಗೆ ಕಳುಹಿಸಲಾಗುತ್ತೆ ಎಂದು ಅಹ್ಮದ್ ಪಟೇಲ್‌ಗೆ ಮೊದಲೇ ಸೂಚಿಸಲಾಗಿತ್ತು.
5000 ಕೋಟಿ ರೂಪಾಯಿ ಬ್ಯಾಂಕ್ ಸಾಸ ಪಡೆದು ವಂಚಿಸಿದ್ದಾರೆಂಬ ಆರೋಪದಡಿ ಸ್ಟೆರ್ಲಿಂಗ್ ಬಯೋಟೆಕ್ ಕಂಪನಿ ಪ್ರಮೋಟರ್ಗಳಾದ ಸಂದೇಸರ್ ಮನೆಜನರ ಮೇಲೆ ಕೇಸ್ ದಾಖಲಾಗಿತ್ತು. ಇವರನ್ನ ವಿಚಾರಣೆ ನಡೆಸುವ ವೇಳೆ ಅಹ್ಮದ್ ಪಟೇಲ್ ಮತ್ತು ಅಳಿಯ ಕೂಡ ಈ ವಿಷಯದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿದ್ದರು.
ಈ ವಿಚಾರವಾಗಿ ಸಿಬಿಐ ತನಿಖೆ ಬೆನ್ನಲ್ಲೇ ಇ.ಡಿ. ಪ್ರಕರಣ ದಾಖಲಿಸಿಕೊಂಡಿತ್ತು. ಆದ್ರೆ ಅಹ್ಮದ್ ಪಟೇಲ್ ಈ ಎಲ್ಲ ಆರೋಪವನ್ನು ತಳ್ಳಿಹಾಕಿದ್ದು, ಇದೆಲ್ಲ ರಾಜಕೀಯ ಷಡ್ಯಂತ್ರ ಎಂದಿದ್ದರು.


